ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲುಬಾಯಿ ಜ್ವರಕ್ಕೆ ಕುರಿ, ಮೇಕೆಗಳೂ ಬಲಿ

Srinivasa Murthy VN
Updated On : 26 Oct 2013, 12:08 pm

ಮುಳಬಾಗಲು: ತಾಲೂಕಿನಲ್ಲಿ ಕಾಲುಬಾಯಿ ಜ್ವರ ಉಲ್ಬಣವಾಗುತ್ತಿದ್ದು ಈವರೆಗೂ ಹಸು, ಎಮ್ಮ, ಎತ್ತುಗಳಿಗೆ ಸೀಮಿತವಾಗಿದ್ದ ರೋಗ ಈಗ ಕುರಿ, ಮೇಕೆಗಳಿಗೆ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಲು ಬಾಯಿ ಜ್ವರದಿಂದ ಜಾನುವಾರಿನ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಹಾಲು ಉತ್ಪಾದನೆಯ ಮೇಲೂ ಇದರ ಪ್ರಭಾವ ಉಂಟಾಗಿದೆ ಎನ್ನುತ್ತಾರೆ ತಾಲೂಕಿನ ಹಾಲು ಉತ್ಪಾದಕರು. ತಾಲೂಕಿನಲ್ಲಿ ಈವರೆಗೂ 400 ಜಾನುವಾರುಗಳು ಸಾವಿಗೀಡಾಗಿವೆ. ಗುಲ್ಬರ್ಗದಿಂದ 11 ಜನ ಪಶುಪಾಲಕ ಇನ್ಸ್ ಪೆಕ್ಟರ್ಗಳು ಆಗಮಿಸಿ ತಾಲೂಕಿನಾದ್ಯಾಂತ ಕಾರ್ಯನಿರತರಾಗಿದ್ದಾರೆ. ಮೃತ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು ದಾಖಲೆ ಪಡೆಯಲಾಗುತ್ತಿದೆ ಎನ್ನುತ್ತಾರೆ ರಮಾನಂದ್. ತಾಲೂಕಿನಲ್ಲಿ 70,000 ಸಾವಿರ ಜಾನುವಾರುಗಳಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ. ಆದರೂ ರೋಗ ಹರಡುತ್ತಿದೆ. ಕಾಲು ಬಾಯಿ ಜ್ವರದ ಜೊತೆಗೆ ಗಂಟಲು ಬೇನೆಯಿಂದ ನರಳುತ್ತಿದ್ದ ಜಾನುವಾರುಗಳು ಹೃದಯ ರೋಗದಿಂದಲೂ ನರಳುತ್ತಿವೆ. ನೆರೆಯ ಆಂಧ್ರಪ್ರದೇಶದ ಸರ್ಕಾರ ರಾಜ್ಯದ ಜಾನುವಾರುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡದಿರಲು ಆದೇಶ ತಂದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಕೋಚಿಮುಲ್ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಕನ್ನಡ ಪ್ರಭದೊಂದಿಗೆ ಮಾತನಾಡಿ, ಹಾಲು ಒಕ್ಕೂಟಕ್ಕೆ ಹಾಲು ಪೊರೈಸುತ್ತಿದ್ದ ಸದಸ್ಯರ ರಾಸುಗಳಿಗೆ ಮಾತ್ರ ಪರಿಹಾರ ನೀಡ ಲಾಗುವುದು, ಹಸುವಿಗೆ 10ಸಾವಿರ ಕರುವಿಗೆ 5ಸಾವಿರ ರು.ಗಳು, ಹಿಂದೆ ಹಾಲು ಪೊರೈಸಿದವರನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಡೇರಿಗಳಿಗೆ ಹಾಲು ಹಾಕದವರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಲಗಾರನ ಬದಲಾವಣೆಗೆ ಒತ್ತಾಯ
ಕೋಲಾರ:
ಕ್ಷುಲ್ಲಕ ಕಾರಣ ಹಾಗೂ ದ್ವೇಷದ ರಾಜಕಾರಣವನ್ನು ಮುಂದಿಟ್ಟುಕೊಂಡು ತಾಲೂಕಿನ ಶಿಂಗೊಂಡಹಳ್ಳಿ ಗ್ರಾಮದ ಹರಿಜನ ಕಾಲೋನಿಗೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ಜಲಗಾರ ಎಸ್.ಎಂ. ಮುನಿರಾಜು ರವರನ್ನು ಹುದ್ದೆಯಿಂದ ತೆಗೆದು ಮತ್ತೊಬ್ಬರನ್ನು ನೇಮಕ ಮಾಡಬೇಕೆಂದು ಗ್ರಾಮದ ಹರಿಜನ ಕಾಲೋನಿಯ ನಿವಾಸಿಗಳು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮದಲ್ಲಿ 20ಕ್ಕೂ ಹೆಚ್ಚು ಜನ ಹರಿಜನರಿದ್ದು, ಜಲಗಾರ ಎಸ್.ಎಂ. ಮುನಿರಾಜು ಸರಿಯಾಗಿ ಕರ್ತವ್ಯ ನಿರ್ವಹಿಸದೇ ಕಾಲ ಕಳೆಯುತ್ತಿದ್ದಾರೆ. ನೀರಿನ ಟ್ಯಾಂಕ್ಗಳನ್ನು ಸರಿಯಾಗಿ ಶುಚಿಗೊಳಿಸದೇ ಇರುವುದರಿಂದ ಗಲೀಜು ನೀರು ನಲ್ಲಿಗಳಲ್ಲಿ ಬರುತ್ತದೆ. ಕೆಲವೊಮ್ಮೆ ನಲ್ಲಿ ನೀರಿನಲ್ಲಿ ಹುಳುಗಳು ಬಂದಿರುವ ನಿದರ್ಶನಗಳು ಇವೆ. ಪಂಚಾಯಿತಿಯಲ್ಲಿ ನೀಡುವ ನೀರು ಶುದ್ಧೀಕರಣ ಸಾಮಾಗ್ರಿಗಳನ್ನು  ಬಳಸುತ್ತಿಲ್ಲವೆಂದು ಆರೋಪಿಸಿದ್ದಾರೆ.
ಈ ಕುರಿತು ಜನರು ಪ್ರಶ್ನಿಸಿದರೆ ಸಮರ್ಪಕವಾದ ಉತ್ತರ ನೀಡುವುದಿಲ್ಲ ಆದ್ದರಿಂದ ಈ ಕೂಡಲೇ ಉದ್ದಟತನ ಪ್ರದರ್ಶಿಸುತ್ತಿರುವ ಜಲಗಾರ ಎಸ್.ಎಂ. ಮುನಿರಾಜು ಅವರನ್ನು  ಬದಲಾಯಿಸಬೇಕೆಂದು ಗ್ರಾಮದ ಹರಿಜನ ಕಾಲೋನಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement