ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮ
ಗೌರಿಬಿದನೂರು: ಕೆರಿಯರ್ ಕೌನ್ಸಿಲಿಂಗ್ ಮೂಲಕ ಶಿಕ್ಷಣ ಮತ್ತು ಉದ್ಯೋಗದ ಮಾಹಿತಿ ಪಡೆದು ಆಮೂಲಕ ನಿಮ್ಮ ಕನಸಿನ ಬದುಕನ್ನು ನನಸು ಮಾಡಿಕೊಳ್ಳಿ ಎಂದು ವಿಸಿಎಸ್ ಗ್ಲೋಬಲ್ ಮುಖ್ಯಸ್ಥ ಚಂದ್ರಿಕಾ ಕರೆ ನೀಡಿದರು.
ಅವರು ಗೌರಿಬಿದನೂರು ತಾಲೂಕು ತೊಂಡೇಭಾವಿಯಲ್ಲಿ ಎವಿಎನ್ಆರ್ ಪಪೂ ಕಾಲೇಜಿನಲ್ಲಿ ಎಸಿಸಿ ತೊಂಡೇಭಾವಿ ಸಿಮೆಂಟ್, ವಿಟಾ ಇನ್ಸಿಟ್ಯೂಟ್, ಎಸ್ಇಆರ್ಡಿಎಸ್ ಸ್ವಯಂಸೇವಾಸಂಸ್ಥೆ ಸಂಯುಕ್ತ ವಾಗಿ ಹಮ್ಮಿಕೊಂಡಿದ್ದ ಕೆರಿಯರ್ ಕೌನ್ಸಿಲಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಪಡೆಯುವುದು ಮುಖ್ಯವಲ್ಲ ಉನ್ನತ ಶಿಕ್ಷಣಕ್ಕೆ ಮುನ್ನ ನಮ್ಮ ಶಿಕ್ಷಣ ಮತ್ತು ಉದ್ಯೋಗದ ಗುರಿಏನು ಎನ್ನುವ ಮಹಾತ್ವಾಕಾಂಕ್ಷೆಯನ್ನು ಮನದಲ್ಲಿ ನಿರ್ಧರಿಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದ ಅವರು ವಿವಿಧ ರೀತಿಯ ಕೋರ್ಸ್ಗಳು ಮತ್ತು ಉದ್ಯೋಗಸಿಗುವಂತಹ ಶಿಕ್ಷಣ ಮಾಹಿತಿ ನೀಡಿದರು.
ರಿಟಾ ಇನ್ಸಿಟ್ಯೂಟ್ ಮುಖ್ಯಸ್ಥ ಕಾರ್ತಿಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಜನ ಪ್ರತಿಭಾವಂತರಾಗಿರುತ್ತಾರೆ. ಅವರಿಗೆ ಮೂಲಕ ಇಂಗ್ಲಿಷ್ ಮತ್ತು ಸಂವಹನ ಇಂಗಿಷ್ ಸಮಸ್ಯೆ ಇರುತ್ತದೆ ಇದರಿಂದ ಅವರು ಹೊಸರೀತಿಯ ಶಿಕ್ಷಣಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಆದ್ದರಿಂದ ನಮ್ಮ ಸಂಸ್ಥೆ ವತಿಯಿಂದ ಸ್ಪೋಕನ್ ಇಂಗ್ಲಿಷ್ ಉತ್ತಮರೀತಿಯಲ್ಲಿ ತರಬೇತಿ ಉನ್ನತ ಶಿಕ್ಷಣಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ರಕ್ಷಣ ಇಲಾಖೆಯಲ್ಲಿ ಲೆಪ್ಟಿನೆಂಟ್ ಕರ್ನಲ್ ಆಗಿರುವ ಅರುಣ್ ಮಾತನಾಡಿ, ರಕ್ಷಣ ಇಲಾಖೆಗೆ ಸೇರ್ಪಡೆಗೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಿ ಆರೋಗ್ಯ, ಉದ್ಯೋಗ ದೇಶಸೇವೆ ನೆಮ್ಮದಿ ಹಾಗೂ ಸಾರ್ಥಕತೆಯನ್ನು ಪಡೆಯಲು ನಿಮಗೆ ಉತ್ತಮ ಆವಕಾಶ ಎಂದ ಅವರು ಕಳೆದ 15ವರ್ಷದಿಂದ ಹೆಣ್ಣುಮಕ್ಕಳೂ ಸೇನೆಗೆ ಸೇರುತ್ತಿದ್ದಾರೆ ಉತ್ತಮ ಸೇವೆಸಲ್ಲಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಪ್ರತಿಮಾ ಕಾರ್ತಿಕ್, ಯೋಜನಾಧಿಕಾರಿ ರಶೀದ್ ಇದ್ದರು.