ತಿಪ್ಪೆಯಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ
ಕೋಲಾರ: ಈ ಬಾರಿ ಶೇಕಡಾವಾರು ಮತದಾನ ಹೆಚ್ಚಳಕ್ಕೆ ಜಿಲ್ಲಾಡಳಿತ ಕಸರತ್ತು ನಡೆಸುತ್ತಿದ್ದರೆ ಮತ್ತೊಂದು ಕಡೆ ಮತದಾರರಿಗೆ ವಿತರಣೆ ಮಾಡಬೇಕಾಗಿದ್ದ ಗುರುತಿನ ಚೀಟಿಗಳನ್ನು ತಿಪ್ಪೆಗೆ ಎಸೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಕೋಲಾರ ವಿಧಾನ ಸಭಾ ಕ್ಷೇತ್ರ ಭಾಗದ ಸಂಖ್ಯೆ 148ಕ್ಕೆ ಸೇರಿದ ಕಠಾರಿಪಾಳ್ಯದ ನಿವಾಸಿಗಳ ನೂರಾರು ಮತ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಗಳನ್ನು ಆಯಾ ಮನೆಗಳಿಗೆ ತೆರಳಿ ಅಲ್ಲಿನ ಮತದಾರರಿಗೆ ಸಂಬಂಧಪಟ್ಟ ಮತಗಟ್ಟೆಯ ಅಧಿಕಾರಿಗಳು ತಲುಪಿಸಬೇಕಾಗಿದೆ.
ಆದರೆ ಅಂತಹ ಮತಗುರುತಿನ ಜೆರಾಕ್ಸ್ ಪ್ರತಿಗಳನ್ನು ನಗರದ ಕಠಾರಿಪಾಳ್ಯದ ಸರ್ಕಾರಿ ಪ್ರಾಥಮಿಕ ಶಾಲೆ ಎದುರಿನ ತಿಪ್ಪೆಯಲ್ಲಿ ಎಸೆದಿರುವುದು ಕಂಡುಬಂತು, ಇದಕ್ಕೆ ಯಾರು ಹೊಣೆ.
ಮುನಿಯಪ್ಪ ಗೆಲ್ಲೋದು ಗ್ಯಾರಂಟಿ
ಚಿಂತಾಮಣಿ: ಮುನಿಯಪ್ಪ ಅವರು ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳೇ ಅವರಿಗೆ ಶ್ರೀರಕ್ಷೆ. ಹಾಗಾಗಿ, ಅವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದ ಶತಃಸಿದ್ಧ ಎಂದು ಕೆಪಿಸಿಸಿ ಸದಸ್ಯ ಜೆ.ವಿ.ನಾರಾಯಣಸ್ವಾಮಿ ಹೇಳಿದರು.
ನಗರದ ಆದರ್ಶ ಚಿತ್ರಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “OæàÞÅÛÁÚ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಕೆ.ಎಚ್.ಮುನಿಯಪ್ಪ ಅವರು 7ನೇ ಬಾರಿಗೂ d¾ÚßÑÚß}Û¡Áæ’ ಎಂದರು. ಇದಕ್ಕೂ ಮುನ್ನ ಮುನಿಯಪ್ಪ ಅವರ ಪರವಾಗಿ ಗುರುವಾರ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿ, ಮತಯಾಚಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ಯಾದವ್, ಕಮಲಮ್ಮ, ಡಾ.ಶ್ರೀನಿವಾಸ್, ತೌಡ್ ಅಪ್ಪಲ್ಲ, ಸಿ.ಎಂ.ಇಬ್ರಾಹಿಂ, ರಾಜಾರಾಮ್, ಅನ್ವರ್ ಪಾಷ, ನೇತಾಜಿಗೌಡ ಸೇರಿದಂತೆ ಇನ್ನೂ ಹಲವು ಮುಖಂಡರು ಉಪಸ್ಥಿತರಿದ್ದರು.
ಮಾಲೂರಿನಲ್ಲಿ ಕಾಂಗ್ರೆಸ್ ಪ್ರಚಾರ
ಮಾಲೂರು: ದಲಿತರ-ಶೋಷಿತ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಕಾಂಗ್ರೆಸ್ ಮಾತ್ರ ಎಂದು ಕೆಪಿಸಿಸಿ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಾಮ್ ಹೇಳಿದರು.ಛ
ತಾಲೂಕಿನ ತೂರ್ನಹಳ್ಳಿಯಲ್ಲಿ ವಾಲ್ಮೀಕಿ ಜನಾಂಗವನ್ನು ಉದ್ದೇಶಿಸಿ ಮಾತನಾಡಿ, ಕಳೆದ 6 ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಕೆ.ಎಚ್. ಮುನಿಯಪ್ಪರವರು ವಾಲ್ಮೀಕಿ ಜನಾಂಗದ ಅಭಿವೃದ್ಧಿಗೆ ವಿವಿಧ ಯೋಜನೆ ಮೂಲಕ ಹಣ ನೀಡಿದ್ದಾರೆ ಎಂದರು. ಈ ಬಾರಿಯೂ ಕ್ಷೇತ್ರದ ಜನತೆ ಕಾಂಗ್ರೆಸ್ನ್ನು ಬೆಂಬಲಿಸಲಿದ್ದು, ಕೆ.ಎಚ್. ಮುನಿಯಪ್ಪರವರು 7 ನೇ ಬಾರಿಗೆ ಲೋಕ ಸಭೆ ಪ್ರವೇಶಿಸುವುದು ಖಚಿತ ಎಂದರು. ನಾಗರಾಜ್, ಸುಗಟೂರು ಶಂಕರಮೂರ್ತಿ, ಲಿಂಗಾ ರೆಡ್ಡಿ, ವಿ. ಮುನಿಯಪ್ಪ, ನಾರಾಯಣಸ್ವಾಮಿ ಇದ್ದರು.