ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಈ ಬಾರಿ ಕಾಂಗ್ರೆಸ್ ತಿರಸ್ಕರಿಸಿ: ಜೆಡಿಎಸ್ ಅಭ್ಯರ್ಥಿ ಕೇಶವ್

Srinivasa Murthy VN
Updated On : 12 Apr 2014, 12:38 pm

ಮಾಲೂರು: ಅಲ್ಪಸಂಖ್ಯಾತರನ್ನು ಕೇವಲ ಮತ ಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳುವ ಕಾಂಗ್ರೆಸ್‌ನ್ನು ತಿರಸ್ಕರಿಸಿ ಎಂದು ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ್ ಕರೆ ನೀಡಿದರು.
ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ನಂತರ ದೊಡ್ಡ ಮಸೀದಿಯಲ್ಲಿ ಶುಕ್ರವಾರದ ಸಮಾಜ್ ನಂತರ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿ, 'ಕಳೆದ ಎರಡು ದಶಕಗಳಿಂದ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ' ಎಂದು ಹೇಳಿದರು.
ಶಾಸಕ ಮಂಜುನಾಥ್‌ಗೌಡ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಗೌಡ, ನಂಜೇಗೌಡ, ಶಾಸಕ ಮಂಜುನಾಥ್ ಗೌಡರ ಪತ್ನಿ ಅರಿದ್ರಾ ಮಂಜುನಾಥ್‌ಗೌಡ, ಪುರಸಭೆ ಸದಸ್ಯರು, ತಾಪಂ ಸದಸ್ಯರು ಸೇರಿದಂತೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಮಂದಿ ರೋಡ್ ಶೋ ನಲ್ಲಿ ಭಾಗವಹಿಸಿದ್ದರು.

ಯಾವುದೇ ಆಮಿಷಗಳಿಗೆ ಬಲಿಯಾಗದೇ ಮತ ಚಲಾಯಿಸಲು ಮನವಿ
ಗುಡಿಬಂಡೆ: ಪ್ರಜಾಪ್ರಭುತ್ವ ಅಸ್ತಿತ್ವಕ್ಕಾಗಿ ತಮ್ಮ ಮತವನ್ನು ಸ್ವಯಂ ಪ್ರೇರಣೆಯಿಂದ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಚಲಾಯಿಸಬೇಕೆಂದು ತಹಸೀಲ್ದಾರ್ ಎಸ್. ಶೈಲಜಾ ಸಲಹೆ ನೀಡಿದರು.
ಸ್ವೀಪ್ ಸಮಿತಿ ವತಿಯಿಂದ ಜನತೆಯಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಮ್ಯಾರಥಾನ್ ನಡಿಗೆ ಜಾಥಾದಲ್ಲಿ  ಮಾತನಾಡಿದರು. ನಂತರ ತಾಪಂ ಇ.ಒ ತಿಮ್ಮಪ್ಪ ಮಾತನಾಡಿ, ಚುನಾವಣೆಯಲ್ಲಿ  ತಪ್ಪದೇ ಮತದಾನ ಮಾಡುವುದರ ಮೂಲಕ ತಮ್ಮ ಶಕ್ತಿ ಪ್ರಯೋಗಿಸಬೇಕು ಎಂದರು. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಖ್ಯರಸ್ತೆಯಲ್ಲಿ ಜಾಥ ಹೊರಟು ಅಂಬೇಡ್ಕರ್ ನಗರದವರೆಗೂ ಸಾಗಿತ್ತು.  ವೈ.ಸಿ. ರವಿಕುಮಾರ್, ಶ್ರೀರಾಮರೆಡ್ಡಿ, ತಾಲೂಕಿನ ಎಲ್ಲ ಗಾಪಂ ಕಾರ್ಯದರ್ಶಿಗಳು ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement