ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಪರ ಸಿವಿಲ್ ಕೋರ್ಟ್ ಕಾರ್ಯಾರಂಭ

Srinivasa Murthy VN
Updated On : 16 Apr 2014, 2:00 am

ಬಂಗಾರಪೇಟೆ: ಕಕ್ಷಿದಾರರಿಗೆ ಶೀಘ್ರ ನ್ಯಾಯ ಕೊಡಿಸುವ ಉದ್ದೇಶದಿಂದ ಹೆಚ್ಚುವರಿ ನ್ಯಾಯಾಲಯಗಳನ್ನು ರಾಜ್ಯ ಹೈಕೋರ್ಟ್ ಸ್ಥಾಪಿಸುತ್ತಿದೆ ಎಂದು  ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರೇಣುಕಾಪ್ರಸಾದ್ ಹೇಳಿದರು.
ಪಟ್ಟಣದ ಜೆಎಂಎಫ್‌ಸಿ ಆವರಣದಲ್ಲಿ ನೂತನ ಅಪರ ಸಿವಿಲ್ ಕೋರ್ಟ್ ಉದ್ಘಾಟಿಸಿ ಮಾತನಾಡಿದ ಅವರು,ಬಂಗಾರಪೇಟೆಯ ನ್ಯಾಯಾಲಯದಲ್ಲಿ 4 ಸಾವಿರಕ್ಕೂ ಹೆಚ್ಚುಪ್ರಕರಣಗಳು ಬಾಕಿ ಇದ್ದು, ಇದರಿಂದ ಕಕ್ಷಿದಾರರಿಗೂ ಹಾಗೂ ವಕೀಲರಿಗೂ ಭಾರಿ ತೊಂದರೆಯಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮತ್ತೊಂದು ನ್ಯಾಯಾಲಯ ಸ್ಥಾಪಿಸಲು ಅನುಮತಿ ನೀಡಿದ್ದು, ಅದಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಇಲ್ಲಿನ ನ್ಯಾಯಾಲಯಕ್ಕೆ ಸ್ವಂತ ಕಟ್ಟಡವಿಲ್ಲದೆ ಅವ್ಯವಸ್ಥೆಯಲ್ಲಿದ್ದು, ಆಗಸ್ಟ್‌ನಲ್ಲಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಗುವುದು ಎಂದೂ ತಿಳಿಸಿದರು.
ಹಿರಿಯ ವಕೀಲ ನಂಜುಂಡಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ನೂತನ ನ್ಯಾಯಾಲಯ ಉದ್ಘಾಟನೆಯಾಗುತ್ತಿದ್ದಂತೆ ನೂತನ ನ್ಯಾಯಾಧೀಶರಾಗಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ ನ್ಯಾಯಾಧೀಶ ಸ್ಥಾನದಲ್ಲಿ ಕುಳಿತು ಅಪರ ಸಿವಿಲ್ ನ್ಯಾಯಾಲಯದ  ನ್ಯಾಯಾಧೀಶ ಮರಿಯಪ್ಪ ಪ್ರಕರಣಗಳನ್ನು ನೆಡಸಿಕೊಟ್ಟರು.
ಈ ಸಂದರ್ಭದಲ್ಲಿ ಜೆಎಂಎಫ್‌ಸಿ ನ್ಯಾಯಾಧೀಶರಾದ ಬಸವರಾಜ್, ಹಿರಿಯ ವಕೀಲರಾದ ಕುಸುಮಕೃಷ್ಣಮೂರ್ತಿ, ವಿ.ಬಿ.ಪ್ರಸಾದ್, ನಂಜುಂಡಪ್ಪ, ವೇಣುಗೋಪಾಲ್, ರಾಜ ಗೋಪಾಲ್ ಸೇರಿದಂತೆ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement