ಅಧಿಕಾರಿಗಳು ನಿರ್ಲಕ್ಷ್ಯ; ದಲಿತ ಮುಖಂಡರ ಆಕ್ರೋಶ
ಗೌರಿಬಿದನೂರು: ದಲಿತರ ಕುಂದು ಕೊರತೆ ಸಭೆ ಕೇವಲ ಕಾಟಚಾರಕ್ಕೆ ನಡೆಸಿ, ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೊರುತ್ತಿದ್ದಾರೆಂದು ದಲಿತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದರು.
ಪಟ್ಟಣದ ತಾಪಂ ಆವರಣದ ಸಾಮಾರ್ಥ್ಯ ಸೌಧದಲ್ಲಿ ಏರ್ಪಡಿಸಿದ್ದ ದಲಿತರ ಕುಂದು ಕೊರತೆ ಸಭೆಯಲ್ಲಿ ಎಚ್. ಕಾಲೋನಿ ಗಂಗಾಧರ್ ಮಾತನಾಡಿ, ವಿದ್ಯಾನಿಧಿ ಶಾಲೆಯವರು ಅಕ್ರಮವಾಗಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಹೈಕೋರ್ಟ್ನಲ್ಲಿಯು ಜಮೀನು ಸರ್ಕಾರಕ್ಕೆ ಸೇರಿದ್ದು ಈ ಕೂಡಲೇ ಜಮೀನನ್ನು ಸರ್ಕಾರದವರು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಿದ್ದು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದಕ್ಕೆ ಪುರಸಭಾ ಮುಖ್ಯಾಧಿಕಾರಿಗಳು ಕೋರ್ಟ್ನಿಂದ ಆದೇಶ ಬಂದಿದ್ದು ಇನ್ನೂ 10 ದಿವಸದಲ್ಲಿ ತೆರೆವುಗೊಳಿಸುವುದಾಗಿ ತಿಳಿಸಿದರು.
ವೈ.ಟಿ. ಪ್ರಸನ್ನ ಮಾತನಾಡಿ, ಪುರಸಭೆಯ ವಾಣಿಜ್ಯ ಸಂಕಿರಣ ಹರಾಜು ನ್ಯಾಯ ಬದ್ದವಾಗಿಲ್ಲ ಇದರಿಂದ ದಲಿತರಿಗೆ ಬರುವ ಪಾಲು ವಂಚಿತವಾಗಿದ್ದು ಸರ್ಕಾರ ಅಧಿನಿಯಮ (ಕೆ.ಟಿ.ಪಿ.ಪಿ) 2000 ಮತ್ತು ನಂತರ ಹೊರಡಿಸಿರುವ ಆದೇಶ ಅನುಸಾರ ಪ್ರಕಾರ ಹಂಚಿಕೆ ಆಗಬೇಕು. ಜೊತೆಗೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರವೇ ಹರಾಜು ಮಂಜೂರಾತಿ ಪಡೆಯತಕ್ಕದ್ದು ಆದರೆ ಈ ನಿಯಮ ಪಾಲಿಸದೆ ಮನಸೋ ಇಚ್ಚೆಯಂತೆ ಹಂಚಿಕೆಯಾಗಿದೆ ಎಂದು ತಿಳಿಸಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ರೆಡ್ಡಪ್ಪ, ಪಂಚಾಯಿತಿ ಕಾರ್ಯದರ್ಶಿಗಳು ಹಾಗೂ ಪಿಡಿಒಗಳೊಂದಿಗೆ ಶಾಮೀಲಾಗಿ ತಾಪಂ ವ್ಯವಸ್ಥೆ ಹಾಳುಮಾಡಿದ್ದಾರೆಂದುಆದಿನಾರಾಯಣಪ್ಪ ಆರೋಪಿಸಿದರು.
ತಾಲೂಕು ದಂಡಾಧಿಕಾರಿ ಭಾಸ್ಕರ್, ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ್, ಬಿ.ಕೆ. ನರಸಿಂಹಮೂರ್ತಿ, ಹುದುಗೂರು ಕೆ. ನಂಜುಂಡಪ್ಪ, ಜೆ.ಕೆ. ಗಂಗಾಧರ್, ಎಸ್.ಎಸ್.ಡಿ ಸತ್ಯಾನಾರಾಯಣ, ಕಡಬೂರು ಅಶ್ವತ್ತಪ್ಪ, ಎಲ್.ಎಲ್.ಬಿ ಗಂಗಾಧರ್, ಅಂಜಿನಮೂರ್ತಿ ಇದ್ದರು.