ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವೈಭವದ ರಾಜ್ಯೋತ್ಸವಕ್ಕೆ ಶಾಸಕರ ಕರೆಠಿ

Srinivasa Murthy VN
Updated On : 22 Oct 2013, 1:04 am

ಮುಳಬಾಗಲು: ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸುವುದರೊಂದಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಲು ಶಾಸಕ ಕೊತ್ತೂರು ಜಿ. ಮಂಜುನಾಥ್ ಸೂಚಿಸಿದರು.
ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಗಡಿ ಪ್ರಾಂತ್ಯವಾದ ಮುಳಬಾಗಲು ತಾಲೂಕು ಸೇರಿದಂತೆ ಗ್ರಾಮಗಳಲ್ಲಿ ಕನ್ನಡ ಪರ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ರಾಜ್ಯೋತ್ಸವದಂದು ಉತ್ತಮ ಪಲ್ಲಕ್ಕಿಗಳಿಗೆ ಮೂರು ಬಹುಮಾನ ಮೊದಲನೆ ರು. 10 ಸಾವಿರ, 2ನೇ ರು. 7.5 ಸಾವಿರ ಮತ್ತು ಮೂರನೇ ರು. 5 ಸಾವಿರ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಪಲ್ಲಕ್ಕಿಗಳಿಗೂ ಪ್ರೋತ್ಸಹಕರವಾದ ಬಹುಮಾನ ನೀಡಲಾಗುವುದು ಎಂದರು.
ಕನ್ನಡಪರ ಸಂಘಟನೆಗಳ ಹೋರಾಟಗಾರರು ಮಾತನಾಡಿ, ರಾಜ್ಯೋತ್ಸವದ ದಿನ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಕನ್ನಡದ ಬಾವುಟ ಹಾರಿಸಬೇಕು, ಕಳೆದ ಬಾರಿ ಹಲವಾರು ಇಂಗ್ಲಿಷ್ ಶಾಲೆಗಳು ರಾಜ್ಯೋತ್ಸವ ಆಚರಿಸದ ಕುರಿತು ಈ ಬಾರಿ ಕಾವಲು ಸಮಿತಿ ನೇಮಿಸಲು, ಅಂಗಡಿಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕಿಸಲು ಒತ್ತಾಯಿಸಿದರು.
ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ಮಾತನಾಡಿ, ಈ ಸಲ ಸರ್ಕಾರದ ಸುತ್ತೊಲೆಯಂತೆ ರಾಷ್ಚ್ರ ಧ್ವಜ ಮತ್ತು ಕನ್ನಡ ಧ್ವಜ ಎರಡನ್ನು ಹಾರಿಸಬೇಕಿದೆ ಎಂದರು. ಎನ್. ಜಗದೀಶ್, ಮು.ಕೃ. ಪದ್ಮನಾಭರಾವ್, ಎನ್. ಜನಾರ್ಧನ್, ಇ.ಶ್ರೀನಿವಾಸಗೌಡ, ಜೆಮಿನಿ ರಮೇಶ್, ಭಜರಂಗದಳ ಚಲಪತಿ, ಪುರಸಭೆ ಸದಸ್ಯ ಜಗಮೋಹನ್‌ರೆಡ್ಡಿ, ಅಟೋ ಮಂಜು, ಕಗ್ಗನಹಳ್ಶಿ ಶ್ರೀನಿವಾಸ್ ಭಾಗವಹಿಸಿದ್ದರು.

'ಅಂಗನವಾಡಿ ಕಾರ್ಯಕರ್ತೆಯರು ಉತ್ತಮ ಕಾರ್ಯ ನಿರ್ವಹಿಸಿ'
ಶಿಡ್ಲಘಟ್ಟ: ಅಂಗವಾಡಿ ಕೇಂದ್ರಗಳಿಗೆ ಬಡವರ ಮಕ್ಕಳೇ ಹೆಚ್ಚಾಗಿ ಬರುವುದರಿಂದ ಅವರನ್ನು ಹೆತ್ತ ತಾಯಿಯಂತೆ ನೋಡಿಕೊಳ್ಳುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದು ಎಂದು ತಾಪಂ ಅಧ್ಯಕ್ಷ ಯರಬಚ್ಚಪ್ಪ ಹೇಳಿದರು. ಫಲೇಚರ್ ಕ್ವಾಟ್ರಸ್‌ನಲ್ಲಿ ಏರ್ಪಡಿಸಿದ್ದ ಅಂಗನವಾಡಿ ಕೇಂದ್ರಗಳ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರವನ್ನು ಶುಚಿಯಾಗಿಡಬೇಕು, ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು. ಕೈವಾರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ಮಾತನಾಡಿ, ಅಂಗವಾಡಿಗೆ ಬರುವ ಮಕ್ಕಳ ತಂದೆ ತಾಯಂದಿರಿಗೆ ಆರೋಗ್ಯದ ಬಗ್ಗೆ ತಿಳುವಳಿಕೆ, ಗರ್ಭಿಣಿಯರಿಗೆ ಸರಿಯಾದ ತಿಳುವಳಿಕೆ ಕೊಟ್ಟು ಸಹಾಯ ಮಾಡುವುದು ಅಂಗನವಾಡಿ ಕಾರ್ಯಕರ್ತೆಯರು ಮಾಡಬೇಕಾದ ಕೆಲಸ ಎಂದು ತಿಳಿಸಿದರು. ಸಾದಿಕ್, ವೆಂಕಟೇಶಪ್ಪ, ಚೆನ್ನರಾಯಪ್ಪ, ಇಬ್ರಾಹಿಂ ಸಾಬ್, ಲಕ್ಷೀದೇವಮ್ಮ, ಅಶ್ವತ್ಥಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement