ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮೃತ್ಯುಕೂಪವಾಗಿರುವ ರಸ್ತೆಗಳು

Srinivasa Murthy VN
Updated On : 23 Sept 2013, 1:24 am

ಕ.ಪ್ರ.ವಾರ್ತೆ ಕೋಲಾರ ಸೆ. 22
ನಗರದ ರಸ್ತೆಗಳು ಮೃತ್ಯುಕೂಪವಾಗಿರುವುದರಿಂದ ವಾಹನಗಳ ಓಡಾಟಕ್ಕೆ ತೊಂದರೆಯಾಗಿದೆ.
ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಆತಂಕಗೊಂಡಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಕನಿಷ್ಠ ಗುಂಡಿಗಳನ್ನು ಮುಚ್ಚಿ ಜನತೆಯ ಪ್ರಾಣ ಕಾಪಾಡಲು ಗಮನ ನೀಡುತ್ತಿಲ್ಲ.
ನಗರದ ವಿಜಯ ಬ್ಯಾಂಕ್ ಮುಂಭಾಗದ ರಸ್ತೆಯಲ್ಲಿ ಐದಾರು ಗುಂಡಿಗಳು ಕಂಡು ಬಂದಿದ್ದರೂ ಲೋಕೋಪಯೋಗಿ ಇಲ್ಲವೇ ನಗರಸಭೆಯಿಂದ ಗುಂಡಿ ಮುಚ್ಚುವುದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಜನತೆಯ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ಕೋಲಾರಮ್ಮ ಕೆರೆ ಬಳಿ ಹೊಸ ಸೇತುವೆ, ಎಪಿಎಂಸಿ ಮುಂಭಾಗದ ಪೂಜಾ ಕಲ್ಯಾಣಮಂಟಪದ ಮುಂಭಾಗದ ರಸ್ತೆ, ಮೆಕ್ಕೆ ವೃತ್ತದಿಂದ ಜಿಲ್ಲಾ ಎಸ್ಪಿ ಮನೆಗೆ ಹೋಗುವ ರಸ್ತೆ ಸೇರಿದಂತೆ ಅನೇಕ ಕಡೆ ರಸ್ತೆಗಳು ಹಾಳಾಗಿದ್ದರೂ ಅಧಿಕಾರಿಗಳು ಗಮನ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ.
ಮಳೆ ನಿಂತಿರುವುದರಿಂದ ಕೂಡಲೇ ಗುಂಡಿ ಮುಚ್ಚಬೇಕು. ಸೆ.25 ರಂದು ಕೋಲಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿರುವುದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೋರಿ ಮನವಿ ಸಲ್ಲಿಸುವ ಮೂಲಕ ಮೃತ್ಯುಕೂಪವಾಗಿರುವ ರಸ್ತೆಗಳಿಗೆ ಮುಕ್ತಿ ದೊರಕಿಸಬೇಕೆಂದು ಜನತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement