ಪದವಿ ಮಾತ್ರವಲ್ಲ, ಸಾಮಾನ್ಯಜ್ಞಾನವೂ ಮುಖ್ಯ
ಕೋಲಾರ: ಕಾನೂನು ಪದವಿ ವೃತ್ತಿಪರ ಶಿಕ್ಷಣವಾಗಿದ್ದು ಪವಿತ್ರವಾದ ವೃತ್ತಿಗೆ ಬುನಾದಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಕಾನೂನು ಪಾಲನೆ ಬಹಳ ಉಪಯುಕ್ತವಾಗುತ್ತದೆ ಎಂದು ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಎಂ ರಂಗಾರೆಡ್ಡಿ ಕಿವಿಮಾತು ಹೇಳಿದರು.
ಅವರು ಅರಹಳ್ಳಿಯ ಸರ್ಕಾರಿ ಕಾನೂನು ಕಾಲೇಜು ವಿದ್ಯಾರ್ಥಿಗಳು ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವ್ಯಾಸಂಗದೆಡೆಗೂ ಗಮನವಿರಲಿ: ವಿದ್ಯಾರ್ಥಿಗಳು ಎಷ್ಟೇ ದೊಡ್ಡ ಪದವಿ ಪಡೆದರೂ ಜೀವನಕ್ಕೆ ಉಪಯೋಗವಾಗುವಂತಹ ಸಾಮಾನ್ಯ
ಜ್ಞಾನವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿದ್ಯಾರ್ಥಿಗಳು ಶಾರೀರಿಕ ಮತ್ತು ಮಾನಸಿಕ ಸ್ವಸ್ತರಾಗಿರಬೇಕಾದರೆ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅವಶ್ಯಕ ಎಂದು ಹೇಳಿದರು. ಸ್ಪರ್ಧಾತ್ಮಕವಾಗಿ ರೂಪುಗೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ಉತ್ತಮವಾಗಿ ಅಂಕ ಗಳಿಸಬೇಕಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ವ್ಯಾಸಂಗ ಮಾಡಬೇಕೆಂದರು.
ಸರ್ಕಾರಿ ವೃತ್ತಿಯೇ ಬೇಕಿಲ್ಲ ಜೀವನ ಸಾಗಿಸಲು ಸರ್ಕಾರದ ವೃತ್ತಿಯೇ ಬೇಕಾಗಿಲ್ಲ ಸ್ವಯಂ ಉದ್ಯೋಗದಿಂದಲೂ ಉತ್ತಮ ಜೀವನ ಸಾಗಿಸಬಹುದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.
ಯುವಜನ ಸೇವಾ ಇಲಾಖೆ ಸಹಾಯಕ ನಿರ್ದೇಶಕ ರುದ್ರಪ್ಪ ಮಾತನಾಡಿ, ಓದುವುದರ ಜೊತೆಗೆ ಇತರೆ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾನಸಿಕ ನೆಮ್ಮದಿ ಜೊತೆಗೆ ಆರೋಗ್ಯವೂ ಲಭಿಸುತ್ತದೆ.
ಈ ನಿಟ್ಟಿನಲ್ಲಿ ಕಾನೂನು ಕಾಲೇಜಿಗೆ ಬೇಕಾಗಿರುವ ಕ್ರೀಡಾ ಸಾಮಗ್ರಿ ನೀಡುವುದಾಗಿ ತಿಳಿದರು.
ಪ್ರಾಂಶುಪಾಲೆ ಎಂ. ಅನಿತಾ ಮಾತನಾಡಿ, ಕಾನೂನು ಶಿಕ್ಷಣ ಪವಿತ್ರವಾದುದು ಇದರಿಂದ ನಿಮ್ಮ ಭವಿಷ್ಯ ಉತ್ತಮಪಡಿಸಿಕೊಳ್ಳಬೇಕು ವಿದ್ಯಾರ್ಥಿಗಳು ಸಣ್ಣ ಪುಟ್ಟ ಸಮಸ್ಯೆಗಳಿಗೆ ಜಗಳವಾಡದೆ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆ ನಮಗೆ ತಿಳಿಸಬೇಕೆಂದರು ಎಲ್ಲಾ ಸಂಸ್ಥೆಗಳಲ್ಲಿ ಸಣ್ಣ ಪುಟ್ಟ ತೊಂದರೆಗಳು ಇರುತ್ತವೆ. ಅದನ್ನು ಸರಿಪಡಿಸಿಕೊಳ್ಳಲಾಗುವುದು ಎಂದರು.
ಇದೆ ವೇಳೆ ಅಂತರ್ ಕಾಲೇಜು ಮತ್ತು ವಿಶ್ವ ವಿದ್ಯಾಲಯ ಬಾಲ್ ಬ್ಯಾಡ್‌ಮಿಂಟನ್ ತಂಡಕ್ಕೆ ಆಯ್ಕೆಯಾಗಿರುವ ವಿ. ವಿಜಯಕುಮಾರ್. ಎಂ ರವೀಂದ್ರ, ಆರ್. ಅಮರನಾಥ್, ಎ.ಎಸ್. ಕಿಶೋರ್‌ಕುಮಾರ್ ಹಾಗೂ ಗುಡ್ಡಗಾಡು ಓಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ವೀಣಾ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಹಿರಿಯ ಶ್ರೇಣಿ ದೈಹಿಕ ಶಿಕ್ಷಕ ರಾಮಂಜನೇಯಲು ಕಾನೂನು ಉಪನ್ಯಾಸಕರಾದ ಭಾಗ್ಯಲಕ್ಷ್ಮಿ, ಸುಮಂತ್, ಪ್ರಸನ್ನಕುಮಾರಿ, ಧನಲಕ್ಷ್ಮಿ, ಪುಷ್ಪ, ಶಾಂತಮ್ಮ, ಮಂಜುನಾಯಕ್ ಮತ್ತಿತರರು ಉಪಸ್ಥಿತರಿದ್ದರು.