'ಸ್ವಚ್ಛತೆ ಕಾಪಾಡಲು ಪೌರಕಾಮಿಕರು ಶ್ರಮಿಸಿ'
ಬಂಗಾರಪೇಟೆ: ಪೌರ ಕಾರ್ಮಿಕರು ಸ್ವಚ್ಛತೆಯಲ್ಲಿ ರಾಜಕೀಯ ಮಾಡದೆ ಪಟ್ಟಣವನ್ನು ರೋಗಗಳಿಂದ ಮುಕ್ತವಾಗಿಡಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಕಾರ್ಮಿಕರ ಮಕ್ಕಳಿಗೆ ಲೇಖನಿ ಸಾಮಾಗ್ರಿಗಳನ್ನು ಹಾಗೂ ನೌಕರರಿಗೆ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿ, ಯಾವುದೇ ಪಟ್ಟಣ ಆರೋಗ್ಯವಾಗಿಸಲು ಪೌರ ಕಾರ್ಮಿಕರ ಪರಿಶ್ರಮವ ಅತ್ಯಗತ್ಯವಾಗಿದ್ದು ಎಲ್ಲಾ ನೌಕರರು ಸ್ವಚ್ಛತೆ ಕಡೆ ನಿಗಾವಹಿಸಬೇಕು ಇದಕ್ಕೆ ಬೇಕಾದ ನೆರವನ್ನು ಪುರಸಭೆ ನೀಡಲಿದೆ. ಪಟ್ಟಣದಲ್ಲಿ ಪಾದಚಾರಿಗಳಿಗೆ ಇರುವ ಜಾಗದಲ್ಲಿ ಸಣ್ಣ ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವುದರಿಂದ ತೊಂದರೆಯಾಗಿದ್ದು ಅವರನ್ನು ಕೂಡಲೆ ತೆರವುಗೊಳಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲಾ 23 ವಾರ್ಡುಗಳಿಗೂ ಅಧಿಕಾರಿಗಳೊಂದಿಗೆ ಪಾದಯಾತ್ರೆ ಮೂಲಕ ತೆರಳಿ ನಾಗರಿಕರ ಸಮಸ್ಯೆಗಳನ್ನು ಆಲಿಸುವುದಾಗಿ ಪ್ರಕಟಿಸಿದರು.
ಮಾಜಿ ಪೌರಾಧ್ಯಕ್ಷ ಕೆ. ಚಂದ್ರಾರೆಡ್ಡಿ ಮಾತನಾಡಿ, ಪೌರ ಕಾರ್ಮಿಕರು ಶ್ರಮಜೀವಿಗಳಾಗಿದ್ದು ಇವರಂತೆ ಇವರ ಮಕ್ಕಳು ಶ್ರಮಜೀವಿಗಳಾಗದೆ ಅವರಿಗೆ ಉತ್ತಮ ಶಿಕ್ಷಣ ಕಲ್ಪಿಸಿಕೊಡಬೇಕು ಕಾರ್ಮಿಕರ ಮಕ್ಕಳಲ್ಲಿಯೂ ಪ್ರತಿಭಾವಂತರಿದ್ದಾರೆ ಅವರನ್ನು ಸಮಾಜದ ಮುಖ್ಯವಾಹಿಣಿಗೆ ತರಬೇಕೆಂದು ಹೇಳಿದರು. ಇದೇ ವೇಳೆ ಚಂದ್ರಾರೆಡ್ಡಿ ತಮ್ಮ ಸ್ವಂತ ಖರ್ಚಿನಿಂದ ಎಲ್ಲಾ ಕಾರ್ಮಿಕರಿಗೆ ಸಮವಸ್ತ್ರಗಳನ್ನು ಹಾಗೂ ಅವರ ಮಕ್ಕಳಿಗೆ ಲೇಖನಿ ಸಾಮಾಗ್ರಿಗಳನ್ನು ವಿತರಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್,ಪಾರ್ಥಸಾರಥಿ, ಪುರಸಭೆ ಸದಸ್ಯರಾದ ಬಿ.ಸಿ. ಮೂರ್ತಿ, ವೆಂಕಟೇಶಗೌಡ, ಕುಮಾರ್, ಗಂಗಮ್ಮರಂಗರಾಮಯ್ಯ, ಶಪಿ, ಭಾಗ್ಯಮ್ಮ, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ವ್ಯವಸ್ಥಾಪಕ ಶ್ರೀನಿವಾಸಮೂರ್ತಿ ಇದ್ದರು.
ಪದಾಧಿಕಾರಿಗಳ ಆಯ್ಕೆ
ಮಾಲೂರು; ಪಟ್ಟಣದ ಕೃಷಿಕ ಸಮಾಜದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಹಾಗೂ ಹೋಬಳಿ ಘಟಕಗಳ ಆಯ್ಕೆಯನ್ನು ಮಾಡಲಾಗಿದೆ.
ತಾಲೂಕು ಅಧ್ಯಕ್ಷ-ಎಂ. ಗೋವಿಂದಸ್ವಾಮಿ, ಕಾರ್ಯಧ್ಯಕ್ಷರು-ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ-ಶಂಕಲಿಪುರ ಕೆ. ರಾಜಪ್ಪ, ಕಾರ್ಯದರ್ಶಿ-ದೂಮ್ಮಲೂರು ಟಿ. ಶ್ರೀನಿವಾಸ್, ಸಂಘಟನಾ ಸಂಚಾಲಕ-ಅರಳೇರಿ ಮುನಿಯಪ್ಪ, ಸಿದ್ಧನಹಳ್ಳಿ ಕೃಷ್ಣಪ್ಪ, ನಗರ ಘಟಕ ಅಧ್ಯಕ್ಷ-ನಾಗೇಶ್, ಪ್ರಧಾನ ಕಾರ್ಯದರ್ಶಿ-ಮಂಜು, ಕಾರ್ಯದರ್ಶಿ- ದಾದಾಫೀರ್, ಸಂಘಟನಾ ಸಂಚಾಲಕ- ಮಾರುತಿ, ಶಿವು, ನಾಗರಾಜ್, ಮಂಜುನಾಥ್.
ಟೇಕಲ್ಹೋಬಳಿ ಅಧ್ಯಕ್ಷ- ಹಳೇ ಪಾಳ್ಯ ಮಂಜುನಾಥ್, ಕಾರ್ಯಧ್ಯಕ್ಷ- ಕೆಂಪಸಂದ್ರ ಚಂದ್ರು, ಪ್ರಧಾನ ಕಾರ್ಯದರ್ಶಿ- ನಾಗರಾಜ್ ವಿ. ಕಾರ್ಯದರ್ಶಿ-ವೇಣುಗೋಪಾಲ್, ಸಂಘಟನಾ ಸಂಚಾಲಕರು-ಮುನಿರೆಡ್ಡಿ, ಚಂದ್ರು, ಆನಂದ್, ವಿನೋದ್ ಕುಮಾರ್.
ಲಕ್ಕೂರು ಹೋಬಳಿ ಘಟಕ ಅಧ್ಯಕ್ಷ-ಬಿ.ವಿ. ಮುನಿಯಪ್ಪ, ಕಾರ್ಯಧ್ಯಕ್ಷ- ಲಿಂಗಪ್ಪ ಬರಗೂರು, ಪ್ರಧಾನ ಕಾರ್ಯದರ್ಶಿ- ಆರ್. ಶಂಕರ್ ಯಟ್ಟಕೋಡಿ, ಕಾರ್ಯದರ್ಶಿ-ದೇವರಾಜು ಪಾಳ್ಯ, ಸಂಘಟನಾ ಸಂಚಾಲಕ-ಶ್ಯಾಮಣ್ಣ ಎಂ.ಡಿ. ರಾಜಪ್ಪ, ಸತೀಶ್, ಪರಶುರಾಮ ಬರಗೂರು.