ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಬಲಿಜರಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಪಕ್ಷಗಳ ಕಡೆಗಣನೆ'

Srinivasa Murthy VN
Updated On : 2 Sept 2013, 12:30 pm

ಬಂಗಾರಪೇಟೆ: ರಾಜ್ಯದಲ್ಲಿ ಬಲಿಜ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದರೂ ಇದುವರೆಗೂ ಯಾರಿಗೂ ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಮುಖ್ಯತೆ ನೀಡದೆ ಎಲ್ಲಾ ರಾಜಕೀಯ ಪಕ್ಷಗಳು ಸಮುದಾಯವನ್ನು ಬಳಸಿಕೊಂಡು ನಂತರ ಬಿಸಾಡಿದೆ. ಆದ್ದರಿಂದ ಸಮುದಾಯದವರು ಎಲ್ಲಾ ರಂಗದಲ್ಲಿಯೂ ಆರ್ಥಿಕವಾಗಿ ಬಲಿಷ್ಟರಾದಾಗ ಮಾತ್ರ ನಾವು ಸಮಾದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಬಲಿತ ಸಂಘದ ತಾಲೂಕು ಅಧ್ಯಕ್ಷ ಆರ್. ಜಗದೀಶ್ ಹೇಳಿದರು.
ಇದೇ ವೇಳೆ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ದೇಶಿಹಳ್ಳಿ ರಂಗಪ್ಪ, ಅಧ್ಯಕ್ಷರಾಗಿ ಆರ್. ಜಗದೀಶ್, ಉಪಾಧ್ಯಕ್ಷರಾಗಿ ಕೆ.ಎಂ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸಮೂರ್ತಿ, ಕಾರ್ಯದರ್ಶಿಯಾಗಿ ರಾಧಾಕೃಷ್ಣ, ಜಂಟಿ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ವೆಂಕಟಾಚಲಪತಿ, ಸಂಘಟನಾ ಕಾರ್ಯದರ್ಶಿಯಾಗಿ ಜ್‌ಞಾನ ಕುಮಾರ್, ಕಾರ್ಯಕಾರಿ ಸದಸ್ಯರಾಗಿ ಎಂ.ಆನಂದ್, ವೆಂಕಟೇಶ್, ಚಲಪತಿ, ಶ್ರೀನಾಥ್, ಅಶ್ವಥನಾರಾಯಣಮೂರ್ತಿ, ರವಿಕುಮಾರ್, ಚಲಪತಿ,ನಂದೀಶ್, ಚಂದ್ರಕುಮಾರ್, ಚತನ್ ಮತ್ತು ನಾಗರಾಜ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ವರ್ತೂರ್‌ಗೆ 'ಕೈ'ಕೊಟ್ಟ ಜಿಪಂ ಸದಸ್ಯ ಅಮರನಾಥ್
ಕೋಲಾರ: ಶಾಸಕ ವರ್ತೂರ್ ಪ್ರಕಾಶ್ ಅವರಿಗೆ ಅಪ್ತರಾಗಿದ್ದ ಜಿಪಂ ಸದಸ್ಯ ಜಿ.ಎಸ್.ಅಮರನಾಥ್ ಶಾಸಕರಿಗೆ ಕೈಕೊಟ್ಟು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕಡೆ ಒಲವು ತೋರಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಶಾಸಕ ವರ್ತೂರ್ ಪ್ರಕಾಶ್ ನೀಡಿದ ಮಾನಸಿಕ ಕಿರುಕುಳ ಮತ್ತು ಅಗೌರವದಿಂದ ಬೇಸತ್ತು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರ ಕೈಬಲಪಡಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಸಂಸದ ಮುನಿಯಪ್ಪರನ್ನು ಬೆಂಬಲಿಸಲಿದ್ದು, ಸೆ.6ರಂದು ನಡೆಯಲಿರುವ ಜಿಪಂ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿಯ ಆರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಇವರ ಸಹಕಾರವನ್ನು ಸಹ ಲೋಕಸಭಾ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪನವರಿಗೆ ದೊರಕಿಸಿಕೊಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement