ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎರಡು ಗುಂಪುಗಳ ಮಧ್ಯ ಗಲಾಟೆ

Srinivasa Murthy VN
Updated On : 10 Apr 2014, 2:03 am

ಚಿಂತಾಮಣಿ: ನಿವೇಶನವೊಂದರ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಕೈ ಕೈ ಮಿಲಾಯಿಸುವ ಪರಿಸ್ಥಿ ನಿರ್ಮಾಣವಾಗಿತ್ತು. ಸಕಾಲದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ಆಗಬಹುದಾದ ಅನಾಹುತ ತಪ್ಪಿಸಿ ಘಟನೆ ನಗರದ ಅಶ್ವಿನಿ ಬಡಾವಣೆಯಲ್ಲಿ ನಡೆದಿದೆ.
ಡೆಕ್ಕನ್ ಆಸ್ಪತ್ರೆ ಹಿಂಭಾಗದಲ್ಲಿರುವ ನಿವೇಶನ ಸಂಖ್ಯೆ 29,48,51 ನಿವೇಶನಗಳ ಮೇಲೆ ದಾವೆ ಸಂಖ್ಯೆ ಒ.ಆರ್.ಎಸ್ 106 ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಆದರೆ ನಿವೇಶನವನ್ನು ಖರೀದಿಸಿ ಚೌಡರೆಡ್ಡಿಪಾಳ್ಯ ನಿವಾಸಿ ಅಬ್ಸಲ್ ಹಾಗೂ ಅಶ್ವಿನಿ ಬಡಾವಣೆಯಲ್ಲಿರುವ ಜಯಮ್ಮ ಎಂಬವರಿಗೂ ನಿವೇಶನ ವಿಷಯವಾಗಿ ಪರ-ವಿರೋಧ 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ತಕ್ಷಣ ನಗರಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮುರಳಿ ಘಟನಾ ಸ್ಥಳಕ್ಕೆ ಆಗಮಿಸಿ, ಗುಂಪನ್ನು ಚದುರಿಸಿದರು. ಎರಡೂ ಕಡೆಯವರನ್ನು ಠಾಣೆಗೆ ಕರೆದು ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.

ಚಿಕಿತ್ಸೆ ವೇಳೆ ಗರ್ಭಿಣಿ ಸಾವು ಆಸ್ಪತ್ರೆ ಎದುರು ಪ್ರತಿಭಟನೆ
ಚಿಂತಾಮಣಿ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದು, ವೈದ್ಯರು ನೀಡಿದ ಚುಚ್ಚುಮದ್ದು ಸಾವಿಗೆ ಕಾರಣವೆಂದು ಆರೋಪಿಸಿದ ಮಹಿಳೆಯ ಸಂಬಂಧಿಕರು ಸರ್ಕಾರಿ ಆಸ್ಪತ್ರೆ ಮುಂದೆ ಶವವನ್ನಿಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೊಮ್ಮೇಕಲ್ಲು ಗ್ರಾಮದ ಆಶಾ (24) ಮೃತಪಟ್ಟ ಗರ್ಭಿಣಿ. ತಾಲೂಕಿನ ಬೊಮ್ಮೇಕಲ್ಲು ಗ್ರಾಮದ ಆಶಾ 9 ತಿಂಗಳ ಗರ್ಭಿಣಿಯಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ. ಮಂಜುಳ ಬಳಿ ಪ್ರತಿ ತಿಂಗಳು ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಬುಧವಾರ ಚುಚ್ಚುಮದ್ದು ನೀಡಿದಾಗ ದೇಹದಲ್ಲಿ ಆರೋಗ್ಯ ಏರುಪೇರು ಉಂಟಾದ ಕಾರಣ ಸಂಬಂಧಿಕರು ಆತಂಕಗೊಂಡು ವೈದ್ಯರಿಗೆ ತಿಳಿಸಿದ್ದು, ತಕ್ಷಣ ಮಹಿಳೆ ಸಾವನ್ನಪ್ಪಿರುವುದಾಗಿ ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಂಬಂಧಿಕರು ಗರ್ಭಿಣಿ ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ನಗರ ಠಾಣೆ ವೃತ್ತ ನಿರೀಕ್ಷಕ ನಂಜಪ್ಪ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು. ಮೃತಳ ಗಂಡ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement