ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಗತ್ ಸಿಂಗ್ ಜನ್ಮ ದಿನಾಚರಣೆ

Srinivasa Murthy VN
Updated On : 26 Sept 2013, 11:36 am

ಶಿಡ್ಲಘಟ್ಟ: 106 ನೇ ಕ್ರಾಂತಿವೀರ ಭಗತ್ ಸಿಂಗ್ ಜನ್ಮ ದಿನದ ಅಂಗವಾಗಿ ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಸ್ವಾಮಿ ವಿವೇಕಾನಂದರ 150 ನೇ ವರ್ಷದ ಹಾಗೂ ಕ್ರಾಂತಿ ವೀರ ಭಗತ್ ಸಿಂಗ್‌ರ 106 ನೇ ಜನ್ಮದಿನಾಚರಣೆಯನ್ನು ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ಉಪನ್ಯಾಸಕ ನಿತ್ಯಾನಂದ ವಿವೇಕ ವಂಶಿ ಮಾತನಾಡಿ, ಕ್ರಾಂತಿ ವೀರ ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದ ದೇಶದ ಮಹಾನ್ ಚೇತನ, ಅವರ ಆದರ್ಶಗಳನ್ನು ಯುವಪೀಳಿಗೆ ಅನುಸರಸಬೇಕೆಂದು ಕರೆ ನೀಡಿದರು.
ಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಹಲವು ಕಡೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಅದರ ಉದ್ದೇಶ ಯುವಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕೆಂಬ ಉದ್ದೇಶದಿಂದ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಬಿಯೋಜಕ ಈ.ಡಿ.ಶ್ರೀನಿವಾಸ್, ಕೆ.ವಿ. ಸತ್ಯ ನಾರಾಯಣಚಾರ್, ಎನ್.ಕೆ. ಸುದರ್ಶನ್, ವಕೀಲ ರವೀಂದ್ರನಾಥ್, ಎ.ಎನ್. ಕಾಶಿನಾಥ್, ಪ್ರಾಂಶುಪಾಲ ಎನ್.ಕೆ. ಸುದರ್ಶನ್ ಇದ್ದರು.

ಕಾಲು ಬಾಯಿ ಜ್ವರ ನಿಯಂತ್ರಣಕ್ಕೆ ಪಶು ವೈದ್ಯ ಸಿಬ್ಬಂದಿ ಕೊರತೆ
ಟೇಕಲ್: ಮಾಸ್ತಿ ಸುತ್ತಮುತ್ತಲು ಕಾಲು ಬಾಯಿ ಜ್ವರದಿಂದ 12 ಹಸುಗಳು ಮೃತಪಟ್ಟಿದ್ದು, ಹೈನುಗಾರಿಕೆ ನಡೆಸುವ ರೈತರು ಕಂಗಾಲಾಗಿದ್ದಾರೆ. ಮಾಸ್ತಿ ಸಮೀಪದ ಎಂ. ಹೊಸಹಳ್ಳಿ ಗ್ರಾಮದ ಮುನಿಯಪ್ಪ ಕುಟುಂಬದ 6 ಹಸುಗಳು ಸಾವನ್ನಪ್ಪಿದ್ದು, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 4 ರಿಂದ 6 ಹಸುಗಳು ಸಾವನ್ನಪ್ಪಿದೆ. ಈ ದಿಸೆಯಲ್ಲಿ ಪಶು ವೈದ್ಯ ಸಹಾಯಕ ನಿರ್ದೇಶಕ ಕೆ. ನಜೀರ್ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಹಸುಗಳಿಗೆ ದಿನವಹಿ ಲಸಿಕೆ ಹಾಕುತ್ತಿದ್ದು ಇವರಿಗೆ ಸಿಬ್ಬಂದಿ ಕೊರತೆ ಉಂಟಾಗಿದೆ. ಜಿಲ್ಲಾಡಳಿತ ಆದಷ್ಟು ಬೇಗ ಪಶು ವೈದ್ಯರ ತಂಡ ಕಳುಹಿಸಿ ಉತ್ತಮ ಚಿಕಿತ್ಸೆ ನೀಡಬೇಕೆಂದು ಹೈನೋದ್ಯಮವನ್ನೆ ನಂಬಿರುವ ರೈತರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement