ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್‌ನಲ್ಲಿ ಮೂರು ಪಕ್ಷಗಳ ಮತ ಬೇಟೆ

Srinivasa Murthy VN
Updated On : 14 Apr 2014, 1:22 am

ಮಾಲೂರು: ಮತದಾನ ದಿನ ಹತ್ತಿರವಾಗುತ್ತಿದ್ದ ಮಾಲೂರು ಪಟ್ಟಣದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು, ಮುಖಂಡರು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಬಿಜೆಪಿ: ಬಿಜೆಪಿಯ ನಗರಾಧ್ಯಕ್ಷ ಎಂ.ಪಿ.ವಿಜಯ ಕುಮಾರ್ ಹಾಗೂ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಅಪ್ಪಿ ರಾಜು ನೇತೃತ್ವದಲ್ಲಿ ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ರವರ ಪರ ನಿವಾಸಿಗಳ ಬಳಿ ಮತಯಾಚಿಸಿದರು. ಈ ವೇಳೆ, ಹನುಮಂತ ರೆಡ್ಡಿ, ಭಾರತಮ್ಮ ನಂಜುಂಡಪ್ಪ, ಸಾಬೂಸಾಬ್, ಆಂಜಿ, ಸೋಮಣ್ಣ, ವೆಂಕಟೇಶ್, ರಾಮಮೂರ್ತಿ, ಶ್ರೀವಲ್ಲಿ ಇದ್ದರು. ಪುರಸಭೆ ಬಿಜೆಪಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲದೇ ಇತರೆ ವಾರ್ಡ್‌ಗಳಿಗೂ ತೆರಳಿ ಮತಯಾಚಿಸಿದರು.
ಜೆಡಿಎಸ್: ಪಕ್ಷದ ಪಟ್ಟಣದ ಉಸ್ತುವಾರಿ ಹೊತ್ತಿರುವ ಪುರಸಭೆ ಮಾಜಿ ಸದಸ್ಯ ಟಿ.ರಾಮಚಂದ್ರ ನೇತೃತ್ವದಲ್ಲಿ ಪಟ್ಟಣದ 19,21,22, ಹಾಗೂ 21 ನೇ ವಾರ್ಡ್‌ಗಳಲ್ಲಿ ಜೆಡಿಎಸ್‌ನ ಅಭ್ಯರ್ಥಿ ಕೇಶವ ಪರ ಮತಯಾಚಿಸಿದರು. ಶಾಸಕ ಮಂಜುನಾಥ್‌ಗೌಡ ಅವರ ಪತ್ನಿ ಅರಿದ್ರಾ, ರೇಖಾ ಸುಬ್ರಮಣಿ, ವಿಜಯಲಕ್ಷ್ಮಿ ಕೃಷ್ಣ, ಜಾಕೀರ್‌ಖಾನ್, ಪಚ್ಚಪ್ಪ, ಮಾಲಾದ್ರಿ, ಅಲೂಮಂಜು, ಗೀತಾ ರಮೇಶ್, ವಿಜಯಕುಮಾರ್, ಗೂಡು ನಾಗರಾಜ್, ದೇವರಾಜ್, ವೇಣು, ಜುಟ್ಟು ಕೃಷ್ಣ, ಆರ್.ಕೆ.ಕೃಷ್ಣಪ್ಪ, ಶ್ರೀನಿವಾಸ್, ತರಕಾರಿ ಮಂಜು, ಪ್ರದೀಪ್ ರೆಡ್ಡಿ, ಪ್ರೀತಿ ಇದ್ದರು.
ಕಾಂಗ್ರೆಸ್: ಮಾಜಿ ಶಾಸಕ ಕೃಷ್ಣಯ್ಯ ಶೆಟ್ಟಿ, ಚೆನ್ನಕೇಶವ ನೇತೃತ್ವದಲ್ಲಿ ಪಟ್ಟಣದ ಹಲವಡೆ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಪರವಾಗಿ ಮತಯಾಚಿಸಿದರು. ಸಿ.ಲಕ್ಷ್ಮಿನಾರಾಯಣ್, ಸಿ.ಪಿ.ವೆಂಕಟೇಶ್, ಕೋಳಿ ನಾರಾಯಣ್, ಶಬ್ಬೀರ್, ಮುನಿವೆಂಕಟಪ್ಪ, ಸುಬ್ರಮಣ್ಯ, ಗುಂಡಪ್ಪ, ಸುರೇಶ್ ಕುಮಾರ್, ಅನ್ವರ್, ಕರವೇ ರವಿ, ರಸಿಕ ರವಿ, ರಾಜಪ್ಪ, ಮಧುಸೂಧನ್, ಅಶ್ವತ್ಥ್ ರೆಡ್ಡಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement