ಪ್ರಭಾರ ಕಾರ್ಯ ನಿರ್ವಹಣಾಧಿಕಾರಿಬದಲಾವಣೆಗೆ ಆಗ್ರಹ
ಬಂಗಾರಪೇಟೆ: ತಾಪಂ ಪ್ರಭಾರ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಡಾ. ಜಗದೀಶ್‌ರನ್ನು ಅವರ ಮಾತೃ ಇಲಾಖೆಯಾದ ಪಶುಸಂಗೋಪನೆ ಇಲಾಖೆಗೆ ವಾಪಸ್ ಕಳುಹಿಸಬೇಕೆಂದು ತಾಪಂ ಅಧ್ಯಕ್ಷೆ ರೇಣುರಾಬಾಲಚಂದ್ರ ಜಿಪಂ ಸಿಎಸ್‌ಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಜಗದೀಶ್ ಪ್ರಭಾರ ಇಒ ಆಗಿ ಅಧಿಕಾರವಹಿಸಿಕೊಂಡಾಗಿನಿಂದಲೂ ಇಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಎಲ್ಲಾ ಕೆಲಸಗಳು ಮೂಲೆಗುಂಪಾಗಿವೆ.
ಪ್ರಭಾರ ಇಒ ಎರಡು ಕಡೆ ಕಾರ್ಯನಿರ್ವಹಿಸುವುದರಿಂದ ಎರಡೂ ಕಡೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಕಳೆದ ನಾಲ್ಕು ದಿನಗಳಿಂದ ಇಒ ತಾಪಂ ಕಚೇರಿಗೆ ಬಂದಿಲ್ಲ ನಾಲ್ಕು ದಿನದ ಹಾಜರಾತಿ ಒಂದೇ ದಿನ ಹಾಕುವರು ಈ ಬಗ್ಗೆ ಕೇಳಿದರೆ ಜಾರಿಕೆ ಉತ್ತರ ನೀಡುವರು. ಆದ್ದರಿಂದ ಇವರನ್ನು ಕೂಡಲೆ ಮಾತೃ ಇಲಾಖೆ ಪಶುಸಂಗೋಪನೆ ಇಲಾಖೆಗೆ ಕಳುಹಿಸಿ ಹೊಸಬರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಆರೋಗ್ಯ ಇಲಾಖೆ ಕಟ್ಟಡಗಳ ಅತಿಕ್ರಮಣ
ಶಿಡ್ಲಘಟ್ಟ: ಬಹುತೇಕ ಕಡೆ ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲದೆ ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಪಡೆದು ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಗೆ ಸೇರಿದ 6 ಕ್ಕೂ ಅಧಿಕ ಸುಸ್ಥಿಥಿಯಲ್ಲಿರುವ ಕಟ್ಟಡಗಳನ್ನು ಇತರೆಯವರು ಅತಿಕ್ರಮಿಸಿಕೊಂಡಿರುವ ಘಟನೆ ಈ ರೀತಿ ಇದೆ.
30 ವರ್ಷಗಳ ಹಿಂದಷ್ಟೇ ಆರೋಗ್ಯ ಇಲಾಖೆ ತನ್ನ ಸಿಬ್ಬಂದಿಗೆಂದು ಕಟ್ಟಿಸಿದ್ದ ಎಲ್ಲ ಮೆನೆಗಳೂ ಸುಸ್ಥತಿಯಲ್ಲಿದ್ದು ಆರೋಗ್ಯ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಲಕ್ಷಾಂತರ ರು. ಬೆಲೆಬಾಳುವ ಪಟ್ಟಣದ ಹಳೆಯ ಆಸ್ಪತ್ರೆ ರಸ್ತೆಯ ಮನೆಗಳಲ್ಲಿ ಅನ್ಯರು ವಾಸವಾಗಿದ್ದಾರೆ. ಸುಮಾರು 15 ವರ್ಷಗಳಿಂದ ಈ ಕಟ್ಟಡಗಳಲ್ಲಿ ಪುರಸಭೆಯ ಸಿಬ್ಬಂದಿ ವಾಸವಾಗಿದ್ದು ದಾಸ್ತಾನು ಕೊಠಡಿಯನ್ನಾಗಿ ಮಾಡಿಕೊಳ್ಳಲಾಗಿದೆ. ಮತ್ತೊಂದು ಮನೆಯಲ್ಲಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಲಾಗಿದೆ. ಮತ್ತು ಕೆಲವು ಖಾಸಗಿ ವ್ಯಕ್ತಿಗಳು ವರ್ಕ್ ಶಾಪ್ ಹಾಗೂ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಶಾಖೆಯನ್ನು ನಡೆಲಸಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದರೊ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ. ದಿನದ 24 ಗಂಟೆ ಸೇವೆ ಸಲ್ಲಿಸುವ ಆರೋಗ್ಯ ರಕ್ಷಾ ಕವಚ 108 ವಾಹನದ ಸಿಬ್ಬಂದಿಗೆ ಜಾಗವಿಲ್ಲದೆ ನಡು ರಸ್ತೆಯಲ್ಲೇ ತಮ್ಮ ವಾಹನದೊಂದಿಗೆ ವಾಸ್ತವ್ಯ ಹೊಡಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಇಲಾಖೆ ಅತಿಕ್ರಮಣವನ್ನು ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಅಧಿಕಾರಿಗಳು ಕೊಡಲೆ ಇತ್ತ ಗಮನ ಹರಿಸಿ ಅತಿಕ್ರಮಣವನ್ನು ತೆರವುಗೊಳಿಸಿ ಸಿಬ್ಬಂದಿಗೆ ಈ ಮನೆಗಳನ್ನು ಹಸ್ತಾಂತರಸಿಸಲೆಂದು ಸಾರ್ವಜನಿಕರು ಆಗ್ರಹ ಪಡಿಸಿದ್ದಾರೆ.