ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮಲೆಕ್ಕಿಗರಿಗೆ ಪಡಿತರ ಚೀಟಿ ಪರಿಷ್ಕರಣೆ ಕೆಲಸ ಬೇಡ

Srinivasa Murthy VN
Updated On : 19 Sept 2013, 11:03 am

ಕನ್ನಡಪ್ರಭ ವಾರ್ತೆ, ಕೋಲಾರ,ಸೆ.19
ಕಂದಾಯ ಇಲಾಖೆಯಲ್ಲಿ ಸರ್ಕಾರದ ಯೋಜನೆ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಗ್ರಾಮ ಲೆಕ್ಕಿಗರಿಗೆ ವಹಿಸಿರುವುದರ ಜೊತೆಗೆ ನಕಲಿ ಪಡಿತರ ಚೀಟಿಗಳ ಪರಿಷ್ಕರಣೆ ಕೆಲಸವನ್ನೂ ವಹಿಸಿರುವುದರಿಂದ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಗ್ರಾಮಲೆಕ್ಕಾಧಿಕಾರಿಗಳ ನೂತನ ರಾಜ್ಯಾಧ್ಯಕ್ಷ ಜಯರಾಮ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಸರ್ಕಾರ ಜನರನ್ನು ತೃಪ್ತಿ ಪಡಿಸಲು ಆನ್‌ಲೈನ್ ಮೂಲಕ ಸಲ್ಲಿಸಿರುವ ಎಲ್ಲಾ ಅರ್ಜಿದಾರರಿಗೆ ಪಡಿತರ ಚೀಟಿಗಳನ್ನು  ನೀಡಿರುವುದರಿಂದ ನಕಲಿ ಪಡಿತರ ಚೇಟಿದಾರರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.
 ಈಗ ಸರ್ಕಾರ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡಿಕೊಡುವಂತೆ ಗ್ರಾಮಲೆಕ್ಕಿಗರಿಗೆ ಸೂಚಿಸಿರುವುದರಿಂದ ನಾವುಗಳು ನೆಮ್ಮದಿಯಿಂದ ಕೆಲಸ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ತಿಳಿಸಿದರು. ಈಗಾಗಲೇ ಕೆಲಸದ ಒತ್ತಡದಿಂದ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿದ್ದು, ಸರ್ಕಾರ ಇದರ ನಿರ್ವಹಣೆಯನ್ನು ಬೇರೆಯವರೆಗೆ ನೀಡಬೇಕು ಒಂದು ವೇಳೆ ಬಲವಂತಾಗಿ ನೀಡಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 12500 ಹುದ್ದೆಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ ಇದೆ ಎಂದ ಅವರು,
ಜಿಲ್ಲೆಯಲ್ಲಿ ಶೇ.10 ರಷ್ಟು ಸಿಬ್ಬಂದಿ ಕೊರತೆಯಿದೆ ಎಂದು ತಿಳಿಸಿದರು.
ಪದಾಧಿಕಾರಿಗಳ ಆಯ್ಕೆ: ಬೆಂಗಳೂರಿನ ಕಂದಾಯ ಇಲಾಖೆಯಲ್ಲಿ ನಡೆದ ಗ್ರಾಮ ಲೆಕ್ಕಾಧಿಕಾರಿಗಳ ಪದಾಧಿಕಾರಿಗಳ ಸಭೆಯಲ್ಲಿ  ರಾಜ್ಯಾಧ್ಯಕ್ಷರನ್ನಾಗಿ ಜಯರಾಮ್, ಮುಳ್ಳಪ್ಪಗೌಡರ್ (ಉಪಾಧ್ಯಕ್ಷ), ಜಗದೀಶ್(ಪ್ರಧಾನ ಕಾರ್ಯದರ್ಶಿ),  ಮಂಜುನಾಥ್(ಖಚಾಂಚಿ)ಯಾಗಿ ಆಯ್ಕೆಯಾದರು ಎಂದು ತಿಳಿಸಿದರು. ವಿಭಾಗದ ಮಟ್ಟದ ಉಪಾಧ್ಯಕ್ಷರಾಗಿ ಶಿವಮೊಗ್ಗ ಶಿವಪ್ರಸಾದ್, ಮೈಸೂರು ನಂಜುಂಡಶೆಟ್ಟಿ, ಗುಲ್ಬರ್ಗ ಸೈಯದ್  ಯೂಸೂಪುದ್ದೀನ್, ಸಂಘಟನಾ ಕಾರ್ಯದರ್ಶಿ ಬಿ. ಮುನಿರಾಜು, ಗೌರವ ಸಲಹೆಗಾರರಾಗಿ ಎಚ್.ಕೆ. ಪ್ರಾಣೇಶ್,  ಆಯ್ಕೆಯಾಗಿದ್ದಾರೆ ಎಂದು ಹೇಳಿದರು.ವಿಭಾಗ ಮಟ್ಟದ ಜಂಟಿಕಾರ್ಯದರ್ಶಿಗಳಾಗಿ ಬೆಳಗಾವಿ ಮಲ್ಲಾಡದ್, ರಾಯಚೂರು ಖಾಜಾ ಮೌನುದ್ದೀನ್, ಮಡಿಕೇರಿ ಉಮೇಶ್ ಆಯ್ಕೆಯಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಸುಬ್ರಮಣಿ, ದಯನಂದಸಾಗರ್, ರಮೇಶ್‌ಕುಮಾರ್, ಜಗದೀಶ್, ಜಯಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement