ಮಹೀಂದ್ರಾ ಏರೋಸ್ಟ್ರಕ್ಚರ್ ಸ್ಥಾವರ ಲೋಕಾರ್ಪಣೆ
ಕೋಲಾರ: ಏರೋಸ್ಪೇಸ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ವಿಶೇಷ ಮಾನ್ಯತೆ ಗಳಿಸಲು ಮಹೀಂದ್ರಾ ಏರೋಸ್ಪೇಸ್ ಸಂಸ್ಥೆಯು ಸ್ಪೇನ್ನ ಏರೋನೊವಾ ಸಮೂಹದ ಜತೆ ತಂತ್ರಜ್ಞಾನ ಪಾಲುದಾರಿಕೆಗಾಗಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಮಹೀಂದ್ರಾ ಗ್ರೂಪ್ನ ಅಧ್ಯಕ್ಷ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.
ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಕ್ಷೇತ್ರದಲ್ಲಿ ಮಹೀಂದ್ರಾ ಏರೋ ಸ್ಪೇಸ್ನಿಂದ 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಏರೋಸ್ಟ್ರಕ್ಚರ್ ಸ್ಥಾವರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 25 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ಅತ್ಯಾಧುನಿಕ ಸೌಲಭ್ಯದ ಏರೋಸ್ಪೇಸ್ ಸಂಕೀರ್ಣ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
ಸೇವಾ ಆಧಾರಿತವಾದ ಈ ನೂತನ ಸ್ಥಾವರದಲ್ಲಿ ಸಿಎನ್ಸಿ ರೂಟಿಂಗ್, ಸ್ಟ್ರೆಟ್ಚ್ ನಿರ್ಮಾಣ, ಬ್ಲೇಡ್ಪ್ರೆಸ್, ಶಾಖೋತ್ಪನ್ನ ಸೌಲಭ್ಯ ಸೇರಿದಂತೆ ದೊಡ್ಡ ಸಂಕೀರ್ಣವಾದ ಪದರು ಶೀಟುಗಳನ್ನು ಒಳಗೊಂಡ ಮೆಟಲ್ ಬಿಡಿ ಭಾಗ ರೂಪಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಮಹೀಂದ್ರಾ ಸಿಸ್ಟೆಕ್ನ ಅಧ್ಯಕ್ಷ ಹೇಮಂತ್ ಲುತ್ರಾ, ಸ್ವೇನ್ನ ಏರೋನೊವಾ ಗ್ರೂಪ್ ಅಧ್ಯಕ್ಷ ಇನಕಿ ಗಂದಸೆಗುಯಿ, ಮಹೀಂದ್ರಾ ಗ್ರೂಪ್ ಸಿಇಒ ಅರವಿಂದ್ ಮೆಹ್ರಾ ಹಾಗೂ ಇತರರು ಇದ್ದರು.