ಪಡಿತರ ಸೀಮೆಎಣ್ಣೆ ಅಕ್ರಮ ಸಾಗಾಟ: ಟೆಂಪೋ ವಶ, ಒಬ್ಬನ ದಸ್ತಗಿರಿ
ಚಿಂತಾಮಣಿ: ಪಡಿತರ ಚೀಟಿದಾರರಿಗೆ ವಿತರಿಸುವ ಸರ್ಕಾರಿ ಸೀಮೆಎಣ್ಣೆಯನ್ನು ಅಕ್ರಮವಾಗಿ ಟೆಂಪೋ ಒಂದರಲ್ಲಿ ಹಾಡಹಗಲೇ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 10 ಬ್ಯಾರರ್ ಸೀಮೆ ಎಣ್ಣೆ ವಾಹನ ಸಮೇತ ಚಾಲಕನನ್ನು ಬಂಧಿಸಿರುವ ಘಟನೆ ಪಟ್ಟಣದಲ್ಲಿ ಗುರುವಾರ ಬೆಳೆಗ್ಗೆ ನಡೆದಿದೆ.
ಪಟ್ಟಣದ ಯೋಗಿ ನಾರಾಯಣ ವೃತ್ತದ ಬಳಿ(ಪೆಟ್ರೋಲ್ ಬಂಕ್ ಹತ್ತಿರ) ಸೊಣ್ಣಶೆಟ್ಟಹಳ್ಳಿ ನಿವಾಸಿ ನೂರ್‌ಪಾಷ ಎಂಬ ಚಾಲಕ ಖಾಸಗಿ 407 ಟೆಂಪೋದಲ್ಲಿ ಅಕ್ರಮವಾಗಿ ಸಾರ್ವಜನಿಕರ ಪಡಿತರ ಚೀಟಿದಾರರಿಗೆ ವಿತರಿಸುವ ಸರ್ಕಾರಿ ಸೀಮೆಎಣ್ಣೆಯನ್ನು 10 ಬ್ಯಾರೆಲ್ ಸೇರಿ ವಾಹನ ಸಮೇತ ಪೊಲೀಸರು ಚಾಲಕನನ್ನು ಬಂಧಿಸಿ ಸಾವಿರಾರು ರು. ಬೆಲೆ ಬಾಳುವ ಸೀಮೆ ಎಣ್ಣೆಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆಯನ್ನು ನಗರ ವೃತ್ತ ನಿರೀಕ್ಷಕ ನಂಜಪ್ಪ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
ಸಾರ್ವಜನಿಕರ ಆಕ್ರೋಶ: ಪಟ್ಟಣದ ಗುರುಭವನ ಮುಂಬಾಗದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ವಿತರಿಸುವ ನೀಲಿ ಸೀಮೆಎಣ್ಣೆ 2200 ಲೀಟರ್(10 ಬ್ಯಾರಲ್‌ನಷ್ಟು ಮಾಲು ಸಮೇತ ಅಕ್ರಮವಾಗಿ ಚಿಂತಾಮಣಿ ಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಹೆಚ್.ಕ್ರಾಸ್‌ಗೆ ಪಟ್ಟಣದ ಸೊಣ್ಣಶೆಟ್ಟಹಳ್ಳಿ ಹಲವು ರಾಜಕೀಯ ಹಿಂಬಾಲಕರು ಮತ್ತು ಬಲಾಢ್ಯರು ಬಡ ಕುಟುಂಬಗಳಿಗೆ ವಿತರಿಸುವ ಸೀಮೆ ಎಣ್ಣೆಯನ್ನು ಕಾಳು ಸಂತೆಯಲ್ಲಿ ಪ್ರತಿ ಲೀಟರ್‌ಗೆ 50 ರು. ನಂತೆ ಮಾರಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮೌನವಾಗಿರುವ ಬಗ್ಗೆ ಇಂತಹ ಘಟನೆ ಉದಾಹರಣೆಯಾಗಿದೆಯೆಂದು ಸಾರ್ವಜನಿಕರು ಸ್ಥಳೀಯ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.