ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಭಾರತ ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದಿದೆ

Srinivasa Murthy VN
Updated On : 28 Sept 2013, 11:37 am

ಚಿಕ್ಕಬಳ್ಳಾಪುರ: ಇಡೀ ವಿಶ್ವದಲ್ಲಿಯೆಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿದಿದೆ. ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಕಂಡು ಬಂದಿಲ್ಲ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಎನ್.ಹೆಚ್. ಶಿವಶಂಕರರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ನಗರದ ಹೊರವಲಯದ ಸಿ.ಸಿ.ವಿ ಕ್ಯಾಂಪಸ್‌ನಲ್ಲಿ ಕೆ.ವಿ. ದತ್ತಿ ಮತ್ತು ರಯಾನ್ ಫೌಂಡೇಶನ್ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 4ನೇ ರಾಷ್ಟ್ರೀಯ ಸಬಬ್ಜೂನಿಯರ್ ಮತ್ತು ಜೂನಿಯರ್ ಬಾಲಕ ಬಾಲಕಿಯರ ರಾಕ್ ಬಾಲ್ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಗ್ರ ಕ್ರೀಡಾ ನೀತಿಯನ್ನು ಜಾರಿಗೊಳಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದಾಗ ದೇಶದಲ್ಲಿ ಕ್ರೀಡೆಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದರು. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೆ.ವಿ.ದೈಹಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸುತ್ತಮುತ್ತಲಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ರೀತಿಯಾದ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳುವುದಲ್ಲದೇ, ಕ್ರೀಡಾಪಟುಗಳಿಗೂ ಆರ್ಥಿಕ ಹಾಗೂ ಇತರೇ ಸೌಲಭ್ಯಗಳನ್ನು ಕಲ್ಪಿಸುತ್ತಿರುವುದು ಪ್ರಶಂಸನೀಯ ಎಂದು ತಿಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟಿಗ ದೊಡ್ಡ ಗಣೇಶ್ ಮಾತನಾಡಿ,  ರಾಷ್ಟ್ರೀಯ ಮಟ್ಟದ ಅಮೇಚೂರ್ ರಾಕ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ 16 ರಾಜ್ಯಗಳ ಕ್ರೀಡಾಪಟುಗಳು ಕ್ರೀಡಾ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕೆಂದ ಅವರು, ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕ ಹಾಗೂ ಮಾನಸಿಕವಾಗಿ ಸದಣಢರಾಗಬೇಕೆಂದು ಕರೆ ನೀಡಿದರು.
ರಾಕ್ ಬಾಲ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಗಾಂಧಿ, ಕಾರ್ಯದರ್ಶಿ ಚೇತನ್ ಪಗವಾಡ್, ಕರ್ನಾಟಕ ಅಮೇಚೂರ್ ರಾಕ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ರಫೀವಲ್ಲಾ, ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭಾ ಮಾಜಿ ಅಧ್ಯಕ್ಷ ಬಿ.ಎ. ಲೋಕೇಶ್ ಕುಮಾರ್ ಮಾತನಾಡಿದರು.
ಕರ್ನಾಟಕ ವಕ್ಪ್ ಬೋರ್ಡಿನ ಸದಸ್ಯ ಅಬ್ದುಲ್ ರಿಯಾಜ್ ಖಾನ್, ನಗರಸಭಾ ಸದಸ್ಯೆ ನಿರ್ಮಲಾ ಪ್ರಭು, ಸರ್ಕಾರಿ ವಕೀಲ ರಘುರಾಮ್, ಕರ್ನಾಟಕ ರಾಕ್ ಬಾಲ್ ತರಬೇತುದಾರ ಅಖ್ಯೂಬ್, ಮಂಚನಬಲೆ ಶ್ರೀನಿವಾಸ್, ಕೆ.ವಿ. ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಸಾಯಿಪ್ರಭು, ರಯಾನ್ ಫೌಂಡೇಷನ್ ಕಾರ್ಯದರ್ಶಿ ಎ.ಕೆ. ಫರೀದ್ ಬಾಬು, ಮಹಮ್ಮದ್ ಜಿಲಾನಿ, ಅಮೀರ್, ಯತೀಶ್ ಇದ್ದರು.
ಬಾಲಕ ಬಾಲಕಿಯರ ರಾಕ್ ಬಾಲ್ ಪಂದ್ಯಾವಳಿಯಲ್ಲಿ 16 ರಾಜ್ಯಗಳಿಂದ 40 ತಂಡಗಳು ಆಗಮಿಸಿದ್ದು, ಮೊದಲ ನಡೆದ ಕರ್ನಾಟಕ ಮತ್ತು ಮಹಾರಾಷ್ಟ್ರ ಬಾಲಕಿಯರ ತಂಡದ ನಡುವಿನ ಪಂದ್ಯದಲ್ಲಿ ಕರ್ನಾಟಕ ತಂಡ ಜಯಗಳಿಸಿತು. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನಾ ನಗರದ ಪ್ರವಾಸಿ ಮಂದಿರದಿಂದ ಬಿ.ಬಿ. ರಸ್ತೆಯ ಮೂಲಕ ವಕ್ಕಲಿಗರ ಕಲ್ಯಾಣ ಮಂಟಪದವರೆಗೂ ಭಾಗವಹಿಸಲಿರುವ ತಂಡಗಳು ಹಾಗೂ ಅತಿಥಿಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement