ಶಾಶ್ವತ ನೀರಾವರಿ ಶೀಘ್ರವೇ ಅನುಷ್ಠಾನವಾಗಲಿ: ಕೋಡಿಹಳ್ಳಿ
ಚಿಂತಾಮಣಿ: ಶಾಶ್ವತ ನೀರಾವರಿ ಯೋಜನೆ ಜಾರಿಗೆಗಾಗಿ ಸರ್ಕಾರ ಕೂಡಲೇ ಎಚ್ಚೆತ್ತು ಕೂಡಲೇ ಯೋಜನೆ ಜಾರಿ ಮಾಡಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ರೈತರ ಹಾಗೂ ಕೂಲಿ ಕಾರ್ಮಿಕರ ಹಲವು ದಶಕಗಳ ಬೇಡಿಕೆಯಾದ ಶಾಶ್ವತ ನೀರಾವರಿ ಯೋಜನೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದರು.
ಎಚ್.ಆರ್. ಬಸವರಾಜಪ್ಪ, ಹಿರಿಯ ರೈತ ಮುಖಂಡ ಕಡಿದಾಳ್ ಶಾಮಣ್ಣ, ಜಿ. ನಾರಾಯಣಸ್ವಾಮಿ, ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಅವರು ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ನೂರಾರು ರೈತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಎಂ.ಪಿ ಬೈಯ್ಯಪ್ಪರೆಡ್ಡಿ, ಜಿಲ್ಲಾ ಸಂಚಾಲಕ ಬಿ.ಎಚ್. ನರಸಿಂಹಪ್ಪ, ಜಿಲ್ಲಾ ಸಂಚಾಲಕ ಟಿ.ರಾಮಕೃಷ್ಣ, ವೆಂಕಟರವಣಪ್ಪ, ನಾಗೇಶ, ನಾರಾಯಣಸ್ವಾಮಿ, ವೆಂಕಟರವಣಪ್ಪ, ಕೋನಪ್ಪ, ಕೋನಪ್ಪರೆಡ್ಡಿ, ವೆಂಕಟರೋಣಪ್ಪ(ನೀಲಪ್ಪಲ್ಲಿ), ಅನಂತರೆಡ್ಡಿ, ಶಾಂತಮ್ಮ, ರಾಮಮೂರ್ತಿ, ಗಂಗಪ್ಪ, ನಾಗರಾಜಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ರೇಷ್ಮೆ ಬೆಳೆಗಾರರ ಭೇಟಿ
ಶಿಡ್ಲಘಟ್ಟ: ತಾಲೂಕಿನ ಹಿತ್ತಲಹಳ್ಳಿಯ ಎಚ್.ಜಿ. ಗೋಪಾಲಗೌಡ ಅವರ ಜಮೀನಿಗೆ ಶನಿವಾರ ಬೆಂಗಳೂರಿನ ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನಾ ಸಂಸ್ಥೆಯಲ್ಲಿ ನಾಲ್ಕು ದಿನಗಳ ಕಾಲ ತರಬೇತಿ ಪಡೆದ ರಾಜ್ಯದ ವಿವಿಧ ಜಿಲ್ಲೆಗಳ 96 ಮಂದಿ ರೇಷ್ಮೆ ಬೆಳೆಗಾರರು ಭೇಟಿ ನೀಡಿ ವಿಜ್ಞಾನಿಗಳು, ಅಧಿಕಾರಿಗಳು ರೈತರಿಂದ ಮಾಹಿತಿ ಸಂಗ್ರಹಿಸಿದರು. ವಿಜ್ಞಾನಿಗಳಾದ ಡಾ. ಎಂ. ವೀರೇಶ್ ಮತ್ತು ಡಾ. ಎಂ.ವಿ. ಹಾದಿಮನಿ ಅವರು ರೈತರಿಗೆ ರೇಷ್ಮೆ ಕೃಷಿಯಲ್ಲಿನ ರೋಗ ಲಕ್ಷಣಗಳು ಮತ್ತು ಹತೋಟಿ ವಿಧಾನಗಳ ಬಗ್ಗೆ ವಿವರಿಸಿದರು. ಡಾ. ಶಿವಾನಂದ್ ಹೊಸ ತಾಂತ್ರಿಕತೆ ಬಗ್ಗೆ ಮಾಹಿತಿ ಒದಗಿಸಿದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್,