ಜೀಮುಕದಿಂದ ಪ್ರತಿಭಟನೆ
ಗೌರಿಬಿದನೂರು; ಜೀತ ಮುಕ್ತರಾಗಿರುವ ತಾಲೂಕಿನ 295 ಮಂದಿ ಜೀತದಾಳುಗಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಜೀತ ಮುಕ್ತ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಮೆರವಣಿಗೆಯ ನಂತರ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ನಂತರ ಮಾತನಾಡಿದ ಜಿಲ್ಲಾ ಸಂಚಾಲಕ ಹನುಮಂತು, ಜೀತ ಪದ್ಧತಿಯಿಂದ ಮುಕ್ತಗೊಂಡವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸುತ್ತಿದ್ದರೂ ತಾಲೂಕು ಆಡಳಿತ ಕಿವುಡಾಗಿದೆ ಎಂದರು. ಜೀವಿಕ ತಾಲೂಕು ಸಂಚಾಲಕ ಲಕ್ಷ್ಮೀನಾರಾಯಣ, ತಾಲೂಕು ಮಹಿಳಾ ಮೋರ್ಚಾ ಸಂಚಾಲಕಿ ವೆಂಕಟಲಕ್ಷ್ಮಿ, ಡಿಪಾಳ್ಯ ಹೋಬಳಿ ಸಂಚಾಲಕಿ ರವೀಂದ್ರನಾಥ್, ಹೊಸೂರು ಹೋಬಳಿ ಸಂಚಾಲಕ ಗೋಪಿ, ಕಸಬಾ ಹೋಬಳಿ ಸಂಚಾಲಕ ಗಿರಿಬಾಬು ತೊಂಡೇಭಾವಿ ಹೋಬಳಿ ಸಂಚಾಲಕ ಕೃಷ್ಣಪ್ಪ, ತಾಲೂಕು ಒಕ್ಕೂಟದ ಅಧ್ಯಕ್ಷ ಪಿ.ಕೆ. ಗಂಗಾಧರಪ್ಪ, ಉಪಾಧ್ಯಕ್ಷ ಚಿನ್ನಪ್ಪ, ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಶ್ರೀರಾಮ್ ಇದ್ದರು. ನಂತರ ತಹಸೀಲ್ದಾರ್ ಅವರಿಗೆ ಮನವಿ ನೀಡಲಾಯಿತು.
ಅನಿರ್ಧಿಷ್ಟ ಧರಣಿ ಆರಂಭ
ಗೌರಿಬಿದನೂರು: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಗೌರಿಬಿದನೂರು ತಾಲೂಕು ಕಚೇರಿ ಆವರಣದಲ್ಲಿ ಅನಿರ್ಧಿಷ್ಟ ಧರಣಿ ಪ್ರಾರಂಭಿಸಲಾಯಿತು.
ಪಟ್ಟಣದ ಪ್ರಮುಖ ಬೀದಿಗಳನ್ನು ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ನಂತರ ಸಭೆಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಜಿ. ಗಂಗಪ್ಪ, ಬೇಡಿಕೆ ಈಡೇರುವವರೆಗೂ ಅನಿರ್ಧಿಷ್ಠ ಧರಣಿ ನಡೆಸುವುದಾಗಿ ತಿಳಿಸಿದರು.
ತಾಲೂಕು ಸಂಚಾಲಕ ಪಿ. ನರಸಿಂಹಮೂರ್ತಿ ಮಾತನಾಡಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ಆನಂದ್, ಎಂ. ನಾರಾಯಣಸ್ವಾಮಿ, ಜಿ. ನಾರಾಯಣಸ್ವಾಮಿ, ಡಾ.ಚಿನ್ನಕೈವಾರಮಯ್ಯ, ಗೊಲ್ಲಹಳ್ಳಿ ನಾರಾಯಣಸ್ವಾಮಿ, ಮುನಯ್ಯ, ತಾಲೂಕು ಸಂಚಾಲಕ ಜಿ. ಲಕ್ಷ್ಮೀನಾರಾಯಣ, ಜಿ. ಸೋಮಯ್ಯ, ಲಕ್ಷ್ಮೀನರಸಯ್ಯ, ಎಂ. ನರಸಿಂಹಮೂರ್ತಿ ಜಿ. ಬಾಲಪ್ಪ ಇದ್ದರು.