ಆಟೋ ಚಾಲಕನ ಮೇಲೆ ಪೊಲೀಸ್ ಹಲ್ಲೆ
ಬಂಗಾರಪೇಟೆ: ರೈಲಿನಿಂದ ಬಂದ ಸರಕನ್ನು ಪಡೆಯಲು ರೇಲ್ವೆ ಪೊಲೀಸರಿಗೆ ಮಾಮೂಲಿ ಹಣ ಕೊಡಲಿಲ್ಲವೆಂದು ಆಟೋ ಚಾಲಕನೊಬ್ಬನ ಮೇಲೆ ತೀವ್ರ ಸ್ವರೂಪದ ಹಲ್ಲೆ ಮಾಡಿರುವ ಪ್ರಕರಣ ಮಂಗಳವಾರ ನಡೆದಿದೆ.
ಕೆಜಿಎಫ್ ಸಮೀಪದ ಪಾರಾಂಡಹಳ್ಳಿ ಗ್ರಾಮದ ಆಟೋ ಚಾಲಕ ರಮೇಶ್ ಎಂಬಾತನೆ ರೇಲ್ವೆ ಪೊಲೀಸರ ದೌರ್ಜನ್ಯಕ್ಕೆ ಒಳಗಾಗಿದ್ದು, ಕೆಜಿಎಫ್‌ನಲ್ಲಿರುವ ಖಾಸಗಿ ಗಾರ್ಮೆಂಟ್‌ವೊಂದಕ್ಕೆ ತಮಿಳುನಾಡಿನ ತಿರುಪುರ ನಗರದಿಂದ ಮೂರು ಬಾಕ್ಸ್‌ನಲ್ಲಿ ವೇಸ್ಟ್ ಕಾಟನ್ ತರಿಸಲಾಗಿತ್ತು. ಅದನ್ನು ಪಡೆಯಲು ಗಾಮೆಂರ್ಟ್ಸ್ ಮಾಲೀಕರು ಆಟೋ ಚಾಲಕ ರಮೇಶ್ ಅವರನ್ನು ಕಳುಹಿಸಿಕೊಟ್ಟಿದ್ದರು. ಇವರು ಕಾಟನ್ ಸರಕನ್ನು ಪಡೆಯುವಾಗ ಪೊಲೀಸರು ಮಾಮೂಲಿ ನೀಡಬೇಕು, ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಇದಕ್ಕೆ ಆಟೋ ಚಾಲಕ ರಮೇಶ್ ವಿರೋಧ ವ್ಯಕ್ತಪಡಿಸಿದಾಗ, ಚಾಲಕನನ್ನು ಠಾಣೆಗೆ ಎಳೆದುಕೊಂಡು ಹೋಗುವ ವೇಳೆ ಹಲ್ಲೆ ಮಾಡಿ ವಿದ್ಯುತ್ ಕಂಬಕ್ಕೆ ತಲೆಯನ್ನು ಗುದ್ದಿದರಿಂದ ತಲೆಗೆ ಪಟ್ಟು ಬಿದ್ದು ರಕ್ತಸ್ರಾವದಿಂದ ಬಳಲುತ್ತಿದ್ದರೂ ಪೊಲೀಸರು ಸೌಜನ್ಯಕ್ಕಾದರೂ ಆಸ್ಪತ್ರೆಗೆ ದಾಖಲಿಸಿದೆ ಸ್ಥಳದಿಂದ ಪರಾರಿಯಾದರು. ಪೊಲೀಸರ ದೌರ್ಜನ್ಯ ವಿರುದ್ಧ ಚಾಲಕ ರಮೇಶ್ ರೇಲು ನಿಲ್ದಾಣ ಮುಂದೆ ಒಂಟಿಯಾಗಿ ಕುಳಿತು ಪ್ರತಿಭಟನೆ ಮಾಡಿದರು. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ ನಮಗೂ ಅವನಿಗೂ ಸಂಬಂಧವಿಲ್ಲ, ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ, ಇದೆಲ್ಲಾ ಕಟ್ಟು ಕತೆ ಎಂದು ಸಮಜಾಯಿಷಿ ನೀಡಿದರು. ನಂತರ ಗಾಮೆಂರ್ಟ್ಸ್ ಮಾಲೀಕರು ಬಂದು ಹಲ್ಲೆಗೊಳಗಾಗಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ರೇಲ್ವೆ ಪೊಲೀಸರು ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಹೇಳಿದರು.