ದಿಕ್ಕು ತಪ್ಪಿಸುತ್ತಿರುವ ಮುನಿಯಪ್ಪ: ಆರೋಪ
ಚಿಂತಾಮಣಿ: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಕ್ಷೇತ್ರದ ಅಲ್ಪಸಂಖ್ಯಾತ ಮತದಾರರನ್ನು ಹಲವು ನಿರುಪಯುಕ್ತ ಯೋಜನೆಗಳ ಹೆಸರಿನಲ್ಲಿ ದಿಕ್ಕು ತಪ್ಪಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಾಯಕ ಬಾಬಾಜಾನ್ ಆರೋಪಿಸಿದರು.
ಚಿಂತಾಮಣಿ ನಗರದ ಮಾಳಪ್ಪಲ್ಲಿಯ ಅಂಜನಿ ನಿವಾಸದಲ್ಲಿ ಕೆ.ಎಚ್.ಎಂ ಬಣ ತೊರೆದು ಮಾಜಿ ಶಾಸಕ ಎಂ.ಸಿ.ಸುಧಾಕರ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಅಲ್ಪ ಸಂಖ್ಯಾತ ಬಿಪಿಎಲ್ ಕಾರ್ಡುದಾರರಿಗೆ 10 ಸಾವಿರ ಸಹಾಯಧನ ನೀಡುವ ಟೊಳ್ಳು ಭರವಸೆ ನೀಡುತ್ತಿದ್ದಾರೆ.
ಮತದಾರರನ್ನು ವಿನಾಕಾರಣ ಬ್ಯಾಂಕುಗಳಿಗೆ ಅಲೆದಾಡಿಸುವುದೇ ಅವರ ಸಾಧನೆ. ಅಲ್ಪ ಸಂಖ್ಯಾತರನ್ನು ಉಪಯೋಗಿಸಿಕೊಂಡು ಬಿಸಾಡುವ ವಸ್ತುಗಳಿಗೆ ಕಾಣಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಿಯಾಜ್, ಜಾಕೀರ್, ಅಕ್ಮಲ್ ಸೇರಿ ಮತ್ತಿತರಿದ್ದರು.