ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ; ಪ್ರತಿಭಟನೆ
ಚಿಂತಾಮಣಿ: ನಗರಸಭೆ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಹಲವು ಸಿಬ್ಬಂದಿ ಸಾರ್ವಜನಿಕರ ಕುಂದು ಕೊರತೆಳಿಗೆ ಸ್ಪಂದಿಸದೆ ಕಾಲಹರಣ ಮಾಡುತ್ತಿರುವುದಾಗಿ ಆರೋಪಿಸಿ ಕರವೇ ಕಾರ್ಯಕರ್ತರು ಪೌರಾಯುಕ್ತ ಚನ್ನೇಗೌಡರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಿತ್ಯ ಕೆಲಸಗಳಿಗೆ ಬರುವ ನಾಗರಿಕರಿಗೆ ಸೇವೆ ಕಲ್ಪಿಸದ ಅಧಿಕಾರಿಗಳ ಬೇಜವಾಬ್ದಾರಿ ತನದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆಎಂದು ಆರೋಪಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮನವಿ ಸಲ್ಲಿಸಿದರು.
ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ತಾಲೂಕು ಕರವೇಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಕರವೇ ಜಿಲ್ಲಾ ಉಪಾಧ್ಯಕ್ಷ ಊಲವಾಡಿ ಮುನಿನಾರಾಯಣಪ್ಪ, ತಾಲೂಕು ಅಧ್ಯಕ್ಷ ಪಂಕಜ್,ನಗರ ಘಟಕದ ಅಧ್ಯಕ್ಷ ವೆಂಕಟೇಶಬಾಬು, ವೆಂಕಟಗಿರಿಕೋಟೆ ಆಸೀಫ್, ಗಂಗಾಧರರಾಜು ಎಚ್ಚರಿಸಿದ್ದಾರೆ.
ವಿಶ್ವ ಹೃದಯ ದಿನಾಚರಣೆ
ಕೋಲಾರ: ನಗರದಲ್ಲಿ ಶನಿವಾರ ನಾರಾಯಣ ಹೃದಯಾಲಯ ಆಸ್ಪತ್ರೆ ಹಾಗೂ ವಿವಿಧ ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ವಿಶ್ವ ಹೃದಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಹೃದಯ ಅಕೃತಿಯನ್ನು ಹಿಡಿದು ಮೆರವಣಿಗೆಯಲ್ಲಿ ಗಮನ ಸೆಳೆದರು. ನಗರದ ಮೆಧೋಡಿಸ್ಟ್ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಇಒ ಶಿವಲಿಂಗಯ್ಯ ಮಾತನಾಡಿ ಹೃದಯದ ಮಹತ್ವದ ಬಗ್ಗೆ ವಿವರಿಸಿದರು. ಇಟಿಸಿಎಂ ಆಸ್ಪತ್ರೆಯ ಖಜಾಂಚಿ ಡಾ. ಜಾನ್ಸ್ನ್ಸ್ಕುಂನ್ ದಾರ್ ಭಾಗವಹಿಸಿದ್ದರು. ಮೆಥೋಡಿಸ್ಟ್ ಸಂಸ್ಥೆಗಳ ಜಿಲ್ಲಾ ಆಧೀಕ್ಷಕ ರೆ. ಕ್ರಿಸ್ಟೋಫರ್ ಡೇವಿಡ್ ಅಧ್ಯಕ್ಷತೆ ವಹಿಸಿದ್ದರು. ರೆ. ಮೆಶಾಕ್ ಇದ್ದರು.