ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪದಾಧಿಕಾರಿಗಳ ಆಯ್ಕೆ

Srinivasa Murthy VN
Updated On : 28 Sept 2013, 11:39 am

ಕೆಜಿಎಫ್: ಬೇತಮಂಗಲ ಗ್ರಾಮದ ರೇಷ್ಮೆ ನಿರೀಕ್ಷಕರ ಕಚೇರಿಯಲ್ಲಿ ಕಳೆದ 15 ರಂದು ವ್ಯವಸಾಯ ಸೇವಾ ಸಹಕಾರ ಸಂಘದ 10 ನಿರ್ದೇಶಕರ ಚುನಾವಣೆ ನಡೆದಿದ್ದ ಹಿನ್ನಲೆಯಲ್ಲಿ ಶುಕ್ರವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಕಳೆದ 15 ರಂದು ಚುನಾವಣಾಧಿಕಾರಿ ವಾಣಿ ಅವರ ಸಮ್ಮುಖದಲ್ಲಿ ನಡೆದ ವ್ಯಾವಸಾಯ ಸೇವಾ ಸಹಕಾರ ಸಂಘದ 10 ನಿರ್ದೇಶಕರ ಪೈಕಿ 7 ಸ್ಥಾನಗಳು ಕಾಂಗ್ರೆಸ್ ಬೆಂಬಲಿಗರು ಆಯ್ಕೆಯಾದರೆ ಬಿಜೆಪಿ ಮಾಜಿ ಶಾಸಕ ವೈ. ಸಂಪಂಗಿ ಅವರ ಬೆಂಬಲಿಗರು 3 ಸ್ಥಾನಗಳಲ್ಲಿ ಜಯಗಳಿಸಿದ್ದರು.  ಅಧ್ಯಕ್ಷರಾಗಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡಕಾರಿ ಪ್ರಸನ್ನ ಹಾಗೂ ಉಪಾಧ್ಯಕ್ಷರಾಗಿ ಗೋಪಾಲ್ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ವಾಣಿ ಅವರು ಘೋಷಿಸಿದರು.
 ಈ ವೇಳೆ ವ್ಯವಸಾಯ ಸೇವಾ ಸಹಕಾರ ಸಂಘದ ಸದಸ್ಯರಾದ ಕೋದಂಡರಾಮಯ್ಯ, ಪ್ರಸಾದ್, ಶಿವಣ್ಣ, ನಂಜುಂಡೇಗೌಡ, ವೆಂಕಟಪ್ಪ, ಕಾಂಚನಮಾಲ, ನೆಲ್ಲೂರು ಶಂಕರ್, ಚಂಗಮ್ಮ ಸೇರಿದಂತೆ ಜಿಪಂ ಸದಸ್ಯ ಆ.ಮು. ಲಕ್ಷ್ಮೀನಾರಾಯಣ, ಕೋಮಲ್ ನಿರ್ದೇಶಕ ಜಯಸಿಂಹಕೃಷ್ಣಪ್ಪ, ನಾರಾಯಣಸ್ವಾಮಿ, ಅಶೋಕ್ ಕೃಷ್ಣಪ್ಪ ಇದ್ದರು.

'ಬೆಳೆ ಸಾಲ ಉಪಯೋಗವಾಗಲಿ'
ಗುಡಿಬಂಡೆ
: ರೈತರು ಸಹಕಾರ ಸಂಘಗಳಿಂದ ಪಡೆದ ಬಡ್ಡಿರಹಿತ ಸಾಲ ಸದುಪಯೋಗಪಡಿಸಿಕೊಂಡು ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಗ್ರಾಮೀಣ ಭಾಗಗಳ ಸೇವಾ ಸಹಕಾರ ಸಂಘಗಳನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಹಂಪಸಂದ್ರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶ್ರೀರಾಮಪ್ಪ ತಿಳಿಸಿದರು.
ತಾಲೂಕಿನ ಹಂಪಸಂದ್ರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 2013-14ನೇ ಸಾಲಿನ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಸೋಮಸುಂದರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದರೆಡ್ಡಿ, ಗಂಗಿರೆಡ್ಡಿ, ಚಂದ್ರಶೇಖರರೆಡ್ಡಿ, ಆದಿಮೂರ್ತಿರೆಡ್ಡಿ, ಅಶ್ವತ್ಥಮ್ಮ, ಮಹಬೂಬ್ ಸಾಬ್, ರಾಮಕ್ಕ, ನಂಜಿರೆಡ್ಡಿ, ಎನ್. ಆನಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement