ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಜೆಡಿಎಸ್ ಗೆಲ್ಲಿಸಲು ಸರ್ವ ಪ್ರಯತ್ನ: ಶಾಸಕ ಕೃಷ್ಣಾರೆಡ್ಡಿ

Srinivasa Murthy VN
Updated On : 15 Apr 2014, 1:40 am

ಚಿಂತಾಮಣಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ
ಚಿಂತಾಮಣಿ: ಜೆಡಿಎಸ್ ಒಗ್ಗಟ್ಟಿಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಅಭ್ಯರ್ಥಿ ಕೇಶವ್ ಅವರನ್ನು ವಿಜಯಶೀಲರನ್ನಾಗಿ ಮಾಡಲು ಶ್ರಮಿಸುತ್ತೇನೆ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಎಂದು ಹೇಳಿದರು.
ನಗರದ ಆಜಾದ್ ಚೌಕ್ ವೃತ್ತದಲ್ಲಿ ತಾಲೂಕು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಜತೆ ಒಳ ಒಪ್ಪಂದ ಮಾಡಿಕೊಂಡು ಪಕ್ಷಕ್ಕೆ ದ್ರೋಹ ಬಗೆಯುವ ಜಾಯಮಾನ ನನ್ನದಲ್ಲ. ಶತಾಯ ಗತಾಯ ಕೇಶವ್ ಅವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಹೇಳಿದರು.
ಜೆಡಿಎಸ್ ಅಭ್ಯರ್ಥಿ ಕೇಶವ ಅವರು ಮಾತನಾಡಿ, ಮುನಿಯಪ್ಪ ದಲಿತರ ಮೂಲಭೂತ ಸಮಸ್ಯೆಗಳಿಗೆ ಆದ್ಯತೆ ನೀಡದೆ, ಪ್ರತಿ ತಾಲೂಕಿನಲ್ಲಿ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಕುತಂತ್ರ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಈ ಭಾಗದ ಜನತೆಯ ಧ್ವನಿಯಾದ ಶಾಶ್ವತ ನೀರಾವರಿ ಹೋರಾಟದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಕೋಟ್ಯಂತರ ರುಪಾಯಿ ಆಸ್ತಿ ಮಾಡಿರುವುದೇ ಅವರ ಅಭಿವೃದ್ಧಿ ಎಂದು ಆರೋಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಗರದ ಹೊರವಲಯದ ಕನಂಪಲ್ಲಿ ವೀರಾಂಜನೇಯ ದೇವಾಲಯದಿಂದ ತೆರೆದ ವಾಹನದಲ್ಲಿ ಅಭ್ಯರ್ಥಿ ಕೆ.ಕೇಶವ ಪರ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನಗರದ ಪ್ರಮುಖ ಬೀದಿಗಳಲ್ಲಿ ರೋಡ್ ಶೋ ನಡೆಸಿದರು. ಮುಖಂಡರಾದ ಟಿ.ಎನ್.ರಾಜಗೋಪಾಲ್, ಜಿಯಾವುಲ್ಲಾ ರೆಹಮಾನ್, ಆಯಿಷ ಸುಲ್ತಾನ, ಡಿ.ಸಾದಪ್ಪ, ಶ್ರೀನಿವಾಸರೆಡ್ಡಿ ಅಬ್ಬುಗುಂಡು, ವೆಂಕಟರವಣಪ್ಪ, ಶಫೀಕ್, ಮಂಜುನಾಥ್ ಸೇರಿ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement