ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಡಾ. ಸುಬ್ರಮಣ್ಯಸ್ವಾಮಿ ವಿರುದ್ಧ ಕ್ರಮಕ್ಕೆ ವಕೀಲರ ಆಗ್ರಹ

Srinivasa Murthy VN
Updated On : 11 Apr 2014, 1:14 am

ಕೋಲಾರ: ದಲಿತರಿಗೆ ಒಂದು ತಲೆಮಾರಿನ ನಂತರ ಮೀಸಲಾತಿ ರದ್ದು ಮಾಡಬೇಕೆಂದು ಹೇಳಿಕೆ ನೀಡಿರುವ ಬಿಜೆಪಿಯ ಹಿರಿಯ ಮುಖಂಡ ಡಾ. ಸುಬ್ರಮಣ್ಯಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ಪ್ರಗತಿಪರ ವಕೀಲರ ನಿಯೋಗವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಡಾ.ಸುಬ್ರಮಣ್ಯಸ್ವಾಮಿ ತುಮಕೂರಿನಲ್ಲಿ ಸೋಮವಾರ ಬಿಜೆಪಿ ಕಾರ್ಯಕ್ರಮದಲ್ಲಿ, ದಲಿತರಿಗೆ ಅಥವಾ ಯಾರಿಗೇ ಆಗಲಿ ಒಂದು ತಲೆಮಾರಿಗೆ ಮಾತ್ರ ಮೀಸಲಾತಿ ಸಾಕು. ಆತನ ಮುಂದಿನ ತಲೆಮಾರಿಗೆ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿರುವುದು ಅಹಿಂದ ವರ್ಗಗಳ ಸೂಕ್ಷ್ಮ ಭಾವನೆಗಳಿಗೆ ಧಕ್ಕೆ ತಂದಿದೆ, ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸುಬ್ರಮಣ್ಯಸ್ವಾಮಿ ವಿರುದ್ಧ ಅಟ್ರಾಸಿಟಿ ಕಾಯಿದೆ ಅನ್ವಯ ಪ್ರಕರಣ ದಾಖಲು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಮಗ್ರ ಭಾರತ ವಿಕಾಸಕ್ಕಾಗಿ ಎಂಬ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿರುವುದರಿಂದ ಅಹಿಂದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುವುದರಿಂದಲೇ ಸಮಗ್ರ ಭಾರತ ವಿಕಾಸಕ್ಕೆ ಅಡ್ಡಿಯಾಗಿದೆ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಸವರ್ಣೀಯರಿಗೆ ಇದರಿಂದ ಅಹಿಂದ ವರ್ಗಗಳ ವಿರುದ್ಧ ದ್ವೇಷಭಾವನೆ ಸೃಷ್ಟಿಯಾಗುತ್ತದೆ ಎಂದು ದೂರಿದ್ದಾರೆ.
ಹಿರಿಯ ವಕೀಲರಾದ ವಿ.ಎಂ. ಶ್ರೀನಿವಾಸಮೂರ್ತಿ, ಬದರಿನಾರಾಯಣ, ಗೋವಿಂದರಾಜು, ಬೆಳಗಾನಹಳ್ಳಿ ವೆಂಕಟೇಶ್, ಶಂಕರ್, ಮಹೇಶ್, ಕೆ. ನರೇಂದ್ರಬಾಬು ನಿಯೋಗದಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement