ಮೋದಿ ಪ್ರಧಾನಿಯಾದ್ರೆ ರಾಷ್ಟ್ರ ಧ್ವಜ ಬದಲು: ವರ್ತೂರ್
ಕೋಲಾರ: ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ರಾಷ್ಟ್ರಧ್ವಜವನ್ನು ಬದಲಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.
ನಗರದ ವಿವಿಧ ಬಡಾವಣೆಗಳಲ್ಲಿ ಕಾಂಗ್ರೆಸ್ ಪರ ಮತಯಾಚಿಸಿ ಮಾತನಾಡಿದ ಅವರು, 125 ವರ್ಷಗಳ ಇತಿಹಾಸವಿರುವ ಕಾಂಗ್ರೆಸಿಗಿರುವುದು ಇರುವುದು ಅಸಲಿ ದೇಶ ಭಕ್ತಿಯೇ ಹೊರತು ನಕಲಿ ದೇಶ ಭಕ್ತಿಯಲ್ಲ ಎಂದರು.
ತ್ರಿವರ್ಣ ಧ್ವಜವನ್ನು ಅತ್ಯಂತ ಗೌರವದಿಂದ ಕಾಣುವ ನಮಗೆ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಏಕ ಬಣ್ಣದ ಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡುತ್ತಾರೆ. ಇದನ್ನು ಯಾಮೊಬ್ಬ ದೇಶಭಕ್ತಿಯಿರುವ ಭಾರತೀಯನು ಒಪ್ಪಲು ಸಾಧ್ಯವಿಲ್ಲ ಎಂದರು. ಇದೇ ವೇಳೆ, ಮುನಿಯಪ್ಪ ಅವರನ್ನು ಬೆಂಬಲಿಸುವಂತೆ ಕೋರಿದರು. ಬೆಗ್ಲಿ ಪ್ರಕಾಶ್, ಸೋಮಶೇಖರ್, ಮಂಜುನಾಥ್, ಜ್ಯೋತಿ, ಕಾಂತಮ್ಮ, ಡೆಕೋರೇಷನ್ ಕೃಷ್ಣ, ಕಿರಣ್, ಆನಂದ್ ಮತ್ತಿತರರು ಇದ್ದರು. ಕೋಲಾರ ತಾಲೂಕಿನ ಚಾಕಾರಸನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡರಾದ ಪಾಪಣ್ಣ, ಸಿ.ಎಂ.ಮಂಜುನಾಥ್, ಗಣೇಶ್, ಮುನೇಗೌಡ, ಮರಿಯಪ್ಪ, ಸಿ.ಎಂ.ಅಂಬರೀಶ್ ವರ್ತೂರ್ ಬಣಕ್ಕೆಸೇರ್ಪಡೆಯಾದರು.
ಮುನಿಯಪ್ಪ ಗೆಲವು ಖಚಿತ
ಕೆಜಿಎಫ್: ಬಿಜಿಎಂಎಲ್ ಚಿನ್ನದ ಗಣಿಗಳನ್ನು ಪುನರಾರಂಭಿಸಲು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರ ಸಾಧನೆ ಇದೆ ಎಂದು ಬಿ. ಮಾಣಿಕ್ಯಂ ಹೇಳಿದರು. ಪಾದೆಯಾತ್ರೆ ಮೂಲಕ ಪ್ರಚಾರ ನಡೆಸಿ ಮಾತನಾಡಿ, ಕ್ಷೇತ್ರದಲ್ಲಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಗೆಲವು ಸಾಧಿಸಲಿದ್ದಾರೆ ಎಂದರು. ಶಶಿಕಲಾ, ಓಂಕಾರಪ್ಪ, ಸಂಜೀವರಾಯಪ್ಪ, ತುಳಸಿ, ಕುಬೇರಪ್ಪ, ಮಂಜುನಾಥ್ ಇದ್ದರು.