ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರತ್ಯೇಕ ಘಟನೆ; ಮೂವರು ಬಾಲಕರ ಸಾವು

Srinivasa Murthy VN
Updated On : 19 Sept 2013, 12:27 pm

ಬಂಗಾರಪೇಟೆ: ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಶಾಲಾ ಬಾಲಕರು ಮೃತಪಟ್ಟಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಪಟ್ಟಣದ ಎನ್‌ಟಿಜಿಎಂ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಇಲ್ಲಿನ ಕೆರೆಕೋಡಿ ನಿವಾಸಿಗಳಾದ ಲಕ್ಷ್ಮಣ್ ಎಂಬುವರ ಮಗ ಶ್ರೀಧರ್(13) ಹಾಗೂ ಸುರೇಂದ್ರ ಪುತ್ರ ಹೇಮಂತ್ ಎಂಬವರು ತನ್ನ ಇತರೆ ಇಬ್ಬರ ಸ್ನೇಹಿತರರೊಂದಿಗೆ ಶಾಲೆಗೆ ರಜೆ ಇದ್ದ ಕಾರಣ ಬೆಂಗನೂರು ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿ ವ್ಯಾಪಕವಾಗಿ ಹೂಳು ತುಂಬಿರುವ ಅಂಶ ತಿಳಿಯದೆ ನೀರಿನಲ್ಲಿ ಇಳಿದು ಶ್ರೀಧರ್ ಮತ್ತು ಹೇಮಂತ್ ಹೂಳಿನಲ್ಲಿ ಸಿಲುಕಿ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕಾವರನಹಳ್ಳಿ ಗ್ರಾಮದ ನಿವಾಸಿ ಮನೋಜ್ ಎಂಬ ಬಾಲಕ ದೊಡ್ಡೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದು ಬುಧವಾರ ಶಾಲೆಗೆ ಹೋಗಲು ಸೈಕಲ್‌ನಲ್ಲಿ ಮನೆಯಿಂದ ತೆರಳಿದಾಗ ಗ್ರಾಮದ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ದೇಗುಲದಲ್ಲಿ ಚಿನ್ನಾಭರಣ ಕಳವು
ಕೆಜಿಎಫ್: ದೇವಸ್ಥಾನದ ಬಾಗಿಲನ್ನು ಮುರಿದು ಒಳಪ್ರವೇಶಿಸಿದ ಕಳ್ಳರು ದೇವರ ಮೇಲೆ ಇಟ್ಟಿದ್ದ ಚಿನ್ನದ ಒಡವೆಗಳು ಬೆಳ್ಳಿ ಕಿರೀಟ ಹಾಗೂ ಹುಂಡಿಯಲ್ಲಿದ್ದ ನಗದನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಸ್ಕಂ ಎ.ಬ್ಲಾಕ್ ಬಡಾವಣೆಯಲ್ಲಿರುವ ಮುತ್ತುಮಾರಿಯಮ್ಮ ದೇವಸ್ಥಾನದ ಬಾಗಿಲನ್ನು ಕಳ್ಳರು ಮುರಿದು ದೇವಸ್ಥಾನದೊಳಗೆ ಪ್ರವೇಶಿಸಿ ದೇವಿ ಮೇಲೆ ಹಾಕಿದ್ದ ಚಿನ್ನದ ಒಡವೆಗಳು, 2 ಬೆಳ್ಳಿ ಕಿರೀಟ ಹಾಗೂ ಹುಂಡಿಯಲ್ಲಿದ್ದ ನಗದು ಸೇರಿದಂತೆ ಒಟ್ಟು ಸುಮಾರು 1.60 ಲಕ್ಷ ಬೆಲೆಬಾಳುವ ವಸ್ತುಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement