ಶಿಕ್ಷಣದಿಂದ ಉತ್ತಮ ಸ್ಥಾನ ಲಬಿಸಲಿದೆ: ಸುಬ್ಬಾರೆಡ್ಡಿ
ಚಿಂತಾಮಣಿ: ಶಿಕ್ಷಣದಿಂದ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿಯೂ ಸ್ಥಾನಮಾನಗಳು ದೊರೆಯಲಿವೆ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ದೊಡ್ಡಗಂಜೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಆರ್‌ಎಂಎಸ್‌ಎ ಯೋಜನೆಯಡಿ ರು. 1.84 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಾಲಕಿಯರ ವಸತಿ ನಿಲಯ ಕಟ್ಟಡಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ, ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಯೋಜನೆಗಳನ್ನು ಉಪಯೋಗಿಸಿಕೊಂಡು ಉತ್ತಮ ಶಿಕ್ಷಣ ಪಡೆದು ನವಸಮಾಜವನ್ನು ನಿರ್ಮಿಸಲು ಕೋರಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ತಾಪಂ ಸದಸ್ಯ ಗೌರಮ್ಮನಾಗೇಶ್, ಗ್ರಾಪಂ ಅಧ್ಯಕ್ಷ ನೂರುನ್ನೀಸಾ ತಾಜ್‌ಉದ್ದೀನ್, ನಾಗರಾಜ್ ಭಾಗವಹಿಸಿದ್ದರು.
ಚಿಕಿತ್ಸೆಗೆ ಧನಸಹಾಯ
ಕೆಜಿಎಫ್: ತಲಸೀಮಿಯಾ ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಕೂಡಗಲ್ ಗ್ರಾಮದ ನಿವಾಸಿ ರಾಮ್‌ಬಾಬು ಸುನಿತಾ ದಂಪತಿಗಳ 6 ವರ್ಷದ ಮಗಳಾದ ರುಚಿತಾಳಿಗೆ ಶಸ್ತ್ರಚಿಕಿತ್ಸೆಗೆ ಸುಮಾರು 12 ಲಕ್ಷ ವೆಚ್ಚವಾಗಲಿದೆ ಎಂದು ಚೆನ್ನೈನ ಅಫೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದು, ರುಚಿತಾಳಿಗೆ ಕೆಜಿಎಫ್ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿಯಿಂದ 45 ಸಾವಿರ ಧನ ಸಹಾಯವನ್ನು ಮಗು ರುಚಿತಾ ತಾಯಿಗೆ ನೀಡಿ ಮಾನವೀಯತೆ ಮರೆದರು. ಈ ವೇಳೆ ಪೌರಾಯುಕ್ತ ವಿ. ಬಾಲಚಂದ್ರ, ಹಿರಿಯ ಆರೋಗ್ಯಧಿಕಾರಿ ಸರಸ್ವತಿ, ಅಖಿಲಾಬಾನು, ವ್ಯವಸ್ಥಾಪಕ ನಂಜುಂಡಸ್ವಾಮಿ, ರವಿಂದ್ರ, ಕೃಷ್ಣಮೂರ್ತಿ, ಹರಿನಾಥ್, ವಜ್ರವೇಲ್, ಚಂದ್ರಪ್ಪ, ಪ್ರವೀಣ್‌ಕುಮಾರ್, ಸೌಮ್ಯ, ಪದ್ಮಾವತಿ, ಗಾಯತ್ರಿ ಹಾಜರಿದ್ದರು.