ಕೋಮುವಾದಿ ಪಕ್ಷ ದೂರವಿಡಿ: ಮುನಿಯಪ್ಪ
ಬಂಗಾರಪೇಟೆ: ಈ ಚುನಾವಣೆ ಜ್ಯಾತ್ಯತೀತ ಮತ್ತು ಕೋಮುವಾದಿಗಳ ನಡುವೆ ನಡೆಯುವ ಧರ್ಮಯುದ್ಧ. ಯಾವುದೇ ಕಾರಣಕ್ಕೂ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ತರಬಾರದು ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಸಿರಹೀಂ ಕಾಂಪೌಂಡ್ ಬಡಾವಣೆಯಲ್ಲಿ ಭಾನುವಾರ ರಾತ್ರಿ ಮತಯಾಚನೆ ಮಾಡಿದ ಬಳಿಕ ಮಾತನಾಡಿದ ಅವರು, ಈ ಚುನಾವಣೆ ನನಗೆ ಕಳೆದ 6 ಚುನಾವಣೆಗಿಂತ ಹೆಚ್ಚಿನ ಪ್ರತಿಷ್ಠೆ. ಜಾತ್ಯತೀತ ಹೆಸರಲ್ಲಿರುವ ಜೆಡಿಎಸ್ ನನಗೆ ಲೆಕ್ಕಕ್ಕಿಲ್ಲ. ಎಂದರು. ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಮುಖಂಡರಾದ ಕೆ.ಚಂದ್ರಾರೆಡ್ಡಿ, ಶಂಷುದ್ದಿನ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜನಾಥ್, ಪುರಸಭೆ ಅಧ್ಯಕ್ಷ ಗಂಗಮ್ಮ, ಉಪಾಧ್ಯಕ್ಷ ರಮೇಶ್, ರಂಗರಾಮಯ್ಯ ಮತ್ತಿತರರು ಇದ್ದರು.