ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಿಸಿಯೂಟದ ಸಾಂಬಾರಿಗೆ ಬಿದ್ದು ವಿದ್ಯಾರ್ಥಿನಿಗೆ ಗಾಯ

Srinivasa Murthy VN
Updated On : 17 Sept 2013, 11:13 am

ಗೌರಿಬಿದನೂರು/ಚಿಕ್ಕಬಳ್ಳಾಪುರ: ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಬಿಸಿ ಸಾಂಬಾರು ಪಾತ್ರೆಯೊಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮಂಚೇನಹಳ್ಳಿ ಹೋಬಳಿಯ ದಾರಿನಾಯಕನಪಾಳ್ಯ (ಡಿ.ಪಾಳ್ಯ)ದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಂಭವಿಸಿದೆ.
ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಅನುಷಾ (6 ವರ್ಷ) ಗಾಯಗೊಂಡವಳು. ಸುಮಾರು ಮಧ್ಯಾಹ್ನ 1 ಗಂಟೆಗೆ ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸಲಾಗುತ್ತಿತ್ತು. ಊಟಕ್ಕಾಗಿ ಮಕ್ಕಳು ಸರತಿ ಸಾಲಿನಲ್ಲಿ ನಿಂತಿದ್ದರು. ಆ ವೇಳೆ ಅನ್ನ ಮತ್ತು ಸಾಂಬಾರು ಹಾಕಿಸಿಕೊಳ್ಳಲು ಸಾಲಿನಿಂದ ಮುಂದೆ ಬಂದ ಅನುಷಾಳನ್ನು ಹಿಂದಿನಿಂದ ಯಾರೋ ತಳ್ಳಿದ್ದು, ಪಾತ್ರೆಯೊಳಗೆ ಬಿದ್ದಿದ್ದಾಳೆ. ತಕ್ಷಣವೇ ಶಾಲಾ ಶಿಕ್ಷಕರು ಗೌರಬಿದನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಬಾಲಕಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಗೆ ಸುಮಾರು ಶೇ.70ರಷ್ಟು ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಕ್ಷೀರಭಾಗ್ಯ ಹಾಲು ಬಿದ್ದು ಬಾಲಕಿಗೆ ಗಾಯ
ಮಂಡ್ಯ:
ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಬಿಸಿ ಹಾಲು ವಿತರಿಸುವಾಗ ನೂಕು ನುಗ್ಗಲಿನಿಂದ ವಿದ್ಯಾರ್ಥಿನಿ ಮೇಲೆ ಬಿಸಿ ಹಾಲು ಬಿದ್ದು ತೀವ್ರ ಸುಟ್ಟಗಾಯವಾಗಿರುವ ಘಟನೆ ತಾಲೂಕಿನ ಬೆಳ್ಳೂರು ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬೆಳ್ಳೂರು ಪಟ್ಟಣದ ನೂರ್ ಅಹ್ಮದ್ ಮತ್ತು ದಿಲ್ಷಾದ್ ಮಗಳು 1ನೇ ತರಗತಿಯ ವಿದ್ಯಾರ್ಥಿನಿ ನೂರ್‌ನಿಷ್ಬಾ ಗಾಯಗೊಂಡವಳು. 170 ಬಾಲಕಿಯರನ್ನು ಹೊಂದಿರುವ ಈ ಶಾಲೆಯಲ್ಲಿ ಮಕ್ಕಳಿಗೆ ಹಾಲನ್ನು ಬಿಸಿಮಾಡಿ ವಿತರಿಸಲಾಗುತ್ತಿತ್ತು. ಆ ವೇಳೆ ಹಾಲನ್ನು ಲೋಟಕ್ಕೆ ತುಂಬಿಸಿ ಕೊಳ್ಳಲು ಶಾಲೆಯ ಮಕ್ಕಳು ನೂಕು ನುಗ್ಗಲಿನಲ್ಲಿಯೇ ಬರುತ್ತಿರುವಾಗ ಯಾವೊಬ್ಬ ಶಿಕ್ಷಕನೂ ಮಕ್ಕಳನ್ನು ಸಾಲಿನಲ್ಲಿ ನಿಲ್ಲಿಸಿ ಬಿಸಿ ಹಾಲು ಪಡೆಯಲು ಎಚ್ಚರ ವಹಿಸಿರಲಿಲ್ಲ. ಇದರಿಂದಾಗಿ ಇಂಥ ಅವಘಡ ಸಂಭವಿಸಿದೆ.

ಬಿಸಿಯೂಟ ಸಾಂಬಾರ್‌ನಲ್ಲಿ ಬಾಲಕಿ ಬಿದ್ದಿರುವ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಮಾಹಿತಿ ಪಡೆಯಲಾಗುವುದು. ತಪ್ಪಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
-ಕಿಮ್ಮನೆ ರತ್ನಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement