ಎಲ್ಲಕ್ಕಿಂತ ಆರೋಗ್ಯ ಭಾಗ್ಯ ಮುಖ್ಯ: ಕೆ. ಚಂದ್ರಾರೆಡ್ಡಿ
ಬಂಗಾರಪೇಟೆ: ಮನುಷ್ಯರಿಗೆ ಎಲ್ಲಾ ಭಾಗ್ಯಕ್ಕಿಂತಲೂ ಆರೋಗ್ಯ ಭಾಗ್ಯ ಮುಖ್ಯ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ನಿಗಾವಹಿಸಿ ಉತ್ತಮ ಹಾಗೂ ಸಾರ್ಥಕ ಜೀವನ ನಡೆಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ಎನ್.ಜೆ.ಕೆ. ಗಾರ್ಮೆಂಟ್ಸ್‌ನಲ್ಲಿ ನೌಕರರಿಗೆ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ತನ್ನ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗದೆ ನಾನಾ ರೋಗಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಅಶಾಂತಿ ಉಂಟಾಗಿ ಸಂಕಷ್ಟಗಳಿಗೆ ಸಿಲುಕುವರು. ಹಣ ಗಳಿಗೆಯೇ ಮುಖ್ಯವಲ್ಲ. ಆರೋಗ್ಯ ರಕ್ಷಣೆ ಸಹ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು. ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಆರೋಗ್ಯ ತಪಾಸಣೆಗೆ ಸಮಯ ಕೊರತೆ ಇರುವುದರಿಂದ ಲಯನ್ಸ್ ಕ್ಲಬ್‌ನವರು ಆರೋಗ್ಯ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಆರೋಕ್ಯರಾಜನ್ ಮಾತನಾಡಿ, ಇಂದಿನ ಆರೋಗ್ಯ ಶಿಬಿರದಲ್ಲಿ 800 ಮಂದಿಗೆ ಅನುಕೂಲವಾಗಿದೆ. ಈ ಶಿಬಿರವನ್ನು ಇನ್ನಷ್ಟು ವಿಸ್ತರಿಸಲಾಗುವುದು. ಲಯನ್ಸ್ ಕ್ಲಬ್ ಹಲವು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡಿಕೊಂಡು ಎಲ್ಲಾ ವರ್ಗದ ಜನಮನದಲ್ಲಿ ಉಳಿಯುವಂತಾಗಿದೆ ಎಂದರು. ಗಾರ್ಮೆಂಟ್ಸ್ ಮುಖ್ಯಸ್ಥ ಸೂರ್ಯಕಾಂತ್, ಬೂದಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ರೇಲ್ವೆ ಸಲಹಾ ಸಮಿತಿ ಸದಸ್ಯ ಡಿ. ಕಿಶೋರ್‌ಕುಮಾರ್, ಅಚ್ಯುತನ್, ಆದಿಲ್‌ಪಾಷ, ವೈದ್ಯರಾದ ಡಾ. ಪ್ರೇಮ, ಡಾ. ಜ್ಯೋತಿ, ಡಾ. ಅನಿತಾ, ಡಾ. ಚಂದ್ರಶೇಖರ್ ಇತರರು ಇದ್ದರು.
ಇಂದು ವಾರ್ಷಿಕ ಮಹಾಸಭೆ
ತಿಪಟೂರು: ದೊಡ್ಡಯ್ಯನಪಾಳ್ಯನ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ 13ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಸ್. ಸೋಮಶೇಖರ್ ಅಧ್ಯಕ್ಷತೆಯಲ್ಲಿ ಭಾನುವಾರ ಮಧ್ಯಾಹ್ನ 12ಗಂಟೆಗೆ ಸಂಘದ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ.