ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿ. ಗೀತಾ ಆಯ್ಕೆ

Srinivasa Murthy VN
Updated On : 24 Sept 2013, 12:48 pm

ಕೋಲಾರ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮ್ಮೇಳನ ಮಂಡ್ಯ ಜಿಲ್ಲೆಯ ಮದ್ದೂರು ನಗರದಲ್ಲಿ ಸೆಪ್ಟೆಂಬರ್ 21 ರಿಂದ 23 ರವರೆಗೆ ನಡೆದು ನೂತನ ರಾಜ್ಯಾಧ್ಯಕ್ಷೆಯಾಗಿ ವಿ. ಗೀತಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ದೌರ್ಜನ್ಯ ಮುಕ್ತ ಬದುಕು ನಮ್ಮ ಹಕ್ಕು ಘೋಷಣೆಯಡಿ ಕರ್ನಾಟಕ ರಾಜ್ಯ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿನಿಧಿಗಳು ಮೂರು ದಿನಗಳ ಕಾಲ ಸಮ್ಮೇಳನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಮುಖ್ಯವಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು, ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ರಾಜ್ಯದಲ್ಲಿ ಜನವಾದಿ ಮಹಿಳಾ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೊನೆಯಲ್ಲಿ ನೂತನ ರಾಜ್ಯ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ನೂತನ ರಾಜ್ಯ ಸಮಿತಿಯ ರಾಜ್ಯಾಧ್ಯಕ್ಷೆಯಾಗಿ ಕೋಲಾರದಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಂತಹ ವಿ. ಗೀತಾ ಆಯ್ಕೆಯಾಗಿರುತ್ತಾರೆ.

ಸಂಗೀತ ಕಾರ್ಯಕ್ರಮ
ಚಿಂತಾಮಣಿ: ಕೈವಾರ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ಅಂಧ ಕಲಾವಿದ ವಿದ್ವಾನ್ ಮಹಾಲಿಂಗಯ್ಯ ಮಠದ್ ಮತ್ತು ಸ್ವರ ಚೇತನ್ ಮತ್ತು ಸಪ್ತಸ್ವರ ಸಂಗೀತ ಶಾಲೆ ಚಿಕ್ಕಬಳ್ಳಾಪುರ ತಂಡದವರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇವರಿಗೆ ಸಹ ಗಾಯನದಲ್ಲಿ ಶಂಕರಯ್ಯ ಮಠದ್, ಶಾರದಮಠದ್,  ಎಂ.ಚೇತನ್ ಸಹಕರಿಸಿದರು. ಪಕ್ಕವಾದ್ಯದಲ್ಲಿ ಅಂಧ ಕಲಾವಿದರಾದ ವೆಂಕಟೇಶ್, ಶಂಕರ್, ಮಂಜುನಾಥ್ ಹಾರ್ಮೋನಿಯಂ. ತಬಲ ಸಹಕಾರ ನೀಡಿದರು.  ಇದೇ ವೇಳೆ ಕಲಾವಿದರನ್ನು ಸನ್ಮಾನಿಸಿದ ಬಾಲಕೃಷ್ಣ ಭಾಗವತರ್ ಮಾತನಾಡಿದರು.

ಶಿಡ್ಲಘಟ್ಟ: ಇಂದು ಪೌರ ಕಾರ್ಮಿಕರ ದಿನಾಚರಣೆ
ಶಿಡ್ಲಘಟ್ಟ: ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಪೌರ ಕಾರ್ಮಿಕರ ದಿನವನ್ನು ಆಚರಿಸುತ್ತಿರುವುದಾಗಿ ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ ಆಸ್ಪತ್ರೆಯಲ್ಲಿ ಸಾರ್ವಜನಿಕೊಂದಿಗೆ ಶಾಸಕರ ಸಂವಾದ
ಶಿಡ್ಲಘಟ್ಟ: ಸೆ.25 ರಂದು ಶಾಸಕ ಎಂ. ರಾಜಣ್ಣನವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಆಸ್ಪತ್ರೆಯ ಕಟ್ಟಡದ ಭದ್ರತೆ, ಸ್ವಚ್ಛತೆ ಹಾಗೂ ಆಸ್ಪತ್ರೆಯಲ್ಲಿನ ಕುಂದುಕೊರತೆಗಳ ಬಗ್ಗೆ ಶಾಸಕರ ಜೊತೆ ಸಂವಾದ ನಡೆಯಲಿದೆ. ಸಭೆಯಲ್ಲಿ ಶಾಸಕರು, ಎಲ್ಲಾ ಆರ್ಯೋಗಾಧಿಕಾರಿಗಳು, ನಗರಸಭಾ ಸದಸ್ಯರು ಸಭೆಯಲ್ಲಿ ಭಾಗವಹಿಸುವರು.

ಸ್ವಚ್ಛತೆಗೆ ಹೆಚ್ಚು ಶ್ರಮಿಸಿ: ಪೌರಕಾರ್ಮಿಕರಿಗೆ ಕರೆ
ಗೌರಿಬಿದನೂರು: ಪಟ್ಟಣದ ಸ್ವಚ್ಛತೆ ಹಾಗೂ ಸೌಂದರ್ಯಕ್ಕಾಗಿ ಪೌರಕಾರ್ಮಿಕರು ಹೆಚ್ಚು ಶ್ರಮಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕೆಂದು ತಹಶೀಲ್ದಾರ್ ಡಾ. ಭಾಸ್ಕರ್ ತಿಳಿಸಿದರು. ಅವರು ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಗೌರಿಬಿದನೂರು ಪಟ್ಟಣದ ಪುರಸಭೆಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ಪಟ್ಟಣದ ಸೌಂದರ್ಯ, ನೈರ್ಮಲ್ಯ, ಜನರ ಆೋಗ್ಯದ ಬಗ್ಗೆ ಪೌರಕಾರ್ಮಿಕರು ಹೆಚ್ಚಿನ ಆದ್ಯತೆ ನೀಡಬೇಕು ಸ್ವಚ್ಚ ನಗರವನ್ನಾಗಿ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿ ಎಂದ ಅವರು ಹಗಲಿರುಳು ದುಡಿಯುವ ಪೌರಕಾರ್ಮಿಕರ ಸೌಕರ್ಯಗಳಿಗೆ ನಾವೂ ಸಹ ಬದ್ಧರಾಗಿದ್ದೇವೆ. ಪ್ರಮುಖವಾಗಿ ನಿವೇಶನಕ್ಕಾಗಿ ಕಂದಾಯ ಇಲಾಖೆಯನ್ನು ಸ್ಥಳ ಪರಿಶೀಲನೆ ನಡೆಸಿ ನೀಡಲಾಗುವುದು ನಂತರ ಅದನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಪೌರಕಾರ್ಮಿಕರು ಉಪಯೋಗಿಸಿಕೊಳ್ಳಿ ಎಂದು ತಹಶೀಲ್ದಾರ್ ಭರವಸೆ ನೀಡಿದರು.
ಪುರಸಭಾ ಸದಸ್ಯ  ರಮೇಶಶ್ವಿ. ಜಿ. ಬಾಲಾಜಿ, ಅನಂತರಾಜ್ ಚಿದಾನಂದ ಗುಪ್ತಾ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ ಪೌರಸೇವಾ ನೌಕರರು ಪಟ್ಟಣದ ಶುಚಿತ್ವಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಯಾವುದೇ ಬೇಡಿಕೆಗಳಿಗೆ ನಾನು ಸ್ಪಂದಿಸುತ್ತೇನೆ ಅದೇರೀತಿ ನೌಕರರೂ ಸಾರ್ವಜನಿಕರ ಕುಂದುಕೊರತೆಗಳ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು. ಪೌರಸೇವಾ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಕೇರಿ ವ್ಯವಸ್ಥಾಪಕ ಅಮರನಾರಾಯಣ್, ಅಭಿಯಂತರರಾದ ಅರುಣ್, ತ್ಯಾಗರಾಜ್,  ಪರಿಸರ ಅಭಿಯಂತರ ತಿಮ್ಮರಾಜು, ಆರೋಗ್ಯಾಧಿಕಾರಿ ಶಿವಣ್ಣ ಶಿವಣ್ಣ, ಶಂಕರ್, ನಾರಾಯಣ, ಹಾಗೂ ಪುರಸಭಾ ಸದಸ್ಯರು ಇದ್ದರು.

ಆಂಧ್ರದಲ್ಲಿ ಕಳವು:  ಮಾಹಿತಿ ಸಂಗ್ರಹಣೆ
ಕೆಜಿಎಫ್: ಆಂಧ್ರದ ಕಡಪ ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ ಕೋಟ್ಯಂತರ ಹಣವನ್ನು ಕಳ್ಳರು ದೋಚಿಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಕಡಪ ಜಿಲ್ಲೆಯ  ಪೊಲೀಸ್ ಅಧಿಕಾರಿಗಳು ಕೆಜಿಎಫ್ ವ್ಯಾಪ್ತಿಯ ಗಡಿ ಪ್ರದೇಶ ಪೊಲೀಸ್ ಠಾಣೆಗಳು ಸೇರಿದಂತೆ ತಮಿಳುನಾಡು, ಆಂಧ್ರ ಗಡಿ ಭಾಗದ  ಠಾಣೆಗಳಿಗೆ ತೆರಳಿ ಮಾಹಿತಿ ಮತ್ತು ವಿವರಗಳನ್ನು ಪಡೆದುಕೊಂಡಿರುವುದಾಗಿ ಕೆಜಿಎಫ್ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.  ಬೇತಮಂಗಲದ ಠಾಣಾ ವ್ಯಾಪ್ತಿಯಲ್ಲಿ ಆಕ್ಸಿಸ್ ಬ್ಯಾಂಕ್‌ನ ಎಟಿಎಂ ಯಂತ್ರ ಕಳವು ಮಾಡಲು ಕಳ್ಳರು ವಿಫಲಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮಾಹಿತಿ ಕಲೆಯಾಕಿದ್ದಲ್ಲದೆ, ಇದು ಸೇರಿದಂತೆ ಇತರೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳ ಮನೆಗಳಿಗೆ ಭೇಟಿ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

26ರಿಂದ ವಿವಿಧೆಡೆಅಹವಾಲು ಸಭೆ
ಚಿಕ್ಕಬಳ್ಳಾಪುರ: ಸರ್ಕಾರಿ ಕಚೇರಿಗಳಲ್ಲಿ ಲಂಚಕ್ಕಾಗಿ ಪೀಡಿಸುವ ಅಧಿಕಾರಿಗಳ ವಿರುದ್ಧ ದೂರು ಸ್ವೀಕರಿಸಲು ಲೋಕಾಯುಕ್ತ ಪೊಲೀಸರು ಅಹವಾಲು ಸ್ವೀಕಾರ ಸಭೆ ಹಮ್ಮಿಕೊಂಡಿದ್ದಾರೆ.  ಸೆ.26 ರ ಬೆಳಗ್ಗೆ 11 ಗಂಟೆಗೆ ಚಿಂತಾಮಣಿ ನಗರದ ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ, ಸೆ.27 ರ ಬೆಳಗ್ಗೆ 11 ಗಂಟೆಗೆ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಮದ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಗುಡಿಬಂಡೆ ತಾಲೂಕಿನ ತಾಪಂ ಕಚೇರಿ ಸಭಾಂಗಣದಲ್ಲಿ, ಸೆ.28 ರ ಬೆಳಗ್ಗೆ 11 ಗಂಟೆಗೆ ಗೌರಿಬಿದನೂರಿನ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರ ತಾಪಂ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.

ಆನ್‌ಲೈನ್ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ರಾಜ್ಯದ 750 ಪರಿಶಿಷ್ಟ ಜಾತಿ, 250 ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಅರೆ ವೈದ್ಯಕೀಯ ಕೋರ್ಸುಗಳಿಗೆ ಆಯ್ಕೆ ಮಾಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಎಸ್ ಎಸ್ ಎಲಲ್ಸಿ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ವಾರ್ಷಿಕ ಆದಾಯ ರು.2 ಲಕ್ಷ ಮೀರಿರಬಾರದು. ವಯೋವುತಿ15 ರಿಂದ 40 ವರ್ಷದವರಾಗಿರಬೇಕು. ಎಸ್‌ಎಸ್‌ಎಲ್‌ಸಿ ಆಧಾರದ ಮೇಲೆ ಆಯ್ಕೆಯಾಗುವವರಿಗೆ 3 ವರ್ಷ ಹಾಗೂ ಪಿಯುಸಿ ಆಧಾರದ ಮೇಲೆ ಆಯ್ಕೆಯಾಗುವವರಿಗೆ 2 ವರ್ಷ ಇರುತ್ತದೆ. ವಿವಿರಕ್ಕೆ ವೆಬ್‌ಸೈಟ್ ವಿಳಾಸ: www.sw.kar.nic.in ರಲ್ಲಿ ನೋಡಬಹುದು ಹಾಗೂ ಅರ್ಜಿಗಳನ್ನು ಸೆ.30 ರೊಳಗಾಗಿ ಸಲ್ಲಿಸಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಸರಾ ಕ್ರೀಡಾ ಕೂಟ
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ 2013-14ನೇ ಸಾಲಿನ ದಸರಾ ಕ್ರೀಡಾ ಕೂಟವನ್ನು ಸೆ.28  ಮತ್ತು 29 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಅಥ್ಲೆಟಿಕ್ಸ್‌ಣನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾ ಪಟುಗಳು ಸೆ.27 ರಂದು ಸಂಜೆ 6 ಗಂಟೆಯೊಳಗೆ ಕಂಠೀರವ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳಬೇಕು. ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾ ಪಟುಗಳಿಗೆ ಇಲಾಖೆಯ ವತಿಯಿಂದ ಪ್ರಯಾಣ ದಿನ ಭತ್ಯೆಯನ್ನು ನೀಡಲಾಗುವುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ವೃಂದಕ್ಕೆ ಸ್ವಾಗತ ಕಾರ್ಯಕ್ರಮ
ಚಿಕ್ಕಬಳ್ಳಾಪುರ: ನಗರದ ಲಕ್ಕಮ್ಮ ದೊಡ್ಡಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ಸೆ.25 ರಂದು ಬೆಳಗ್ಗೆ 10.30 ಕ್ಕೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವತಿಯಿಂದ 2013-14ನೇ ಸಾಲಿನ ಕಾಲೇಜು ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಕಿರಿಯ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭವನ್ನು ಆಯೋಜಿಸಲಾಗಿದೆ. ಸಮಾರಂಭದ ಉದ್ಘಾಟನೆಯನ್ನು ಶಾಸಕ ಡಾ.ಕೆ.ಸುಧಾಕರ್ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಮುಮ್ತಾಜ್ ಅಲಿಖಾನ್, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಪಂ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಅಪರ ಜಿಲ್ಲಾಧಿಕಾರಿ ಸತ್ಯಭಾಮ, ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ, ಮುಂತಾದವರು ಭಾಗವಹಿಸಲಿದ್ದಾರೆ.

ಇಂದು ಕೆಡಿಪಿ ಸಭೆ
ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೆ.24 ರಂದು ಬೆಳಗ್ಗೆ 11 ಗಂಟೆಗೆ ಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿದೆ. ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ವಹಿಸಲಿದ್ದಾರೆ ಎಂದು ಜಿಪಂ ಸಿಇಒ ನೀಲಾ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement