ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಮಾವೇಶ

Srinivasa Murthy VN
Updated On : 26 Oct 2013, 12:07 pm

ಶ್ರೀನಿವಾಸಪುರ: ರೈತರು ಬ್ಯಾಂಕುಗಳಲ್ಲಿ ಮಾಡಿರುವ ಕೃಷಿ ಸಾಲಗಳ ಮನ್ನಾ ಯೋಜನೆಯನ್ನು ಮುಂದುವರಿಸಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಚಾಲಕ ಬಂಗವಾದಿ ನಾಗರಾಜ್ ಹಾಗೂ ಶ್ರೀನಿವಾಸಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತದ್ದ ಮರಳು ದಂಧೆ ನಿಯಂತ್ರಣಕ್ಕೆ ತಂದ ಜಿಲ್ಲಾಧಿಕಾರಿಗಳನ್ನು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳನ್ನು ಅಭಿನಂದಿಸಿದರು. ಬಯಲು ಸೀಮೆ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಪೈಪುಗಳ ಮುಖಾಂತರ ನೀರನ್ನು ಸರಬರಾಜು ಮಾಡುತ್ತೇವೆಂದು  ಸರ್ಕಾರ ಹೇಳುತ್ತಿದ್ದು ಇದನ್ನು ಕೈ ಬಿಟ್ಟು ಕಾಲುವೆಗಳ ಮುಖಾಂತರ ನೀರು ಹರಿಸಲಿ ಎಂದು ಆಗ್ರಹಿಸಿದರು.
ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ರೈತರ  ಸಮಾವೇಶ ಹಮ್ಮಿಕೊಂಡಿದ್ದು ಸಮಾವೇಶಕ್ಕೆ 5 ಜಿಲ್ಲೆಗಳಿಂದ ಸುಮಾರು 5 ಲಕ್ಷ ರೈತರು ಭಾಗವಹಿಸಲಿದ್ದಾರೆ. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ. ತಾಲೂಕು ಅಧ್ಯಕ್ಷ ಎಸ್. ಗಂಗಾಧರ್, ಜಿಲ್ಲಾ ಕಾರ್ಯಧ್ಯಕ್ಷ ರಮೇಶ್, ವೆಂಕಟೇಶಗೌಡ, ಕೊಂಡಸಂದ್ರ  ರಾಮೇಗೌಡ, ಪ್ರಸನ್ನ, ತೆರ್ನಹಳ್ಳಿ ವೆಂಕಿ ಇದ್ದರು.

ಕಲಾವಿದರಿಗೆ ಸನ್ಮಾನ ಪ್ರೋತ್ಸಾಹದಾಯಕ
ಬಂಗಾರಪೇಟೆ:
ನಾಡು ನುಡಿ ಜಲ ಭಾಷೆ ರಕ್ಷಣೆಗೆ ಕಲಾವಿದರು ತಮ್ಮದೇ ದಾಟಿಯಲ್ಲಿ ಸೇವೆ ಮಾಡುತ್ತಿದ್ದು ಇಂತಹ ಕಲಾ ಸೇವೆಕರನ್ನು ಸತ್ಕರಿಸಿದರೆ ಅವರಿಂದ ಮತ್ತಷ್ಟು ಸೇವೆ ಈ ನಾಡಿಗೆ ಲಭಿಸಲಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಎಸ್.ಎನ್. ರೆಸಾರ್ಟ್ನಲ್ಲಿ ಬೆಂಗಳೂರಿನ ಕಲಾವಿದರ ಆಶ್ರಮದ ವಿಶ್ವಕಲಾಧಾಮ ವತಿಯಿಂದ ವಿಕಲಚೇತನ, ವೃದ್ದ ಕಲಾವಿದರ ಕಟ್ಟಡದ ಸಹಾಯಾರ್ಥವಾಗಿ ಏರ್ಪಡಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು ಸಣ್ಣ ಕಲಾವಿದರನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಹೇಳಿದರು.
ಜೂನಿಯರ್ ರಾಜ್ ಕುಮಾರ್, ಪಟ್ಟಣದಲ್ಲಿ ಶಾಸಕರಿಂದ ಪುಟ್ಟ ಕಲಾವಿದರಿಗೆ ದೊರೆತ ಪ್ರೋತ್ಸಾಹವನ್ನು ಶ್ಲಾಘಿಸಿದರು. ಇದೇ ವೇಳೆ ಸ್ಥಳೀಯ ಕಲಾವಿದರನ್ನು ಸತ್ಕರಿಸಲಾಯಿತು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಂಗರಾಮಯ್ಯ, ವೈಯವಿ ರಮೇಶ್, ಎಸ್.ಎ. ಪಾರ್ಥಸಾರಥಿ, ಚಂದು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement