ಬಾರದ ಸಚಿವರು; ನಿರಾಶರಾದ ಜನ
ಬಂಗಾರಪೇಟೆ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭೇಟಿ ನೀಡಲಿದ್ದಾರೆಂದು ಆಸ್ಪತ್ರೆಯನ್ನು ಆಡಳಿತ ಮಂಡಳಿ ಶುಚಿತ್ವಗೊಳಿಸಿ ಕಾದು ಕುಳಿತಿದ್ದರೂ ಸಚಿವರು ಬಾರದೆ ಇದ್ದುದರಿಂದ ನೆಮ್ಮದಿ ಉಸಿರಾಡಿದರು. ಇಲ್ಲಿನ ಸಾರ್ವಜನಿಕರ ಆಸ್ಪತ್ರೆ ಎಂದರೆ ಎಲ್ಲರೂ ಮೂಗುಮುರಿಯುವರು ಅಷ್ಟರ ಮಟ್ಟಿಗೆ ಆಸ್ಪತ್ರೆ ಜನರಿಂದ ದೂರವಾಗಿದೆ. ಈ ಹಿಂದೆ ಹಲವು ಬಾರಿ ಸಂಘ ಸಂಸ್ಥೆಗಳು ಪ್ರತಿಭಟನೆ ಮಾಡಿದರೂ ಆಸ್ಪತ್ರೆಯಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಇಲ್ಲಿಗೆ ಬರುವ ರೋಗಿಗಳಿಗೇ ಸಮಯಕ್ಕೆ ಚಿಕಿತ್ಸೆ ದೊರೆಯದೆ ದೂರದ ಕೋಲಾರ, ಬೆಂಗಳೂರಿಗೆ ರೋಗಿಗಳು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ ಇಂತಹ ವೇಳೆ ಸದರಿ ಆಸ್ಪತ್ರೆಯನ್ನು 30 ಹಾಸಿಗೆಯಿಂದ 100ಹಾಸಿಗೆ ಆಸ್ಪತ್ರೆ ಏರಿಸಲಾಗಿ ಹತ್ತು ವರ್ಷಗಳೇ ಕಳೆದರೂ 100 ಆಸ್ಪತ್ರೆಗೆ ಬೇಕಾದ ವೈದ್ಯರು, ಸಿಬ್ಬಂದಿ ಮತ್ತಿತರೆ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿತ್ತು. ಆದರೆ ಕಟ್ಟಡ ಮಾತ್ರ ನಿರ್ಮಾಣವಾಗಲೇ ಇಲ್ಲ. ಈಗ ಮಂಜೂರಾಗಿದ್ದ 100 ಹಾಸಿಗೆ ಆಸ್ಪತ್ರೆ ಈಗ ರದ್ದಾಗಿದೆ. ಹೆಸರಿಗೆ ಸರ್ಕಾರಿ ಆಸ್ಪತ್ರೆ ಇಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ರೋಗಿಗಳು ನರಳಾಡುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ. ಹೊಸದಾಗಿ ಅಧಿಕಾರಕ್ಕೆ ಬಂದಾಗ ಮೊದಲು ಎಲ್ಲರೂ ಈ ಆಸ್ಪತ್ರೆಯನ್ನೇ ಟಾರ್ಗೇಟಟ್ಮಾಡಿಕೊಳ್ಳುವರು ಏನೋ ಬದಲಾವಣೆ ತರುವುದಾಗಿ ವೀರಾವೇಶದಲ್ಲಿ ಮಾತನಾಡುವರು ನಂತರ ಯಥಾಸ್ಥಿತಿ.ನೂತನ ಶಾಸಕರಾದ ನಾರಾಯಣಸ್ವಾಮಿ ಸಹ ಮೂರು ತಿಂಗಳ ಹಿಂದೆ ದಿಢೀರ್ ಭೇಟಿ ನೀಡಿ ನಾಲ್ಕು ತಿಂಗಳಲ್ಲಿ ವ್ಯವಸ್ಥೆ ಬದಲಿಸುವುದಾಗಿ ಹೇಳಿದ್ದರು.