ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಕಾಂಗ್ರೆಸ್ ದುರಾಡಳಿತಕ್ಕೆ ಬ್ರೇಕ್ ಹಾಕಿ'

Srinivasa Murthy VN
Updated On : 14 Apr 2014, 1:21 am

ಬಂಗಾರಪೇಟೆ: ಕಾಂಗ್ರೆಸ್ ದುರಾಡಳಿತಕ್ಕೆ ಬ್ರೇಕ್ ಹಾಕಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವರವರನ್ನು ಬೆಂಬಲಿಸುವಂತೆ ನೂರಾರು ಮುಸ್ಲಿಂ ಯುವ ಕಾರ್ಯಕರ್ತರು ಭಾನುವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ಮಾಡಿ ಮತಯಾಚಿಸಿದರು.
ಪಟ್ಟಣದ ಹೊರವಲಯದ ಚೆಕ್‌ಪೋಸ್ಟಿಂದ ಆರಂಭವಾದ ರಾಲಿ ಬಜಾರ್ ರಸ್ತೆ, ಬಸ್‌ನಿಲ್ದಾಣ, ಮಾರುಕಟ್ಟೆ ಮತ್ತಿತರ ಕಡೆ ಸಂಚರಿಸಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪುರಸಭೆ ಸದಸ್ಯೆ ಮಹಮದ್ ಗೌಸ್ 30ವರ್ಷಗಳಿಂದ ಜಿಲ್ಲೆಯಲ್ಲಿ ಪಾಳೆಗಾರಿಕೆ ತರ ಒಬ್ಬರೆ ಲೋಕಸಭೆ ಸದಸ್ಯರಾಗಿದ್ದಾರೆ.ಇವರಿಂದ ಜಿಲ್ಲೆಗೆ ಯಾವುದೇ ಲಾಭವಿಲ್ಲ ಜಿಲ್ಲೆಯಲ್ಲಿ ಸಾಕಷ್ಟು ಮಂದಿ ಕೂಲಿ ಕಾರ್ಮಿಕರು ನಿರುದ್ಯೋಗಿಗಳು ಇದ್ದಾರೆ ಅವರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ ಬರೀ ಸುಳ್ಳು ಹೇಳಿಕೆಗಳನ್ನು ನೀಡಿ ಮತದಾರರನ್ನು ಮರಳು ಮಾಡಿಕೊಂಡು ಬಂದಿದ್ದಾರೆ.ಈಗ ಮರಳು ಮಾಡುವ ಕಾಲ ದೂರವಾಗಿದೆ ಜನರು ಪ್ರಜ್ಞಾವಂತರಾಗಿದ್ದಾರೆ ಬದಲಾವಣೆ ಬಯಸಿದ್ದಾರೆ ಅದರಂತೆ ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪುರಸಭೆ ಮಾಜಿ ಸದಸ್ಯ ಶಿವರುಮಾರ್, ಶಿರಾಜ್ ಅಹ್ಮದ್, ರಮೇಶ್, ಸಜ್ಜಾದ್ ಖಾನ್, ನಹೀಂಪಾಷ ಮತ್ತಿತರರು ಇದ್ದರು.

ಬಿಜೆಪಿಗೆ ಬಲಿಜ ಸಮುದಾಯದ ಬೆಂಬಲ
ಕೆಜಿಎಫ್: ದೇಶದ ಅಭಿವೃದ್ಧಿ ಮತ್ತು ಬಲಿಜ ಜನಾಂಗಕ್ಕೆ 2ಎ ಯೋಜನೆಯನ್ನು ಜಾರಿಗೊಳಿಸಿದ ಬಿಜೆಪಿ ಬೆಂಬಲಿಸುವುದಾಗಿ ಬಲಿಜ ಸಂಘಟನೆಯ ಉಪಾಧ್ಯಕ್ಷ ರಾಮಮೂರ್ತಿನಾಯ್ಡು ಹೇಳಿದರು.
ಇದೇ ಕಾರಣಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವುದಾಗಿ ಅವರು ತಿಳಿಸಿದರು. ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 50 ವರ್ಷದಿಂದ ಬಲಿಜ ಸಮುದಾಯಕ್ಕೆ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸಂಘದ ರಾಜ್ಯಾಧ್ಯಕ್ಷರ ಮಾರ್ಗದರ್ಶನದ ಮೇರೆಗೆ ಜಿಲ್ಲೆಯ ತಮ್ಮ ಸಮುದಾಯ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ನಿರ್ಧರಿಸಿದೆ ಎಂದು ತಿಳಿಸಿದರು. ಹಾಗೆಯೇ, ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿತ್ತಿದ್ದರೂ ನನ್ನನ್ನ ಕಡೆಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸಲಿರುವ ನಟಿ, ವಿಧಾನ ಪರಿಷತ್ ಸದಸ್ಯ ತಾರಾ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಿರುವುದಾಗಿ ಹೇಳಿದರು. ಈ ವೇಳೆ ಬಲಿಜ ಸಂಘದ ಮುಖಂಡರಾದ ಮುನಿರಾಜು, ರವಿ, ಲೋಕೇಶ್, ಪ್ರೇಮ್‌ಕುಮಾರ್, ವಿವೇಕ್‌ಚಂದ್ರು, ಬಿಜೆಪಿ ಪಕ್ಷದ ಮುಖಂಡರಾದ ಎಲ್.ರಮೇಶ್, ಸಂಪತ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಸಂಚಾಲಕ ಯಶ್ವಂತ್, ರಾಜು ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement