ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಮುನಿಯಪ್ಪ ಆಯ್ಕೆ ಖಚಿತ

Srinivasa Murthy VN
Updated On : 11 Apr 2014, 1:13 am

ಬಂಗಾರಪೇಟೆ: ಸೋಲಿಲ್ಲದ ಸರದಾರ ಕಾಂಗ್ರೆಸ್ ಅಭ್ಯರ್ಥಿ ಕೆ.ಹೆಚ್. ಮುನಿಯಪ್ಪರನ್ನು ಮತ್ತೆ ಲೋಕಸಭೆಗೆ ಕಳುಹಿಸಿ ವಿರೋಧಿ ಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ನೀಡಬೇಕೆಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಮಿಂಚಿನ ಪ್ರಚಾರ ನಡೆಸಿ ಮಾತನಾಡಿ ಹತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಹೆಚ್ಚಿನ ಮತ ನೀಡಿ ಆಯ್ಕೆಗೆ ಕಾರಣರಾದ ಮಹಿಳಾ ಕಾರ್ಯಕರ್ತರನ್ನು ಅವರು ಅಭಿನಂದಿಸಿದರು. ಶಾಸಕರು ಹೋದ ಕಡೆಯಲ್ಲಾ ಹೆಚ್ಚಾಗಿ ಮಹಿಳಾ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಮಾಗೊಂದಿ ಪಂಚಾಯ್ತಿಯ ವರದಾಪುರ ಗ್ರಾಮದಲ್ಲಿ ಶಾಸಕರು ಭೇಟಿ ನೀಡಿದಾಗ ನೂರಾರು ಮಹಿಳೆಯರು ಜಮಾಯಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಭರವಸೆ ನೀಡಿದರು. ಕೆ.ಹೆಚ್. ಮುನಿಯಪ್ಪ ಸಾಧನೆ ಮಾಡಿಲ್ಲ ಕುತಂತ್ರ ರಾಜಕೀಯ ಮಾಡುವ ಮೂಲಕ ಗೆಲವು ಕಂಡಿದ್ದಾರೆ ಎಂಬ ಆರೋಪಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪ್ರಚಾರದ ಅಸ್ತ್ರವಾಗಿದೆ ಎಂದರು. ಮುಖಂಡರಾದ ಕೆ.ಚಂದ್ರಾರೆಡ್ಡಿ, ಹೊಸರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮತ್ತಿತರರಿದ್ದರು.

ಜೆಡಿಎಸ್‌ನಲ್ಲಿ ರಾಜಿನಾಮೆಗಳ ಪರ್ವ: ಮುನಿಯಪ್ಪ ಲೇವಡಿ
ಶಿಡ್ಲಘಟ್ಟ: ರಾಜ್ಯದಲ್ಲಿ ಜೆಡಿಎಸ್‌ಪಕ್ಷದಲ್ಲಿ ರಾಜಿನಾಮೆಗಳ ಪರ್ವ ಆರಂಭವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ. ಮುನಿಯಪ್ಪ ಆರೋಪಿಸಿದರು.
ತಾಲೂಕಿನ ವಿವಿಧ ಗ್ರಾಪಂಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಪರ ಮತಯಾಚನೆ ಮಾಡಿದ ಅವರು, ಕಳೆದ ಐದು ವರ್ಷಗಳ ಹಿಂದೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದ ಕೆ.ಎಚ್. ಮುನಿಯಪ್ಪ ನೆನೆಗುದಿಗೆ ಬಿದ್ದಿದ್ದ ರೈಲು ಸಂಚಾರವನ್ನು ಸಾಕಾರಗೊಳಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು. ತಾಲೂಕಿನ ಮಳ್ಳೂರು, ಮೇಲೂರು, ಭಕ್ತರಹಳ್ಳಿ, ಮಳಮಾಚನಹಳ್ಳಿ, ಬೆಳ್ಳೂಟಿ, ನಾಗಮಂಗಲ, ಹೊಸಪೇಟೆ, ಹೇಮಾರ್ಲಹಳ್ಳಿ, ಚೀಮಂಗಲ, ತುಮ್ಮನಹಳ್ಳಿ, ಸೇರಿದಂತೆ ಅನೇಕ ಗ್ರಾಪಂಗಳಲ್ಲಿ ಪ್ರಚಾರ ನಡೆಸಿದರು.
ಕೆ.ಎಚ್. ಮುನಿಯಪ್ಪ ಸಹೋದರ ಕೆ.ಎಚ್. ಕೆಂಚಪ್ಪ, ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ, ಮಳ್ಳೂರು ರಾಮರೆಡ್ಡಿ, ಭಕ್ತರಹಳ್ಳಿ ವೆಂಕಟಮೂರ್ತಿ, ಬಿ. ಮುನೇಗೌಡ, ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ಕಂಬದಹಳ್ಳಿ ಸತೀಶ್, ಜಗದೀಶ್, ಕೆ. ಮುತ್ತುಕದಹಳ್ಳಿ ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement