ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುಂದಿನ ಲೋಕಸಭೆಗೆ ಮಂಡ್ಯದಿಂದಲೇ ಸ್ಪರ್ಧೆ

Srinivasa Murthy VN
Updated On : 26 Oct 2013, 12:05 pm

ಪಾಂಡವಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ತಾವು ನಿರ್ಧರಿಸಿರುವುದಾಗಿ ಸಂಸದೆ ದಿವ್ಯಾ ಸ್ಪಂದನ (ರಮ್ಯಾ) ಶುಕ್ರವಾರ ತಿಳಿಸಿದರು.
ತಾಲೂಕಿನ ಹಾರೋಹಳ್ಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ, ಚಂದ್ರೆ, ದೊಡ್ಡಬ್ಯಾಡರಹಳ್ಳಿ, ವಡ್ಡರಹಳ್ಳಿ, ರಾಗಿಮುದ್ದನಹಳ್ಳಿ, ಡಾಮರಹಳ್ಳಿ, ಮೇಣಾಗ್ರ, ಸುಂಕಾತೊಣ್ಣೂರು ಹಾಗೂ ಇತರೆ ಗ್ರಾಮಗಳಿಗೆ ಭೇಟಿ ನೀಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ಬಹಿರಂಗವಾಗಿ ಹೇಳಿದರು.
ಈಗ ನನ್ನನ್ನು ಅಲ್ಪಾವಧಿಗಳಿಗಷ್ಟೇ ಜನ ಆಯ್ಕೆ ಮಾಡಿದ್ದಾರೆ. ಅದು ನನಗೆ ಸಂಸತ ತರುವ ಸಂಗತಿ. ನಾನು ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲ್ಲಿದ್ದೇನೆ. ಅಗಲೂ ಜಿಲ್ಲೆಯ ಜನತೆ ನನ್ನನ್ನು ಆಯ್ಕೆ ಮಾಡುತ್ತಾರೆಂಬ ವಿಶ್ವಾಸ ನಂಗೆ ಅದಮ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಅಪೂರ್ಣಗೊಂಡ ಸಮುದಾಯಗಳನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡುವುದು ಹಾಗೂ ಹೊಸ ಸಮುದಾಯ ಭವನಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಪಾಂಡವಪುರ ತಾಲೂಕಿನ ಮಹಿಳೆಯರಿಗೆ ಹೆಲ್ತ್ ಕಾರ್ಡ್ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸುತ್ತೇನೆ. ಪಾಂಡವಪುರ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕಡು ಬಡವ ಕುಟುಂಬದ ಮಹಿಳೆಯರಿಗೆ ಹೆಲ್ತ್ ಕಾರ್ಡ್ ಸೌಲಭ್ಯವನ್ನು ಕಲ್ಪಿಸಿ ಕೊಡುವುದರ ಮೂಲಕ ಅವರ ಆರೋಗ್ಯ ಪರಿಸ್ಥಿತಿಯನ್ನು ಉತ್ತಮಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಅವರು ಭೇಟಿ ನೀಡಿದ ಗ್ರಾಮಗಳಲ್ಲಿ ಜನತೆಯಿಂದ ಅಹವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ಇತ್ತರು. ಸಂಸದರ ಜೊತೆಯಲ್ಲಿ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಎಚ್. ಮಂಜುನಾಥ್, ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement