ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಗರದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ

Srinivasa Murthy VN
Updated On : 19 Sept 2013, 11:04 am

ಕ.ಪ್ರ.ವಾರ್ತೆ ಕೋಲಾರ ಸೆ.19
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಲೈಂಗಿಕ ಕಿರುಕುಳ ತಪ್ಪಿಸಲು ಪ್ರೌಢಶಾಲಾ ಹಂತದಲ್ಲಿ ಆತ್ಮರಕ್ಷಣೆಗಾಗಿ ಕರಾಟೆ ಶಿಕ್ಷಣ ನೀಡಲು ಮುಂದಾಗಿದ್ದು, ನಗರದಲ್ಲಿ ಬ್ರೂಸ್ಲಿ ಕರಾಟೆ ಶಾಲೆ ಸಂಸ್ಥಾಪಕ ಶ್ರೀನಿವಾಸ್ ಶಿಕ್ಷಕರಿಗೆ ತರಬೇತಿ ನೀಡಲಾರಂಭಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶನದಂತೆ ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ದೈಹಿಕ ಶಿಕ್ಷಕರು ಇಲ್ಲವೇ ಒಬ್ಬ ಶಿಕ್ಷಕರಿಗೆ ಕರಾಟೆ ತರಬೇತಿ ನೀಡಲಾಗುತ್ತಿದೆ.
ಈ ಶಿಕ್ಷಕರು ಕರಾಟೆ ಕಲಿತು ಅದನ್ನು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಕಲಿಸುವ ಹೊಣೆ ಹೊತ್ತಿದ್ದು, ಇದೀಗ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದ ಸಮೀಪ ಶಿಕ್ಷಕರಿಗೆ ಈ ತರಬೇತಿ ನೀಡಲಾಗುತ್ತಿದೆ.
ವಿವಿಧ ಪ್ರೌಢಶಾಲೆಗಳ 28 ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದು, ನಗರದ ಖ್ಯಾತ ಕರಾಟೆ ಪಟು ಹಾಗೂ ಚಿತ್ರನಟ ಶ್ರೀನಿವಾಸ್ ತರಬೇತಿ ನೀಡುತ್ತಿದ್ದಾರೆ.
ತರಬೇತಿ ಕಾರ್ಯಾಗಾರದಲ್ಲಿ ಕ್ಷೇತ್ರ ಸಂಪನ್ಮೂಲ ಬಿಆರ್‌ಸಿ ಸಿ.ಶ್ರೀನಿವಾಸ್, ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜಜ್ಚಿಲಕಾಂತ ಮಠ್ ನೇತೃತ್ವ ವಹಿಸಿದ್ದು, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಮುರಳಿ ಮೋಹನ್, ಚೌಡಪ್ಪ, ಶಿಕ್ಷಕ ಸತೀಶ್ ಎಸ್. ನ್ಯಾಮತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement