ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಂತಿ ಕುಂಭಾಭಿಷೇಕ ಮಹೋತ್ಸವ

Srinivasa Murthy VN
Updated On : 2 Sept 2013, 12:31 pm

ಕ.ಪ್ರ. ವಾರ್ತೆಮಾಲೂರುಸೆ.1
ಪಟ್ಟಣದ ಧರ್ಮರಾಯ ದೇವಾಲಯ ಹಿಂಭಾಗದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಲ್ಲಿ ಜೀರ್ಣೋದ್ಧಾರ ಪ್ರತಿಷ್ಠೆ ಅಂಗವಾಗಿ ಶಾಂತಿ ಕುಂಭಾಭಿಷೇಕ ಮಹೋತ್ಸವವು ಭಾನುವಾರ ಅದ್ಧೂರಿಯಾಗಿ ನಡೆಯಿತು.
ಅರ್ತಿಕಂ ವೇಣುಗೋಪಾಲ್‌ಚಾರ್ ಪ್ರಧಾನಾಚಾರ್ಯತ್ವದಲ್ಲಿ ಬೆಳಗ್ಗೆ ಹನುಮಾನ್ ಸುಪ್ರಭಾತ್, ಪಂಚಾಮೃತ ಅಭಿಷೇಕ, ಅಲಂಕಾರ, ಸೀತಾರಾಮ, ಲಕ್ಷ್ಮಣ, ಭರತ, ಶತೃಘ್ನ, ಜಾಂಬವಂತ, ಆಂಜನೇಯ, ನಳನೀಲ, ಸುಶೇನ, ನವಾಸ್ಟ, ಗಂಧಮಾದ, ಅಂಗದ, ಮೈದಾಯನ, ದ್ವಿದಾಯನ, ದ್ವಾಶನ ಮಹಾ ಮರ್ಕಟ ಅವಾಹನೆ ನಡೆಯಿತು.
ಬಾಲಾಂಜನೇಯ, ಪ್ರಸನ್ನ ಆಂಜನೇಯ, ವೀರಾಂಜನೇಯ, ಸುವರ್ಚಲಾಂಜನೇಯ, ಯೋಗಪಟ್ರದರ ಆಂಜನೇಯ, ಸ್ವಪ್ನ ಆಂಜನೇಯ, ಶಕ್ತಿಪಾದ ಆಂಜನೇಯ, ಯಂತ್ರಾಂಜನೇಯ,ಬೀಜಾಕ್ಷರಸಹಿತ ಮೂಲಮಂತ್ರ ಹೋಮ, ನಂತರ ಪೂರ್ಣಾಹುತಿ ಶಾಂತಿ ಕುಂಭಾಭಿಷೇಕ ನಡೆಯಿತು. ಪುರಸಭೆ ಸದಸ್ಯರಾದ ಸಿ.ಪಿ.ನಾಗರಾಜ್, ವೇಮನ, ಭಾರತಮ್ಮ ನಂಜುಂಡಪ್ಪ, ರಾಮಮೂರ್ತಿ, ಎಂ.ಪಿ.ವಿಜಯಕುಮಾರ್, ಸೋಮಣ್ಣ, ಸಿ.ಲಕ್ಷ್ಮಿನಾರಾಯಣ್, ಪಿ.ವೆಂಕಟೇಶ್, ಭಾಗ್ಯಮ್ಮ ಶ್ರೀನಿವಾಸ್, ಗುಟ್ಟಸ್ವಾಮಿ, ಶಾಂತ, ಎಂ.ಪಿ.ನಾಗರಾಜ್, ಬಾಬುರಾವ್ ಸಾಳುಂಕ, ಹಾಲು ನಂಜುಂಡಪ್ಪ, ರಾಜಪ್ಪ, ಆರ್.ನಾಗರಾಜ್, ಶ್ರೀನಿವಾಸ್ ಮಂಜುಳ, ಎಸ್.ವಿ. ಬಾಬು ರೆಡ್ಡಿ, ಕೆ.ಸಿ.ಸೂರಪ್ಪ, ನಾರಾಯಣಸ್ವಾಮಿ, ಸುಬ್ರಮಣ್ಯ, ಗುರುನಾಥ್, ಚೇತನ್, ಯಜಮಾನ್ ಪೆರಮಾಳ್, ಬಾಲಾಜಿ ಸಿಂಗ್,ಬೀಡಿ ವೆಂಕಟೇಶ್, ಪೈಲ್ವಾನ್ ಸೋಮಣ್ಣ, ಶಂಕರ್ ಸಿಂಗ್, ಲಚ್ಚಿ ಇದ್ದರು.

ಎಲ್.ಮುತ್ತುಗದ ಹಳ್ಳಿಯಲ್ಲಿ ರಸ್ತೆಗೆ ಶಂಕುಸ್ಥಾಪನೆ
ಶಿಡ್ಲಘಟ್ಟ: 40 ವರ್ಷಗಳ ಹಿಂದಿನಿಂದಲೂ ಕಡೆಗಣಿಸಿರುವ ಎಲ್.ಮುತ್ತುಗದ ಹಳ್ಳಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದಾಗಿ ರಸ್ತೆ ಕಾಮಗಾರಿ ಉದ್ಘಾಟಿಸಿದ ಶಾಸಕ ರಾಜಣ್ಣ ತಿಳಿಸಿದರು.
ಎಲ್. ಮುತ್ತುಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಪ್ರಸಕ್ತವಾಗಿ ರಸ್ತೆ ಕಾಮಗಾರಿಯನ್ನು ಮಾಡುತ್ತಿರುವುದಾಗಿ ನಂತರ ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ರಸ್ತೆ ಕಾಮಗಾರಿಗೆ ಪ್ರಸಕ್ತವಾಗಿ ನಬಾರ್ಡ್‌ನಿಂದ 25 ಲಕ್ಷ ಮಂಜೂರು ಮಾಡಲಾಗಿದ್ದು, ಅಗತ್ಯ ಬಿದ್ದರೆ ಇನ್ನು ಹಣ ಖರ್ಚು ಮಾಡಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಲೀಲಾ ರಾಜಣ್ಣ, ಅಪ್ಸರಾ ಪಾಷಾ, ಮಂಜುಳ, ಸುರೇಶ್, ರಮೇಶ್, ಆಂಜಿನಪ್ಪ ಮತ್ತಿತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement