ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್ನಲ್ಲಿ ಶೇ. 63 ಮತ

Srinivasa Murthy VN
Updated On : 18 Apr 2014, 1:16 am

ಕೆಜಿಎಫ್: ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಶೇ.63.24ಷ್ಟು ಮತದಾನವಾಗಿದೆ.
 ಕಳೆದ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರದಲ್ಲಿ ಶೇ.57 ಮತದಾನವಾಗಿತ್ತು. ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರರಂಭವಾಗುತ್ತಿದ್ದಂತೆ ಕೆಲವು ಮತಗಟ್ಟೆಗಳಲ್ಲಿ ಮತ ಯಂತ್ರಗಳ ತಾಂತ್ರಿಕ ದೋಷ ಕಂಡುಬಂದಿದ್ದರೂ ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ಕೆಜಿಎಫ್ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲಾ ಮತಗಟ್ಟೆಯಲ್ಲಿ ನಿರಸವಾಗಿತ್ತು. ನಂತರ ಸಂಜೆಯಾಗುತ್ತಿದ್ದಂತೆ ಮತದಾನ ಬಿರುಸಿನಿಂದ ಸಾಗಿತ್ತು.
ಮತದಾರರ ಪಟ್ಟಿಯಲ್ಲಿ ಲೋಪ ದೋಷಗಳು ಎಲ್ಲೆಲ್ಲೂ ಎದ್ದುಕಾಣುತ್ತಿತ್ತು ಜನರಲ್ಲಿ ಆಕ್ರೋಶ ಮೂಡಿತ್ತು, ಮತದಾರರ ಪಟ್ಟಿ ಸಮೀಕ್ಷೆಯ ಸಮಯದಲ್ಲಿ ಹಲವರ ಹೆಸರು ಸೇರ್ಪಡೆ, ತಿರಸ್ಕೃತ ನಡೆದಂತಹ ಸಂದರ್ಭದಲ್ಲಿ ಹಾಲಿ ಇರುವವರ ಹೆಸರನ್ನು ಬಿಟ್ಟು ಇಲ್ಲದವರ ಹೆಸರನ್ನು ಪಟ್ಟಿಯಲ್ಲಿ ಮುಂದುವರೆಸಿರುವುದರ ಬಗ್ಗೆ ಹಲವೆಡೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಗುರುತಿನ ಟೀಚಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸಲು ಬಿಟ್ಟಿರುವುದರ ಬಗ್ಗೆ ಹಲವು ಆರೋಪಗಳು ಮತದಾರರಿಂದ ಕೇಳಿ ಬಂತು.
ಕೆಜಿಎಫ್ನಿಂದ ಬೆಂಗಳೂರಿಗೆ ದಿನನಿತ್ಯ ಪ್ರಯಾಣ ಮಾಡುವ ದಿನಕೂಲಿ ಕಾರ್ಮಿಕರು ಎಂದಿನಂತೆ ಗುರುವಾರ ಕೆಲಸಗಳಿಗೆ ತೆರಲದಿದ್ದರೂ ಮೂರು ದಿನಗಳ ಕಾಲ ರಜೆಯಿದ್ದ ಕಾರಣ ಹಲವರು ಹೊರ ಊರುಗಳಿಗೆ ತೆರಳಿದ್ದರು. ಬೆಮೆಲ್ನಗರ ಪ್ರದೇಶಗಳಲ್ಲಿ ಸಹ ಮತದಾನಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮತದಾನ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದ ಮತಗಟ್ಟೆಗಳಲ್ಲಿ ಎಸ್ಪಿ ಅಜಯಹಿಲೋರಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಚುನಾವಣಾ ಅಧಿಕಾರಿಗಳ ಹಾಗೂ ಸಿಬ್ಬಂದಿ ತಂಡಗಳು ಎಲ್ಲಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು.
ಬೆಳಗ್ಗೆಯಿಂದ ಪ್ರಾರಂಭವಾದ ಮತದಾನದ ವೇಳೆ ನಗರದ ಮತ್ತು ಗ್ರಾಮೀಣ ಪ್ರದೇಶದ ಗಡಿಭಾಗದ ಕೆಲ ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರ ಮಾಡಿರುವುದಾಗಿ ಸುದ್ದಿ ಹರಡಿತ್ತು ಆದರೆ ಈ ಬಗ್ಗೆ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ ಕೇಳಿದಾಗ ಅಂತಹ ಸಂಭವಗಳು ಕೆಜಿಎಫ್ ಕ್ಷೇತ್ರದ ಯಾವುದೇ ಮತಗಟ್ಟೆಗಳಲ್ಲಿ ಕಂಡು ಬಂದಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement