ಅನುಭವದ ಆಳದಿಂದ ಉತ್ತಮ ಕಾವ್ಯ ಸಾಧ್ಯ: ಸುರೇಶ್
ಮಾಲೂರು: ಕಾವ್ಯವು ಜನಮಾಸದಲ್ಲಿ ಚಿರಕಾಲ ಉಳಿಯಬೇಕಾದರೆ ಅದು ಅನುಭವಗಳ ಅಳದಿಂದ ಬಂದಾಗ ಮಾತ್ರ ಸಾಧ್ಯ ಎಂದು ಕವಿ ಸುರೇಶ್ ಜಕಾತಿ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಸ್ಥಳೀಯ ಚೈತನ್ಯ ಕಲಾನಿಕೇತನ ಸಂಸ್ಥೆಯ 55ನೇ ತಿಂಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ- ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಸಾಹಿತ್ಯ ಸೃಷ್ಟಿಯಾಗಲು ಪ್ರತಿಭೆಯ ಜತೆಗೆ ಆಳವಾದ ಅಧ್ಯಯನ ಬೇಕು ಎಂದರು. ಈ ನಿಟ್ಟಿನಲ್ಲಿ ಕವಿಗಳು ಕಾವ್ಯ ಕೃಷಿ ಮಾಡಬೇಕು ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಡಿ.ಟಿ. ಪ್ರಸನ್ನ, ಬರಹದ ಅಭಿರುಚಿ ಇರುವವರಿಗೆ ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ತಲುಪಿಸಲು ವೇದಿಕೆಗಳ ಅಗತ್ಯತೆ ಇರುತ್ತದೆ. ಇಲ್ಲಿನ ಚೈತನ್ಯ ಕಲಾನಿಕೇತನವು ಈ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮ ಪ್ರಶಂಸಾರ್ಹ. ಕಲಾ ಸಂಘಗಳು ಯಾವಾಗಲೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡಬೇಕು. ಪ್ರತಿಭೆ ಪ್ರದರ್ಶಿಸಲು ಕಲಾ ಸಂಘಗಳ ವೇದಿಕೆ ಇದ್ದರೆ ಹೊರಪ್ರಪಂಚಕ್ಕೆ ಪರಿಚಯಿಸಲು ಪತ್ರಿಕಾ ಮಾಧ್ಯಮದ ಪಾತ್ರ ಹೆಚ್ಚಿನದ್ದು ಎಂದರು. ಕವಿ ಜ.ಮು. ಚಂದ್ರ, ಕೆ. ಮುನಿಕೃಷ್ಣಪ್ಪ,ಚಲನಚಿತ್ರ ನಿರ್ದೇಶಕ ಹರೀಶ್, ಸತೀಶ್ ಕಾಟೇರಿ, ಈಶ್ವರಾಚಾರಿ, ಶ್ರೀನಿಧಿ ಶ್ರೀನಿವಾಸ್, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ರಾಮಕೃಷ್ಣ, ಶಿವಪ್ರಸಾದ್, ರಶ್ಮಿ, ಜಯಪ್ರಕಾಶ್, ತಿಮ್ಮರಾಯಪ್ಪ ಇದ್ದರು.
ಸಂಘಕ್ಕೆ ಆಯ್ಕೆ
ಚಿಕ್ಕಬಳ್ಳಾಪುರ: ತಾಲೂಕು ಹಿರೇನಾಗವಲ್ಲಿ ಹಾಲು ಉತ್ಪಾದಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಮಂದಿ ಚುನಾಯಿತರಾಗಿದ್ದಾರೆ. ಹೆಚ್.ಎಸ್. ಮೋಹನ್ ರೆಡ್ಡಿ ನಾಯಕತ್ವದಲ್ಲಿ ನಿರ್ದೇಶಕರಾಗಿ ಹೆಚ್.ಎಸ್. ಮೋಹನ್ ರೆಡ್ಡಿ, ಹೆಚ್.ಎಂ. ವೆಂಕಟರಮಣಪ್ಪ, ಅಶ್ವಥಪ್ಪ, ದ್ಯಾವಪ್ಪ, ದೊಡ್ಡನರಸಿಂಹಪ್ಪ, ವೆಂಕಟಶ್, ಶಿವಕುಮಾರ್, ವೆಂಕಟಲಕ್ಷ್ಮಮ್ಮ, ರಾಮಪ್ಪ, ಲಕ್ಷ್ಮಮ್ಮ, ಶ್ರೀರಾಮಪ್ಪ ಆಯ್ಕೆಯಾಗಿದ್ದಾರೆ.
ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: 2013-14ನೇ ಸಾಲಿಗೆ ಮೆರಿಟ್ ಆಧಾರದ ಮೇಲೆ ನರ್ಸಿಂಗ್ (ಡಿ.ಜಿ.ಎನ್.ಎಂ. ಮತ್ತು ಬಿ.ಎಸ್.ಸಿ.) ಕೋರ್ಸುಗಳಿಗೆ ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಢಿಢಿಢಿ.ಡಢಿ.್ಞಛ್ಠ.ಟ್ಝ್ಛಿ.್ಝಟಿ ಮೂಲಕ ಸಲ್ಲಿಸಬಹುದು.
ರೈತ ವಿರೋಧಿ ಸುತ್ತೋಲೆಗೆ ಖಂಡನೆ
ಕೋಲಾರ: ನಬಾರ್ಡ್ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಯು ರೈತ ವಿರೋಧಿ ಹಾಗೂ ಕೃಷಿ ಸಹಕಾರ ಸಂಘಗಳ ಅಭಿವೃದ್ಧಿಗೆ ಕಂಟಕಪ್ರಾಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾರೆಡ್ಡಿ ಹೇಳಿದರು. ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ಇನ್ನು ಮುಂದೆ ಠೇವಣಿ ಸ್ವೀಕರಿಸುವಂತಿಲ್ಲ. ಸಾಲ ನೀಡಿಕೆ ವಹಿವಾಟಿನಿಂದ ಉಂಟಾಗುವ ಆಸ್ತಿಗಳು ಮತ್ತು ಹೊಣೆಯನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳ ಲೆಕ್ಕ ಪುಸ್ತಕಗಳಿಗೆ ವರ್ಗಾಯಿಸಬೇಕೆಂಬ ರೈತ ವಿರೋಧಿ ಸೂಚನೆಗಳುಳ್ಳ ಸುತ್ತೋಲೆಯನ್ನು ನಬಾರ್ಡ್ ಹೊರಡಿಸಿರುವುದು ರೈತರ ಹಾಗೂ ಸಹಕಾರ ಸಂಘಗಳ ಕತ್ತು ಹಿಸುಕುವ ಹುನ್ನಾರವಾಗಿದೆ ಎಂದು ಆರೋಪಿಸಿದರು. ಈ ಸುತ್ತೋಲೆಯನ್ನು ಕೇಂದ್ರ ಸರ್ಕಾರ ಕೂಡಲೇ ವಾಪಸ್ಸು ಪಡೆಯಬೇಕು ಎಂದ ಅವರು, ಸ್ವಾತಂತ್ರ್ಯ ಪೂರ್ವದಿಂದಲೂ ಗ್ರಾಮೀಣ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಹಕಾರಿ ಚಳುವಳಿಯನ್ನು ಮುಗಿಸಲು ನಡೆಸಿರುವ ಪ್ರಯತ್ನ ಕೈಬಿಡಬೇಕೆಂದು ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಇದ್ದರು.
ಚಿಂತಾಮಣಿ ತಾ. ಬಿಜೆಪಿಗೆ ಆಯ್ಕೆ
ಚಿಂತಾಮಣಿ: ತಾಲೂಕು ಭಾರತೀಯ ಜನತಾ ಪಕ್ಷ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಎಂ. ಮಂಜುನಾಥ್ ತಿಳಿಸಿದ್ದಾರೆ.
ನಾಗರಾಜಪ್ಪ, ಬೈರಾರೆಡ್ಡಿ, ವಿಶ್ವನಾಥಸ್ವಾಮಿ, ಮನೋಹರ್, ಅನುರಾಧಮ್ಮ, ಎಸ್. ಪ್ರದೀಪ್ (ಎಲ್ಲರೂ ಉಪಾಧ್ಯಕ್ಷರು), ವೈ.ಎಸ್. ಮಹೇಶ್,ಅರುಣ್ಕುಮಾರ್ (ಪ್ರಧಾನ ಕಾರ್ಯದರ್ಶಿಗಳು), ಸೋಮಶೇಖರ್, ರಾಮಚಂದ್ರ, ನಾಗೇಶ್, ಬೈರಾರೆಡ್ಡಿ, ಆಂಜಪ್ಪ, ಸರೋಜಮ್ಮ (ಕಾರ್ಯದರ್ಶಿಗಳು), ಸುಜಾತಮ್ಮ (ಕೋಶಾಧ್ಯಕ್ಷೆ).
ಸ್ವಯಂ ಸೇವಕ ಟ್ರಸ್ಟ್ಗೆ ಆಯ್ಕೆ
ಮಾಲೂರು: ರಾಷ್ಟ್ರೀಯ ಬಹು ಸಂಖ್ಯಾತ ಸ್ವಯಂ ಸೇವಕ ಟ್ರಸ್ಟ್ ತಾಲೂಕು ಘಟಕದ ಅಧ್ಯಕ್ಷರಾಗಿ ಚಿಕ್ಕತಿರುಪತಿ ಗಂಗಾಧರ್ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚಿಕ್ಕ ತಿರುಪತಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಸಂಘದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಜೆ.ಕೃಷ್ಣಪ್ಪ, ಅಧ್ಯಕ್ಷ ಗಂಗಾಧರ್ ಹಾಗೂ ಉಪಾಧ್ಯಕ್ಷರಾಗಿ ಚಿಕ್ಕತಿರುಪತಿಯ ಜಯರಾಜು ಹೆಸರನ್ನು ಪ್ರಕಟಿಸಿದರು.
ಸಾಲ ಮನ್ನಾಕ್ಕೆ ಒತ್ತಾಯ
ಕೋಲಾರ: ಕೋಳಿ ಸಾಕಣೆದಾರರು ವಿವಿಧ ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೋಳಿ ಸಾಕಾಣಿಕೆ ಕ್ಷೇಮಾಭಿವೃದ್ಧಿ ಸಂಘ ದ ಅಧ್ಯಕ್ಷ ಜಿ.ಸಿ.ಮಂಜುನಾಥ್ ಸರ್ಕಾರವನ್ನು ಆಗ್ರಹಿಸಿದರು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೋಳಿ ಸಾಕಾಣಿಕೆ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಕೃಷ್ಣಪ್ಪ, ಗೋಪಾಲ್, ಎನ್.ರಾಜಣ್ಣ, ಡಿ.ಕೆ.ನಾರಾಯನಸ್ವಾಮಿ ಇದ್ದರು.