ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆ್ಯಂಬುಲೆನ್ಸ್ ಅವ್ಯವಸ್ಥೆ ಬಗ್ಗೆ ದೂರು

Srinivasa Murthy VN
Updated On : 26 Sept 2013, 11:35 am

ಚಿಂತಾಮಣಿ: ತುರ್ತು ಪರಿಸ್ಥಿತಗಳಲ್ಲಿ ಕಾರ್ಯನಿರ್ವಹಿಸುವ ಆ್ಯಂಬುಲೆನ್ಸ್(108) ವಾಹನಗಳ ಕಾರ್ಯವೈಖರಿ ಬಗ್ಗೆ ತಾಲೂಕು ಮುಸ್ಲಿಂ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಲೋಕಾಯುಕ್ತ ಅಧಿಕಾರಿ ಎ.ಜಿ. ಮಂಜೇಗೌಡರವರಿಗೆ ದೂರು ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಲೋಕಾಯುಕ್ತ ಅಧಿಕಾರಿ ಎ.ಜಿ. ಮಂಜೇಗೌಡರವರಿಗೆ ದೂರು ಸಲ್ಲಿಸುವ ಸಭೆಯಲ್ಲಿ ತಾಲೂಕು ಮುಸ್ಲಿಂ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು, ತುರ್ತು ಪರಿಸ್ಥಿತಗಳಲ್ಲಿ ಕಾರ್ಯನಿರ್ವಹಿಸುವ ಆ್ಯಂಬುಲೆನ್ಸ್(108) ವಾಹನಗಳು ಗಂಟೆಗಟ್ಟಲೇ ತಡವಾಗಿ ಆಗಮಿಸುತ್ತಿರುವುದರಿಂದ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವುದಾಗಿ ಆರೋಪಿಸಿದರು.
ಇದಕ್ಕೆ ಉದಾಹರಣೆಯಾಗಿ ಕಳೆದ 2 ದಿನಗಳ ಹಿಂದೆ ಮುರುಗಮಲ್ಲ-ಚಿಂತಾಮಣಿ ಮಾರ್ಗದ ಕಾಗತಿ ಗ್ರಾಮದ ಬಳಿ ಖಾಸಗಿ ಬಸ್ಸೊಂದು ಪಲ್ಟಿ ಹೊಡೆದ ಪರಿಣಾಮ 20 ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡ ಆ್ಯಂಬುಲೆನ್ಸ್ ವಾಹನಗಳಿಗೆ ಕರೆ ಮಾಡಿದರೂ ಸ್ಪಂದಿಸುವಲ್ಲಿ ಮಾಡಿದ್ದಾರೆಂದು ವೇದಿಕೆ ಅಧ್ಯಕ್ಷ ಇಮ್ರಾನ್ ಪಾಷ, ಗೌರವಾಧ್ಯಕ್ಷ ಡಾ. ಶಬ್ಬೀರ್ ಪಾಷ, ಉಪಾಧ್ಯಕ್ಷ ಸಮೀವುಲ್ಲಾ, ನಯಾಜ್, ಮೊಹಬೂಬ್ ಪಾಷ, ಜಾಕೀರ್  ಹುಸೇನ್, ವಜೀರ್ ಇದ್ದರು.

ಇಂದು ವಿಚಾರ ಸಂಕಿರಣ
ಚಿಂತಾಮಣಿ:
ಸರ್ಕಾರಿ ಮಹಿಳಾ ಕಾಲೇಜಿನ ವಿಜ್ಞಾನ ವಿಭಾಗದ ಜೀವಶಾಸ್ತ್ರ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಜೀವವಿಜ್ಞಾನ ವಿಷಯಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ 27 ರಂದು ಆನೆಮೀನು ಸಾಕಾಣಿಕೆಯಿಂದ ಪರಿಸರ ಮತ್ತು ಮಾನವನ ದೇಹದ ಮೇಲೆ ಆಗುವ ಪರಿಣಾಮ ವಿಷಯದ ಬಗ್ಗೆ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ.  ಈ ಸಂಕಿರಣದಲ್ಲಿ ಪ್ರೊ. ರವಿಚಂದ್ರರೆಡ್ಡಿ, ಡಾ. ಶ್ರೀನಿವಾಸನ್, ಡಾ.ಎನ್.ಎಸ್. ಲೀಲಾ, ಜಿ. ಮೌಲೇಶ್ವರಿ, ಡಾ.ವೇಣುಗೋಪಾಲ್ ಹಾಗೂ ಪ್ರೊ.ಜಿ. ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುತ್ತಾರೆ. ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಸತೀಶ್ ಬಾಬು, ಕೆ. ರಾಜರೆಡ್ಡಿ, ಡಾ.ಕೆ. ವಾಸುದೇವರೆಡ್ಡಿ, ಡಾ. ಎಸ್. ಶಂಕರ, ಡಾ.ಎಂ.ವಿ.ಶ್ರೀನಿವಾಸಲು, ಡಾ. ಮುನಿರಾಜು, ಆರ್. ಕೆಂಪರಾಜು, ಎಸ್. ಪ್ರಿಯಾ ಮತ್ತು ಬೋಧಕ, ಭೋದಕೇತರರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ.

ವಿದ್ಯುತ್ ವ್ಯತ್ಯಯ
ಕೆಜಿಎಫ್:
ಮಾಲೂರಿನ ವಿದ್ಯುತ್ ವಿಭಾಗೀಯ ಕೇಂದ್ರದಲ್ಲಿ 220 ಕೆ.ವಿ. ಸಬ್‌ಸ್ಟೇಷನ್‌ನಲ್ಲಿ ದುರಸ್ತಿಗೊಳಿಸುವ ಕಾರ್ಯವನ್ನು ಕೈಗೊಳ್ಳುವುದರಿಂದ ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದ ಸುತ್ತಮುತ್ತಲೂ 28 ರ ಬೆಳಗ್ಗೆ 9 ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗುವುದು ಎಂದು ಕೆಜಿಎಫ್‌ನ ಬೆಸ್ಕಂ ಇಲಾಖೆ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement