ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕ ವರ್ತೂರ್ ಪ್ರಕಾಶ್ ಬಿರುಸಿನ ಪ್ರಚಾರ

Srinivasa Murthy VN
Updated On : 26 Sept 2013, 11:31 am

ಕೋಲಾರ: ಸೆ.29 ರಂದು ನಡೆಯಲಿರುವ ಅರಾಭಿಕೊತ್ತನೂರು ತಾಪಂ ಕ್ಷೇತ್ರದ ಚುನಾವಣೆಯಲ್ಲಿ ತಮ್ಮ ಬಣದ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುವಂತೆ ಶಾಸಕ ವರ್ತೂರು ಪ್ರಕಾಶ್ ಮನವಿ ಮಾಡಿದರು.
ತಾಲೂಕಿನ ಅರಾಬಿಕೊತ್ತನೂರು ತಾಪಂ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ  ಬಿರುಸಿನ ಪ್ರಚಾರ ನಡೆಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾವು ಶಾಸಕರಾದ ನಂತರ ಅರಾಭಿಕೊತ್ತನೂರು ತಾಪಂ ಕ್ಷೇತ್ರಕ್ಕೆ ಒಳಪಟ್ಟಂತೆ ಸಾಕಷ್ಟು ಅಭಿವೃದ್ಧಿ ಕಾಂಗಾರಿಗಳನ್ನು ನಡೆಸಲಾಗಿದೆ. ರೈತರ ಸಂಷಕ್ಟಗಳಿಗೆ ಸ್ಪಂದಿಸಿದ್ದು, ಜನತೆ ಈ ಬಾರಿಯೂ ನನ್ನ ಬಣದ ಅಭ್ಯರ್ಥಿ ಆರ್. ಜಗದೀಶ್ ಗೌಡರನ್ನು ಗೆಲ್ಲಿಸಿ ನನ್ನ ಬಣದ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿಯುವಂತೆ ಕೋರಿದರು.
ಜಗದೀಶ್ ಗೌಡ ಗೆಲುವಿಗೆ ತಮ್ಮ ಬಣದ ಮುಖಂಡರು ಮತ್ತು ಕಾರ್ಯಕರ್ತರು ಹಗಲಿರುಳು ಶ್ರಮಿಸುವಂತೆ ಸಲಹೆ ಮಾಡಿದರಲ್ಲದೆ, ನನ್ನ ಅವಧಿಯಲ್ಲಿ ನಡೆದಿರುವ ಅಭಿವಣದ್ಧಿ ಕೆಲಸಗಳನ್ನು ಮನೆ ಮನೆಗೂ ತಲುಪಿಸಿ ಇದೇ ಮಾನದಂಡದ ಮೇಲೆ ಮತಯಾಚಿಸುವಂತೆ ಹೇಳಿದರು. ಕೆಂದಟ್ಟಿ, ಅರಾಭಿಕೊತ್ತನೂರು, ಚುಂಚದೇನಹಳ್ಳಿ, ಚಲುವನಹಳ್ಳಿ, ಮಡೇರಹಳ್ಳಿ, ಬೆತ್ತನಿ, ಚೌಡದೇನಹಳ್ಳಿ, ಅಮ್ಮೇರಹಳ್ಳಿ, ತೇರಹಳ್ಳಿ, ಪಾಪರಾಜನಹಳ್ಳಿ ಗ್ರಾಮಗಳಲ್ಲಿ ಶಾಸಕರು ಪ್ರಚಾರ ನಡೆಸಿ ಅಭ್ಯರ್ಥಿ ಪರ ಯಾಚಿಸಿದರು.
ಈ ಸಂದರ್ಭದಲ್ಲಿ ಬೆಗ್ಲಿ ಪ್ರಕಾಶ್, ಗ್ರಾಪಂ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ನಾಗರಾಜ್, ಚಲಪತಿ, ಸೋಮೇಗೌಡ, ಮುನಿಯಪ್ಪ, ರುಕ್ಮಣಿ, ಆಲಹಳ್ಳಿ ನಾಗರಾಜ್, ಕಲ್ಲಂಡೂರು ರಾಜಣ್ಣ, ಟಮಕ ಸೋಮಣ್ಣ, ಬೀರಮಾನಹಳ್ಳಿ ರಮೇಶ್ ಗೌಡ, ಶಂಕರಪ್ಪ, ಚಂದ್ರಪ್ಪ, ಶಂಕರಾಚಾರಿ, ವಜೀದ್ ಪಾಷ, ನಂಜೇಗೌಡ, ನಾರಾಯಣಸ್ವಾಮಿ(ಅಪ್ಪಿ), ಶಂಕರ್, ಮಂಜು, ಕುಮಾರ್, ಚಿಕ್ಕವೆಂಕಟಯ್ಯ, ಗುಟ್ಟಹಳ್ಳಿ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement