ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

27 ರಿಂದ ರಾಜ್ಯ ಮಟ್ಟದ ರಾಕ್‌ಬಾಲ್ ಪಂದ್ಯಾವಳಿ

Srinivasa Murthy VN
Updated On : 24 Sept 2013, 12:47 pm

ಚಿಕ್ಕಬಳ್ಳಾಪುರ: ನಗರದ ಹೊರ ವಲಯದಲ್ಲಿರುವ ಸಿವಿವಿ ಕ್ಯಾಂಪಸ್‌ನಲ್ಲಿ 4 ನೇ ರಾಷ್ಟ್ರೀಯ ಸಬ್ ಜೂನಿಯರ್ ಮತ್ತು ಜೂನಿಯರ್ ಬಾಲಕ ಬಾಲಕಿಯರ ಮೂರು ದಿನಗಳ ರಾಕ್‌ಬಾಲ್ ಪಂದ್ಯಾವಳಿಗಳನ್ನು ಸೆ.27, 28 ಮತ್ತು 29 ರಂದು ಆಯೋಜಿಸಲಾಗಿದೆ ಎಂದು ಅಮೆಚರ್  ರಾಕ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಘಟನೆ ಉಪಾಧ್ಯಕ್ಷ ಕೆ.ವಿ.ನವೀನ್‌ಕಿರಣ್ ತಿಳಿಸಿದರು.
ಈ ಸಂಬಂಧ ಸಿವಿವಿ ಕ್ಯಾಂಪಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ವಿ.ಶಿಕ್ಷಣ ದತ್ತಿ ಮತ್ತು ರಯಾನ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಸೆ.27 ರಿಂದ ಸೆ.29 ರವರೆಗೆ 4 ನೇ ರಾಕ್‌ಬಾಲ್ ಪಂದ್ಯಾವಳಿ ನಡೆಸುತ್ತಿದ್ದು ಈಗಾಗಲೇ 21 ರಾಜ್ಯಗಳಿಂದ ಜೂನಿಯರ್ ವಿಭಾಗದಲ್ಲಿ 18 ಬಾಲಕರು ಮತ್ತು 11 ಬಾಲಕಿಯರು, ಸಬ್ ಜೂನಿಯರ್ ವಿಭಾಗದಲ್ಲಿ 16 ಬಾಲಕರು ಮತ್ತು 12 ಬಾಲಕಿಯರ ತಂಡಗಳು ಸೇರಿದಂತೆ ಸುಮಾರು 57 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿವೆ ಎಂದು ತಿಳಿಸಿದರು.
ಪಂದ್ಯಾವಳಿ ಉದ್ಘಾಟನೆಯು ಸೆ.27 ರಂದು ಮಧ್ಯಾಹ್ನ 4 ಗಂಟೆಗೆ ನೆರವೇರಲಿದೆ. ರಾಜ್ಯ ವಿಧಾನಸಭೆ ಉಪಾಧ್ಯಕ್ಷ ಎನ್.ಹೆಚ್.ಶಿವಶಂಕರರೆಡ್ಡಿ, ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ ಯು.ಟಿ.ಖಾದರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯ ಚಂದ್ರಜೈನ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ನಸೀರ್ ಅಹಮದ್, ಕ್ರಿಕೆಟಿಗ ದೊಡ್ಡಗಣೇಶ್,  ಕಾರ್ಯದರ್ಶಿ ಜಿ.ಹೆಚ್.ನಾಗರಾಜ್, ಸಂಘದ ಅಧ್ಯಕ್ಷ ಸುರೇಶ್‌ಗಾಂಧಿ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ತಾಂತ್ರಿಕ ಸಮಿತಿ ಅಧ್ಯಕ್ಷ ಅಮರೇಂದ್ರ, ಎಂ.ಆಂಜಿನಪ್ಪ,    ಕೆ.ವಿ.ದೈಹಿಕ ಶಿಕ್ಷಣ ಪ್ರಾಂಶುಪಾಲ ಆರ್.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement