ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಶದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಿ

Srinivasa Murthy VN
Updated On : 14 Apr 2014, 1:22 am

ಟೇಕಲ್: ದೇಶದ ಅಭಿವೃದ್ಧಿಗೆ ಬಿಜೆಪಿ ಗೆಲ್ಲಿಸಬೇಕೆಂದು ಕೋಲಾರ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಕೋರಿದರು.
ಟೇಕಲ್‌ನಲ್ಲಿ ಕೋಲಾರ ಜಿಲ್ಲಾ ರೇಣುಕಾ ಯಲ್ಲಮ್ಮ ಬಳಗದ ಜಿಲ್ಲಾಧ್ಯಕ್ಷ ಡಾ.ಪಿ. ನಾರಾಯಣಸ್ವಾಮಿರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಜಿಲ್ಲೆಯಲ್ಲಿ ಕೆ.ಎಚ್. ಮುನಿಯಪ್ಪನವರ ಸಾಧನೆ ಶೂನ್ಯ. ಇನ್ನು ಜೆಡಿಎಸ್ ಅಭ್ಯರ್ಥಿ ಕೇಶವ ಆಂಧ್ರಪ್ರದೇಶದವರಾಗಿದ್ದಾರೆ. ಆದ್ದರಿಂದ ಬಿಜೆಪಿ ಬೆಂಬಲಿಸಿ ಎಂದರು.
ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಡಾ.ಪಿ.ನಾರಾಯಣಸ್ವಾಮಿ ಮಾತನಾಡಿ, ಮೋದಿಯವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಪಕ್ಷಕ್ಕೆ ಮರಳಿ ಬಂದಿದ್ದಾಗಿ ತಿಳಿಸಿದರು. ಟೇಕಲ್ ಗ್ರಾಪಂ ಅಧ್ಯಕ್ಷ ಮಂಜುಳಶಿವಣ್ಣ, ಉಪಾಧ್ಯಕ್ಷೆ ಮುನಿಯಮ್ಮ, ನಾಗರಾಜ್ ಅವರ ಬೆಂಬಲಿಗರು ಸೇರ್ಪಡೆಯಾದರು. ಕೃಷ್ಣಾರೆಡ್ಡಿ, ಜಿ.ಇ. ರಾಮೇಗೌಡ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ನಾನಾ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.

ಎಚ್‌ಡಿಕೆ ಗೆಲವಿಗೆ ಅವಿರತ ಪ್ರಚಾರ
ಬಾಗೇಪಲ್ಲಿ: ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಗೆಲವಿಗೆ ಅವಿರತವಾಗಿ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ಡು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಸುವರ್ಣ ಆಡಳಿತ ನೀಡಿದ ಕುಮಾರಸ್ವಾಮಿ ಅವರು, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ಸಂಧ್ಯಾ ಸುರಕ್ಷಾ ಯೋಜನೆ, ರೈತರ ಸಾಲಮನ್ನಾ, ಗ್ರಾಮವಾಸ್ತವ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆಗೆ ತಂದರು ಎಂದರು.
ಎಚ್‌ಡಿಕೆಗೆ ಈ ಕ್ಷೇತ್ರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಚಿಕ್ಕಬಳ್ಳಾಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ ಜಿಲ್ಲಾಡಳಿತ ಭವನಕ್ಕೆ 20 ಕೋಟಿ ಮೀಸಲಿಟ್ಟಿದ್ದರು. ಬಡವರ ಮತ್ತು ಸಾಮಾನ್ಯ ಜನರ ಬಗ್ಗೆ ಇರುವ ಕಾಳಜಿಯೇ ಅವರ ಗೆಲುವಿಗೆ ಕಾರಣವಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಎಂ.ರಾಮಕೃಷ್ಣಪ್ಪ, ಮಹಮದ್ ಎಸ್ ನೂರುಲ್ಲಾ, ಸೂರ್ಯನಾರಾಯಣಶೆಟ್ಟಿ, ನರಸಿಂಹಪ್ಪ, ಟಿ.ಪ್ರಕಾಶ್, ಮಂಜು, ಡಿ.ಎನ್.ನಾರಾಯಣಸ್ವಾಮಿಶೆಟ್ಟಿ, ಶ್ರೀನಿವಾಸರೆಡ್ಡಿ, ಸದಾಶಿವ ಮುಂತಾದವರು ಇದ್ದರು.

ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ
ಮುಳಬಾಗಲು: ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಅಭಿವೃದ್ಧಿಯ ಕಳಕಳಿ ಹೊಂದಿದ್ದು ಅವರನ್ನು ಗೆಲ್ಲಿಸಲು ತಾಲೂಕು ಬಿಜೆಪಿ ಮುಖಂಡ ಎಂ. ಪ್ರಸಾದ್ ಕರೆ ನೀಡಿದರು.
ತಾಲೂಕಿನ ಉತ್ತನೂರು, ಹನುಮನಹಳ್ಳಿ ಗ್ರಾಮಗಳಲ್ಲಿ ಭಾನುವಾರ ಬಿಜೆಪಿ ಪರ ಪ್ರಚಾರದಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಕೆ.ಎಚ್. ಮುನಿಯಪ್ಪ ಸ್ಪಂದಿಸುತ್ತಿಲ್ಲವೆಂದು ದೂರಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಗಳು ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರು ಮತದಾರರಿಗೆ ವಿವರಿಸಿ ಜಾಗೃತಿ ಮೂಡಿಸಲು ಕೋರಿದರು. ಜಿಲ್ಲಾ ರೈತ ಮೋರ್ಚ ಕಾರ್ಯದರ್ಶಿ ಹನುಮನಹಳ್ಳಿ ನಾಗೇಶ್, ತಾಲೂಕು ಉಪಾಧ್ಯಕ್ಷ ಗೊಲ್ಲಹಳ್ಳಿ ಜಯರಾಮ್, ಕೂಲದೇವಿ ಶ್ರೀರಾಮ್ ಇದ್ದರು.

ಜೆಡಿಎಸ್ ಬೆಂಬಲಿಸಲು ಮನವಿ
ಮುಳಬಾಗಲು: ಪರಿಶಿಷ್ಟ ಪಂಗಡಗಳ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಪಿ. ವೆಂಕಟರವಣಪ್ಪ ವಾಲ್ಮೀಕಿಗಳು ಜೆಡಿಎಸ್ ಬೆಂಬಲಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement