ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸೌಲಭ್ಯ ವಂಚಿತ ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಒತ್ತು

Srinivasa Murthy VN
Updated On : 19 Sept 2013, 12:28 pm

ಕ.ಪ್ರ. ವಾರ್ತೆ, ಮಾಲೂರು. ಸೆ.18
ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ತಾಲೂಕಿನ ಗ್ರಾಮಾಂತರ ಪ್ರದೇಶದ ಅಬಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದಾಗಿ ಶಾಸಕ ಮಂಜುನಾಥ್ ಗೌಡ ಹೇಳಿದರು.
  ಅವರು ತಾಲೂಕಿನ ಜಯಮಂಗಲ ಪಂಚಾಯ್ತಿಯ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ 1 ಕೋಟಿ 6 ಲಕ್ಷ ರು. ಗಳ ವಿವಿಧ ಕಾಮಗಾರಿಗಳ ಚಾಲನೆ ಹಾಗೂ ಗ್ರಾಮ ಸಭೆಯಲ್ಲಿ ಮಾತನಾಡುತ್ತ ಗ್ರಾಮೀಣ ಭಾಗದ ಜನತೆಯ ಕಷ್ಟ-ಸುಖಗಳಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಅವರ ಹಕ್ಕು ಪಡೆಯಲು ಪಟ್ಟಣಕ್ಕೆ ಅಲೆಯುವುದನ್ನು ತಪ್ಪಿಸಬೇಕು ಎಂದರು.
ಗ್ರಾಮಗಳ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದರೂ, ಅವುಗಳು ಅರ್ಹ ಫಲಾನುಭವಿಗಳಿಗೆ ತಲುಪದೆ ಯೋಜನೆಯ ಉದ್ದೇಶ ವಿಫಲವಾಗುತ್ತಿದೆ. ಈ ಭಾಗದ ಜನತೆ ಪಿ.ನಂಬರ್‌ಗಾಗಿ ತಾಲೂಕು ಕಚೇರಿಗೆ ಅಲೆಯುತ್ತಿದ್ದು, ಇದರ ಬಗ್ಗೆ ತಹಸೀಲ್ದಾರ್ ಗಮನ ಹರಿಸಬೇಕು ಎಂದು ಸಭೆಯಲ್ಲಿ ತಹಸೀಲ್ದಾರ್ ರವರಿಗೆ ಆದೇಶಿಸಿದರು.  ಇದೇ ಸಂದರ್ಭದಲ್ಲಿ ಪಟ್ಟಣದಿಂದ ಹೂಸೂರು ಕಡೆ ಅಸರ್ಮಪಕ ಬಸ್ ಸಂಚಾರದಿಂದ ಶಾಲಾ-ಕಾಲೇಜು ತಲುಪಲು ಕಷ್ಟವಾಗುತ್ತಿದೆ ಎಂದು ಜಯಮಂಗಲ  ಪಂಚಾಯ್ತಿ ಗ್ರಾಮಗಳ ವಿದ್ಯಾರ್ಥಿಗಳು ಶಾಸಕರಲ್ಲಿ ದೂರಿದರು. ಸಂಚಾರ ಸಂಖ್ಯೆಯನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ವ್ಯವಸ್ಥೆ ಉತ್ತಮಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದರು.
ಸಭೆಗೆ ಮುನ್ನ ಶಾಸಕರು ಸಿದ್ದನಹಳ್ಳಿ ಗ್ರಾಮದಲ್ಲಿ ಸಿ.ಸಿ. ರಸ್ತೆ ಹಾಗೂ ಸುವರ್ಣ ಗ್ರಾಮ ಯೋಜನೆಗೆ ಶಂಕುಸ್ಥಾಪನೆ, ತಾಳಕುಂಟೆ, ಸೂಣ್ಣೂರು, ಜಯಮಂಗಲ, ಮಿಣಸಂದ್ರ, ಚೌಡದೇನಹಳ್ಳಿ ಯಲ್ಲಿ ಸಿ.ಸಿ.ರಸ್ತೆ, ತಾಳುಕುಂಟೆಯಲ್ಲಿ ಕೊಳವೆ ಬಾವಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಗೋಣೂರು ನಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನೆ, ತಹಸೀಲ್ದಾರ್ ಡಾ. ಸುಧಾ, ಚಿಕೋಮುಲ್ ಮಾಜಿ ಅಧ್ಯಕ್ಷ ಡಾ.ಪ್ರಸನ್ನ ಕುಮಾರ್, ಕೃಷಿ ಸಮಾಜ ಅಧ್ಯಕ್ಷ ಹನುಮಂತಪ್ಪ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ನಾರಾಯಣಸ್ವಾಮಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement