ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎತ್ತಿಕಟ್ಟುವುದರಲ್ಲಿ ಕೆಎಚ್ಚೇಮ್ ಪಿಎಚ್‌ಡಿ!: ಸುಧಾಕರ್ ರೆಡ್ಡಿ

Srinivasa Murthy VN
Updated On : 10 Apr 2014, 1:58 am

ಶಿಡ್ಲಘಟ್ಟ: ಕೆ.ಎಚ್.ಮುನಿಯಪ್ಪ ಅವರ ಸ್ವಾರ್ಥ ರಾಜಕಾರಣದಿಂದ ಎಲ್ಲರೂ ಬೇಸತ್ತಿದ್ದು, ಅವರನ್ನು ಸೋಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಪರ ಪ್ರಚಾರ ಕೈಗೊಂಡ ಅವರು, ಯಾರನ್ನು ಯಾರ ವಿರುದ್ಧ ಎತ್ತಿಕಟ್ಟಬೇಕು ಎಂಬುದರಲ್ಲಿ ಮುನಿಯಪ್ಪ ಅವರು ಪಿಎಚ್‌ಡಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು. ಮುನಿಯಪ್ಪ ಅವರು ಹೇಳುತ್ತಿರುವ ಕೈಗಾರಿಕಾ ಸ್ಥಾಪನೆಗಳು ಅವರ ಪರಿಶ್ರಮ ಅಲ್ಲ. ಬೇರೆಯವರು ಮಾಡಿದ್ದ ಸಾಧನೆಯನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. 24 ವರ್ಷದ ರಾಜಕೀಯ ಜೀವನದಲ್ಲಿ ಅವರು ತಮ್ಮ ಹುಟ್ಟೂರು ತಾಲೂಕಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಕೆ.ಎಚ್.ಮುನಿಯಪ್ಪ ಅವರನ್ನು ತೊಲಗಿಸಿ, ಕೋಲಾರ ಕ್ಷೇತ್ರವನ್ನು ರಕ್ಷಿಸಿ ಎಂದು ಕರೆ ನೀಡಿದರು. ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್, ಶಾಸಕ ರಾಜಣ್ಣ, ಬಂಕ್ ಮುನಿಯಪ್ಪ ಸೇರಿದಂತೆ ಅನೇಕ ಮುಖಂಡರ ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement