ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನನ್ನ ಚರಿತ್ರೆ ಸುಧಾಕರ್‌ಗೆ ಗೊತ್ತಿಲ್ಲ: ಮುನಿಯಪ್ಪ

Srinivasa Murthy VN
Updated On : 14 Apr 2014, 1:21 am

ಚಿಂತಾಮಣಿ: ನನ್ನ ಚರಿತ್ರೆ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಅವರಿಗೆ ಸರಿಯಾಗಿ ತಿಳಿದಿಲ್ಲ. ನಮ್ಮದು ಸ್ವಾತಂತ್ರ್ಯ ಹೋರಾಟ ಹಿನ್ನೆಲೆಯ ಕುಟುಂಬ. ನಿಮ್ಮ ಮಾವ ಮುನಿಶಾಮಿಗೌಡ ಗರಡಿಯಲ್ಲಿ ಪಳಗಿದವನು ಎಂದು ಕೋಲಾರ ಮೀಸಲು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರು ಹೇಳಿದರು.
ಅಂಬಾಜಿದುರ್ಗ ಹೋಬಳಿ ಕೋಟಗಲ್ ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನಮ್ಮ ಮೇಲೆ ಆರೋಪ ಮಾಡುವರು ಇನ್ನೂ ಚಿಕ್ಕವರು. ನಾವು ಅವರ ಮಾತಿಗೆ ಹೇಳಿಕೆ ಕೊಟ್ಟರೆ. ನಾವು ಇನ್ನೂ ಚಿಕ್ಕವರು ಆಗುತ್ತೇವೆ' ಎಂದು ಲೇವಡಿ ಮಾಡಿದರು
ಸಮಾಜದ ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿ ನಾನು 2 ಬಾರಿ ಕೇಂದ್ರ ಸಚಿವರಾಗಿ ಕೆಲಸ ಮಾಡಿರುವುದು ಜನರಿಗೆ ಗೊತ್ತಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಜಾತಿ ರಾಜಕಾರಣ ಮಾಡಿಲ್ಲ. ಒಬ್ಬರ ಮೇಲೆ ಒಂದು ಅಟ್ರಾಸಿಟಿ ಕೇಸ್ ಹಾಕಿಲ್ಲ. ಎಲ್ಲ ವರ್ಗದ ಜನರ ಪ್ರೀತಿ ವಿಶ್ವಾಸವೇ ಈ ಬಾರಿಯೂ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳಿಸುವುದು ನಿಶ್ಚಿತ ಎಂದರು. ಮಂತ್ರಿಯಾಗಿ ಅನೇಕ ಜನಪರ ಕೆಲಸ ಮಾಡಿದ್ದೇನೆ. ಕೆ.ಆರ್.ಪುರಂನಿಂದ ನಂಗಲಿವರೆಗೂ 4 ಪಥ ರಸ್ತೆ,ಚಿಕ್ಕಳ್ಳಾಪುರದಿಂದ ಕೋಲಾರದವರೆಗೂ ರೇಲ್ವೆ ಬ್ರಾಡ್‌ಗೇಜ್, ನರಸಾಪುರ ಬಳಿ ಕೈಗಾರಿಕೆಗಳು ನನ್ನ ಅವಧಿಯಲ್ಲೇ ಆಗಿದ್ದು ಎಂದರು.
ಶ್ರೀರಾಮರೆಡ್ಡಿ, ಶಿವಾರೆಡ್ಡಿ, ಮಧುಸೀತಪ್ಪ, ವಾಣಿಕೃಷ್ಣಾರೆಡ್ಡಿ, ಮುದ್ದುಕೃಷ್ಣ ಯಾದವ್,  ರಾಯಲ್ ರಾಮಕೃಷ್ಣಾ ರೆಡ್ಡಿ, ಆಂಜಿ, ಗ್ಯಾಸ್ ಶ್ರೀನಿವಾಸ್, ನಾಗರಾಜ್, ಪಾಲೇಪಲ್ಲಿ ಶಿವಾರೆಡ್ಡಿ, ಪಿ.ವಿ. ವೆಂಕಟರವಣಪ್ಪ, ರಾಮಣ್ಣ ಸೇರಿದಂತೆ ಇನ್ನೂ ಹಲವು ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement